![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 10, 2020, 3:49 PM IST
ಕಲಬುರಗಿ: ಸಮ್ಮೇಳನ ಯಶಸ್ವಿ ಕುರಿತು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಲಬುರಗಿ: ಮೂರು ದಿನಗಳ ಕಾಲ ನಡೆದ 85ನೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅನೇಕ ವಿಧದಲ್ಲಿ ಇತಿಹಾಸ ನಿರ್ಮಿಸಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ತಿಳಿಸಿದರು.
ರವಿವಾರ ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಅಂದಾಜು 5ರಿಂದ-6 ಲಕ್ಷ ಜನ ಬಂದಿರುವುದು, 22 ಸಾವಿರ ಪ್ರತಿನಿಧಿಗಳಾಗಿರುವುದು, ನಿರೀಕ್ಷೆ ಮೀರಿದ ಪುಸ್ತಕ ವಹಿವಾಟು, ಎಲ್ಲೂ ಒಂದು ಅನಪೇಕ್ಷಿತ ಘಟನೆ ನಡೆಯದಿರುವುದು, ಯಾರಿಗೂ ಊಟದ ಕೊರೆತೆಯಾಗದಂತೆ ಸಮ್ಮೇಳನ ನಡೆದಿರುವುದು ದಾಖಲೆಯಾಗಿದೆ ಎಂದು ವಿವರಣೆ ನೀಡಿದರು.
ಸಮ್ಮೇಳನ ಯಶಸ್ವಿ ಯಲ್ಲಿ ಶಾಸಕ-ಜನಪ್ರತಿನಿಧಿಗಳ ನೇತೃತ್ವ ಹಾಗೂ ಅಧಿಕಾರಿಗಳನ್ನು ಒಳಗೊಂಡ ಕಾರ್ಯಾಧ್ಯಕ್ಷರು, ಇತರೆ ಅಧಿಕಾರಿಗಳ ತಂಡ ಶ್ರಮವಹಿಸಿರುವುದು, ಅದರಲ್ಲೂ ದಕ್ಷ, ದೂರದೃಷ್ಟಿಯುಳ್ಳ ಹಾಗೂ ಹಗಲಿರಳು ಶ್ರಮಿಸಿದ ಜಿಲ್ಲಾಧಿಕಾರಿ ಶರತ್ ಬಿ. ಅವರ ಜತೆಗೆ, ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿಗೆ ಹೆಚ್ಚಿನ ಸಲ ಬಾರದೇ ಇದ್ದರೂ ದಿನನಿತ್ಯ ಸಿದ್ಧತೆಗಳ ವಿವರಣೆ ಕೇಳಿ, ಮಾರ್ಗದರ್ಶನ ನೀಡಿರುವುದು ಸಮ್ಮೇಳನ ಯಶಸ್ವಿ ಗೆ ಕಾರಣಗಳಾಗಿವೆ ಎಂದು ಹೇಳಿದರು.
ತಾವು ಒಂಭತ್ತು ಸಮ್ಮೇಳನದಲ್ಲಿ ಭಾಗವಹಿಸಿ ಎಲ್ಲವನ್ನು ನೋಡಿದ್ದೇವೆ. ಆದರೆ ಕಲಬುರಗಿ ಸಮ್ಮೇಳನ ಎಲ್ಲದರಲ್ಲೂ ಒಂದೆರಡು ಹೆಜ್ಜೆ ಮುಂದಿದೆ. ಹೀಗಾಗಿ ಎಲ್ಲರಿಗೂ ಶಿರಸಾಷ್ಟಾಂಗ ನಮಸ್ಕಾರ ಸಲ್ಲಿಸುವೆ ಎಂದರು.
ಕಸಾಪ ಗೌರವ ಕಾಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ನಾಗರಹಳ್ಳಿ, ಖಜಾಂಚಿ ದೌಲತರಾವ್ ಮಾಲಿಪಾಟೀಲ ಹಾಗೂ ಪದಾಧಿಕಾರಿಗಳಾದ ಸೂರ್ಯಕಾಂತ ಪಾಟೀಲ, ಲಿಂಗರಾಜ ಸಿರಗಾಪುರ, ಆನಂದ ನಂದೂರಕರ್, ವಿಶ್ವನಾಥ ಭಕರೆ, ವೀರಸಂಗಪ್ಪ, ಪ್ರೇಮಕುಮಾರ, ರಮೇಶ ಕಡಾಳೆ, ಚಂದ್ರಶೇಖರ ಮತ್ತಿತರರಿದ್ದರು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.