ವಿಜೃಂಭಣೆಯ ಕೋಟೆ ಮಲ್ಲೇಶ್ವರ ಬ್ರಹ್ಮರಥೋತ್ಸವ
Team Udayavani, Feb 10, 2020, 3:02 PM IST
ಬಳ್ಳಾರಿ: ಗಣಿನಗರಿ ಬಳ್ಳಾರಿ ಆರಾಧ್ಯ ದೈವ ಶ್ರೀಕೋಟೆ ಮಲ್ಲೇಶ್ವರ ವಾರ್ಷಿಕ ಜಾತ್ರಾ ಬ್ರಹ್ಮ ರಥೋತ್ಸವವು ಸಾವಿರಾರು ಜನರ ಭಕ್ತ ಸಮೂಹದ ನಡುವೆ ಅತ್ಯಂತ ವಿಜೃಂಭಣೆಯಿಂದ ಭಾನುವಾರ ಸಂಜೆ ನಡೆಯಿತು.
ನಗರದ ಕೋಟೆ ಪ್ರದೇಶದಲ್ಲಿರುವ ಮಲ್ಲೇಶ್ವರ ದೇವಸ್ಥಾನದಲ್ಲಿ ಕಳೆದ ಒಂದು ವಾರದಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಬ್ರಹ್ಮ ರಥೋತ್ಸವವಾದ ಭಾನುವಾರ ಬೆಳಗ್ಗೆ ಮಲ್ಲೇಶ್ವರಿಗೆ ವಿವಿಧ ಧಾರ್ಮಿಕ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ಬೆಳಗ್ಗೆ 10.45ಕ್ಕೆ ಗಂಟೆಗೆ ತೇರುಬೀದಿಯಲ್ಲಿನ ಮಡಿತೇರಿನೊಂದಿಗೆ ಬ್ರಹ್ಮ ರಥವನ್ನು ನಿಂತ ಸ್ಥಳದಿಂದ ಸ್ವಲ್ಪ ಮುಂದಕ್ಕೆ ಎಳೆಯಲಾಯಿತು. ನಂತರ ಸಂಜೆ 4 ಗಂಟೆ ಸುಮಾರಿಗೆ ಬ್ರಹ್ಮ ರಥವನ್ನು ತೇರುಬೀದಿಯಿಂದ ಸಮೀಪದ ಕಣೇಕಲ್ ಬಸ್ ನಿಲ್ದಾಣ ಬಳಿಯ ಗಣೇಶನ ದೇವಸ್ಥಾನದವರೆಗೆ ಎಳೆದೊಯ್ದು ಅಲ್ಲಿಂದ ಪುನಃ ಮೂಲ ಸ್ಥಾನಕ್ಕೆ ತರಲಾಯಿತು.
ಬ್ರಹ್ಮ ರಥೋತ್ಸವದಲ್ಲಿ ತಾಷಾರಾಮ್ ಡೋಲ್, ಡೊಳ್ಳು ಕುಣಿತ, ನಂದಿಕೋಲು ಕುಣಿತ ಸೇರಿದಂತೆ ಹಲವು ಕಲಾತಡಂಗಳು ಗಮನ ಸೆಳೆದವು. ರಥೋತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರು, ಬಾಳೆಹಣ್ಣನ್ನು ಅರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಈ ವೇಳೆ ಕೋಟೆ ಮಲ್ಲೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಮಾತನಾಡಿ, ಫೆ.7 ರಂದು ಮಾಘಶುದ್ಧ ನವಮಿಯಿಂದ ಬ್ರಹ್ಮರಥೋತ್ಸವದ ವಿಶೇಷ ಕಾರ್ಯಕ್ರಮಗಳು ಆರಂಭವಾಗುತ್ತವೆ. ಧ್ವಜಾರೋಹಣ, ಕಂಕಣಧಾರಣ, ಕಲ್ಯಾಣ ಉತ್ಸವ ಹೀಗೆ ಒಂದೊಂದು ದಿನ ಒಂದೊಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನಿನ್ನೆ ಕಲ್ಯಾಣ ಉತ್ಸವ ನಡೆದಿದ್ದು, ಫೆ. 9ರಂದು ಬೆಳಗ್ಗೆ 10.45ಕ್ಕೆ ಬ್ರಹ್ಮರಥೋತ್ಸವ ನಡೆಯಿತು. ಸಂಜೆ 4 ಗಂಟೆಗೆ ತೇರನ್ನು ಎಳೆಯಲಾಯಿತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.