“ತ್ರಿವಿಕ್ರಮ’ನ ಪ್ರೇಮೋತ್ಸವ
ಫೆ.14 ಪ್ರೇಮಿಗಳ ದಿನ. ಈ ಹಿನ್ನೆಲೆಯಲ್ಲಿ, ವಾರವಿಡೀ ಪ್ರೇಮೋತ್ಸವ ಆಚರಿಸಲು ತಯಾರಿ ನಡೆಸಿದೆ.
Team Udayavani, Feb 10, 2020, 2:06 PM IST
ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ “ತ್ರಿವಿಕ್ರಮ’ ಸಿನಿಮಾ ಆರಂಭದಿಂದಲೂ ಜೋರು ಸುದ್ದಿಯಾಗುತ್ತಿರುವುದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, ವಾರವಿಡೀ “ತ್ರಿವಿಕ್ರಮ’ ಪ್ರೇಮೋತ್ಸವದತ್ತ ಮುಖ ಮಾಡುತ್ತಿದ್ದಾನೆ.
ಹೌದು, “ತ್ರಿವಿಕ್ರಮ’ ಚಿತ್ರತಂಡ ಲವರ್ ಡೇಗೊಂದು ಸ್ಪೆಷಲ್ ಪ್ಲಾನ್ ಹಾಕಿಕೊಂಡಿದೆ. ಅದೇನೆಂದರೆ, ಫೆ.14 ಪ್ರೇಮಿಗಳ ದಿನ. ಈ ಹಿನ್ನೆಲೆಯಲ್ಲಿ, ವಾರವಿಡೀ ಪ್ರೇಮೋತ್ಸವ ಆಚರಿಸಲು ತಯಾರಿ ನಡೆಸಿದೆ. ಸಾಮಾನ್ಯವಾಗಿ ಫೆಬ್ರವರಿ 14 ಬಂದರೆ, ಯೂಥ್ಸ್ಗಂತೂ ಅದು ದೊಡ್ಡ ಹಬ್ಬ.
ಅಂದು ಅದೆಷ್ಟೋ ಹುಡುಗ, ಹುಡುಗಿಯರು ಖುಷಿಯಲ್ಲಿದ್ದರೆ, ಒಂದಷ್ಟು ಮಂದಿ ಬೇಸರದಲ್ಲಿರುತ್ತಾರೆ. ಲವರ್ಗೆ ಖುಷಿಯಾದರೆ, ಪ್ರೀತಿ ನಿವೇದನೆ ಮಾಡಿಕೊಳ್ಳುವ ಹುಡುಗ,
ಹುಡುಗಿಯರಿಗೆ ಕಾತರ. ಆದರೆ, “ತ್ರಿವಿಕ್ರಮ’ ಮಾತ್ರ, ಒಂದು ವಾರ ಮುನ್ನವೇ ಪ್ರೇಮಾಚರಣೆ ಶುರು ಮಾಡಿದ್ದಾನೆ. ಫೆ.7 ರಂದು ರೋಸ್ ಡೇ ಮಾಡಿಕೊಂಡರೆ, ಫೆ.8 ರಂದು ಪ್ರಪೋಸ್ ಡೇ ಮಾಡಿದ್ದಾನೆ. ಫೆ.9 ಚಾಕೋಲೇಟ್ ಡೇ, ಫೆ.10 ಟೆಡ್ಡಿ ಡೇ, ಫೆ.11 ಪ್ರಾಮೀಸ್ ಡೇ, ಫೆ.12 ಕಿಸ್ ಡೇ, ಫೆ.13 ಹಾಗೂ ಫೆ.14 ವ್ಯಾಲೆಂಟೈನ್ ಡೇ. ಈ ಮೂಲಕ ವಿಶೇಷವಾಗಿ ಪ್ರೇಮಿಗಳ ದಿನ ಆಚರಿಸಲು ಹೊರಟಿದ್ದಾನೆ.
ಸದ್ಯಕ್ಕೆ ಚಿತ್ರೀಕರಣದಲ್ಲಿರುವ “ತ್ರಿವಿಕ್ರಮ’ ತಂಡ, ಪ್ರತಿ ದಿನ ಒಂದೊಂದು ಪೋಸ್ಟರ್ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದೆ. ಪ್ರತಿಯೊಂದು ದಿನವೂ ವಿಭಿನ್ನವಾದ ಪೋಸ್ಟರ್ ಮೂಲಕ ಕಾಣಿಸಿಕೊಂಡು ಪ್ರೇಮೋತ್ಸವ ಆಚರಿಸಲು ತುದಿಗಾಲ ಮೇಲೆ ನಿಂತಿದ್ದಾನೆ.
ಅಂದಹಾಗೆ, ಈ “ತ್ರಿವಿಕ್ರಮ’ನ ಪೋಸ್ಟರ್ನಲ್ಲಿ ನಾಯಕ ವಿಕ್ರಮ್, ನಾಯಕಿ ಆಕಾಂಕ್ಷ ಶರ್ಮಾ ಹಾಗೂ ಹಾಸ್ಯನಟ ಚಿಕ್ಕಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಹಂತದಲ್ಲಿರೋ “ತ್ರಿವಿಕ್ರಮ’ ಚಿತ್ರಕ್ಕೆ ಸಹನಾ ಮೂರ್ತಿ ನಿರ್ದೇಶನ ಮಾಡಿದರೆ, ಸೋಮಣ್ಣ ಈ ಚಿತ್ರಕ್ಕೆ
ನಿರ್ಮಾಪಕರು. ಅರ್ಜುನ್ ಜನ್ಯ ಸಂಗೀತ ಹಾಗು ಸಂತೋಷ್ ರೇ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.