ಅದಾಲತ್: 63 ಪ್ರಕರಣ ಇತ್ಯರ್ಥ
Team Udayavani, Feb 10, 2020, 3:28 PM IST
ಗೌರಿಬಿದನೂರು: ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ದಿಂದ ಲೋಕ ಅದಾಲತ್ ಆಯೋಜಿಸಲಾಗಿತ್ತು. ಹಿರಿಯ ಶ್ರೇಣಿ ನ್ಯಾಯಾಧೀಶೆ ರೇಣುಕಾ ದೇವದಾಸ್ ರಾಯ್ಕರ್ ಅದಾಲತ್ ನಡೆಸಿ ಕಕ್ಷಿದಾರರನ್ನು ಹಾಗೂ ದೂರುದಾರರನ್ನು ರಾಜಿ ಸಂಧಾನದ ಮೂಲಕ ಮನವೊಲಿಸಿ 63 ಪ್ರಕರಣ ಇತ್ಯರ್ಥಪಡಿಸಿ ಸುಮಾರು 1.15 ಕೋಟಿ ರೂ. ಹಣ ಇತ್ಯರ್ಥಪಡಿಸಲಾಯಿತು.
ಕಾನೂನು ಸೇವಾ ಪ್ರಾಧಿಕಾರ ಸಾರ್ವಜನಿಕ ಅನುಕೂಲಕ್ಕಾಗಿ ಲೋಕದಾಲತ್ ಆಯೋಜಿಸಿದ್ದು, ಇಲ್ಲಿ ಸ್ವಯಂ ಪ್ರೇರಿತರಾಗಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದು, ಕುಟುಂಬಕ್ಕೆ ಸಂಬಂಧಿಸಿದ ಗಂಡ-ಹೆಂಡತಿ ಜಗಳ, ಸಿವಿಲ್ ಪ್ರಕರಣ, ಬ್ಯಾಂಕ್ ಚೆಕ್ ಕೇಸ್, ಮೋಟಾರ್ ಪ್ರಕರಣ, ಅಪಘಾತ ಇನ್ನಿತರೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡು ಸಮಯ ಹಾಗೂ ಹಣ ಉಳಿಸಿ ಕೊಳ್ಳಬಹುದು ಎಂದು ತಿಳಿಸಿದರು.
ಇತ್ಯರ್ಥವಾದ ಪ್ರಕರಣದ ವಿವರ: ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ 23ಕ್ಕೂ ಹೆಚ್ಚು ಪ್ರಕರಣದಲ್ಲಿ 83 ಲಕ್ಷ ರೂ., ಸಿವಿಲ್ ನ್ಯಾಯಾಲಯದಲ್ಲಿ 17 ಪ್ರಕರಣಲ್ಲಿ 11.80 ಲಕ್ಷ ರೂ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿನ 21 ಪ್ರಕರಣದಲ್ಲಿ19.21 ಲಕ್ಷ ಇತ್ಯರ್ಥಪಡಿಸಲಾಯಿತು. ಅದಾಲತ್‌ನಲ್ಲಿ ಸಿವಿಲ್ ನ್ಯಾಯಾಧೀಶೆ ಪವಿತ್ರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಿ.ಪುಟ್ಟರಾಜು, ವಕೀಲರ ಸಂಘದ ಅಧ್ಯಕ್ಷ ವಿ.ಸಿ.ಗಂಗಯ್ಯ, ಕಾರ್ಯದರ್ಶಿ ಬಿ.ಲಿಂಗಪ್ಪ, ರಾಮಚಂದ್ರ, ಗೋಪಾಲ್, ಮುನಿಶ್ಯಾಮ್‌ರೆಡ್ಡಿ, ದಿನೇಶ್, ಜೆ.ಕೆ. ಗಂಗಧಾರ್, ಕೋರ್ಟು ಸಿಬ್ಬಂದಿಗಳಾದ ನರಸಿಂಹಮೂರ್ತಿ, ಸಂಧ್ಯಾ ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.