ಉಸಿರಾಟದ ಸಮಸ್ಯೆಗೆ ಯೋಗ, ಪ್ರಾಣಾಯಾಮ ಸಹಕಾರಿ
Team Udayavani, Feb 11, 2020, 5:17 AM IST
ಯಾವುದೇ ವ್ಯಕ್ತಿಯೇ ಆದರೂ ಎಲ್ಲದಕ್ಕಿಂತ ಆರೋಗ್ಯ ಬಹಳ ಮುಖ್ಯ. ವಾತಾವರಣದ ಬದಲಾವಣೆ, ಹೊರಗಿನ ಧೂಳು, ಹಗಲೆಲ್ಲಾ ವಾಹನದ ಹೊಗೆ, ಹಾನಿಕಾರಕ ವಿಷಾನಿಲಗಳು ಬೆರೆತ ಗಾಳಿ ಅಥವಾ ತಂಪು ಪಾನೀಯಗಳನ್ನು ಸೇವಿಸಿದಾಗ ಉಸಿರಾಟದ ಸಮಸ್ಯೆ, ಶೀತ, ಕೆಮ್ಮು, ಎದೆ ಉರಿ, ಬೆನ್ನು ನೋವು ಮುಂತಾದ ಆರೋಗ್ಯದ ಸಮಸ್ಸೆಗಳಿಗೆ ಇಂಗ್ಲಿಷ್ ಔಷಧಿಗಳಿಗಿಂತ ಯೋಗ, ಪ್ರಾಣಾಯಾಮದ ಕೆಲವು ವಿಧಗಳಿಂದ, ಮುದ್ರೆಗಳಿಂದಾಗಿ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗುತ್ತದೆ. ಇವುಗಳನ್ನು ದಿನನಿತ್ಯ ಅಭ್ಯಾಸ ಮಾಡಿದರೆ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.
ಪ್ರಾಣಾಯಾಮ
ಶ್ವಾಸಕೋಶಕ್ಕೆ ಸಂಬಂಧಪಟ್ಟ ಉಸಿರಾಟ ಮುಂತಾದ ಸಮಸ್ಯೆಗಳಿಗೆ ಪ್ರಾಣಾಯಾಮ ರಾಮಬಾಣ. ಅಲ್ಲದೇ ಇದು ಸರ್ವ ರೋಗಗಳಿಗೆ ದಿವ್ಯ ಔಷಧವಾಗಿದೆ. ದಿನನಿತ್ಯ ಬೆಳಗ್ಗೆ ಎದ್ದ ತತ್‌ಕ್ಷಣ ಮತ್ತು ಸಂಜೆ ಹೊತ್ತು ಕೆಲವು ನಿಮಿಷ ಪ್ರಾಣಾಯಾಮ ಮಾಡಿದರೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ ಪ್ರಾಣಾಯಾಮವು ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಾಧನೆಗೆ ಸಹಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.ಯೋಗಾಸನಗಳು ಉಸಿರಾಟ ಸರಾಗವಾಗಿರಲು ಆಮ್ಲಜನಕ ಅಗತ್ಯವಾಗಿದೆ. ಶಶಾಂಕಾಸನ ಅಲರ್ಜಿ ಶೀತವನ್ನು ನಿಯಂತ್ರಿಸುತ್ತದೆ. ಮತ್ತು ಇದರಿಂದ ಸಮರ್ಪಕವಾದ ಆಮ್ಲಜನಕ ದೇಹಕ್ಕೆ ದೊರಕುತ್ತದೆ. ಇದಲ್ಲದೆ ಈ ಕೆಲವು ಯೋಗಾಸನಗಳಿಂದ ಉಸಿರಾಟದ ಸಮಸ್ಯೆಗೆ ಬಹು ಬೇಗನೆ ಪರಿಹಾರ ಕಂಡುಕೊಳ್ಳುವ ಮೂಲಕ ಶಾಶ್ವತವಾಗಿ ಸಮಸ್ಯೆಗಳಿಂದ ಮುಕ್ತವಾಗಬಹುದು. ಉತ್ಥಾನಾಸನ, ಅರ್ಧ ಉಷ್ಟ್ರಾಸನ, ಸೇತುಬಂಧ, ಮತ್ಸಾಸನ, ಹಲಾಸನ, ಅಧೋಮುಖ ಶ್ವಾನಾಸನ ಮುಂತಾದವು ನಿಮ್ಮ ಆರೋಗ್ಯ ಕಾಪಾಡಲು ಹೆಚ್ಚು ಸಹಕರಿಸಬಲ್ಲವು.
ಧ್ಯಾನ ಮುದ್ರೆಗಳು
ಸೂರ್ಯಮುದ್ರೆ, ಶಂಖಮುದ್ರೆ ಮತ್ತು ಪ್ರಾಮುದ್ರೆ. ಈ ಮುದ್ರೆಗಳನ್ನು ದಿನನಿತ್ಯ 10ರಿಂದ 20ನಿಮಿಷ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಮತ್ತು ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
ಇವುಗಳಿಂದ ಆಗುವ ಲಾಭಗಳು
ಉಸಿರಾಟ ತೋದರೆ ನಿವಾರಣೆ. ರಕ್ತಶುದ್ಧಿ, ರಕ್ತ ಪರಿಚಲನೆ, ಏಕಾಗ್ರತೆ ನೆನಪಿನ ಶಕ್ತಿಹೆಚ್ಚಾಗುತ್ತದೆ. ರಕ್ತದ ಮೂಲಕ ಮೆದುಳಿಗೆ ಹೆಚ್ಚಿನ ಆಮ್ಲಜನಕ ದೊರೆಯುತ್ತದೆ. ಅಗತ್ಯ ಆಮ್ಲಜನಕ ದೊರೆಯವುದರಿಂದ ಮೆದುಳಿಗೆ ಒತ್ತಡ ಕಡಿಮೆಯಾಗಿ ವಿಶ್ರಾಂತಿ ಲಭಿಸುತ್ತದೆ. ಶ್ವಾಸಕೋಶ ತೊಂದರೆ, ಶ್ವಾಸ ಸಂಬಂಧಿತ ಕಾಯಿಲೆಗಳಾದ ಉಬ್ಬಸ, ಅಸ್ತಮಾ ನಿವಾರಣೆ. ಅಶಕ್ತತೆ ನಿವಾರಿಸಿ ದೇಹಕ್ಕೆ ಚೈತನ್ಯ ದೊರೆಯುತ್ತದೆ. ಮೆದುಳಿನ ಕಾರ್ಯ ಚುರುಕಾಗುತ್ತದೆ.
- ಶಿವಾನಂದ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.