ಶೀಘ್ರದಲ್ಲಿ 1 ರೂ ಮುಖಬೆಲೆಯ ಹೊಸ ನೋಟು
Team Udayavani, Feb 11, 2020, 6:38 AM IST
ಬಾಲ್ಯದಲ್ಲಿ ಸಂಗ್ರಹಿಸಿಡುತ್ತಿದ್ದ 1 ರೂ. ಮುಖಬೆಲೆಯ ನೋಟುಗಳನ್ನು ಹೊಸದಾಗಿ ಮುದ್ರಿಸಲು ಕೇಂದ್ರ ಸರಕಾರ ಮುಂದಾಗಿದೆ. ಆಕರ್ಷಕವಾ ಗಿರುವ ನೂತನ 1 ರೂಪಾಯಿ ನೋಟುಗಳು ಈ ತಿಂಗಳಲ್ಲಿ ಅಥವ ಮುಂದಿನ ತಿಂಗಳ ಆರಂಭದಲ್ಲಿ ಕೈಗೆ ಸಿಗಲಿವೆ. ಹೇಗಿರಲಿದೆ ಇದರ ವಿನ್ಯಾಸ? ಇಲ್ಲಿದೆ ಮಾಹಿತಿ.
ಯಾರು ಮುದ್ರಿಸುತ್ತಾರೆ ?
ಈ ಒಂದು ರೂ. ಮುಖ ಬೆಲೆಯ ನೋಟುಗಳನ್ನು ಮುದ್ರಿಸುವುದು ಆರ್‌ಬಿಐಯ ಜವಾಬ್ದಾರಿ ಅಲ್ಲ. ಕೇಂದ್ರ ಸರಕಾರದ ವಿತ್ತ ಸಚಿವಾಲಯ ಈ ನೋಟುಗಳನ್ನು ಮುದ್ರಿಸುತ್ತದೆ. ಆರ್‌ಬಿಐ 1 ರೂ. ಮುಖ ಬೆಲೆಯ ನೋಟುಗಳನ್ನು ಹೊರತುಪಡಿಸಿ ಉಳಿದೆಲ್ಲ ನೋಟುಗಳನ್ನು ಮುದ್ರಿಸುತ್ತದೆ. ಈ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆದಿರುತ್ತದೆ.
ಹೇಗಿರಲಿ ಕರೆನ್ಸಿ?
ನೂತನ 1 ರೂ. ಕರೆನ್ಸಿಯ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬದಲು ಗವರ್ನ್ಮೆಂಟ್ ಆಫ್ ಇಂಡಿಯಾ ಎಂದು ಬರೆದಿರಲಿದೆ. ಅದರ ಮೇಲೆ ಹಿಂದಿಯಲ್ಲಿ ಭಾರತ ಸರಕಾರ ಎಂದು ಮುದ್ರಣವಾಗಿರಲಿದೆ.
ವೈಶಿಷ್ಟéಷತೆ
– ಹೊಸ ನೋಟಿನಲ್ಲಿ ಆರ್‌ಬಿಐ ಗವರ್ನರ ಸಹಿ ಬದಲು ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಟಾನು ಚಕ್ರಬೋರ್ತಿ ಅವರ ಸಹಿ ಇರಲಿದೆ.
– ಇದರಲ್ಲಿ ಒಂದು ರೂ. ನಾಣ್ಯವನ್ನು ಹೋಲುವ ಚಿತ್ರವನ್ನು ಮುದ್ರಿಸಲಾಗಿದೆ. ಮಾತ್ರವಲ್ಲದೆ ಅದರಲ್ಲಿ ಸತ್ಯಮೇವ ಜಯತೆ ಎಂಬ ವಾಕ್ಯವನ್ನು ಸೇರಿಸಲಾಗಿದೆ.
– ಈ ಹಿಂದಿನ ನೋಟಿನಲ್ಲಿ ಇದ್ದ ಹಾಗೆ ಬೆಳೆಗಳ ಚಿತ್ರವನ್ನು ಮುದ್ರಿಸಲಾಗಿದೆ. ಈ ದೇಶದಲ್ಲಿ ಕೃಷಿಯ ಮಹತ್ವವನ್ನು ವಿವರಿಸುತ್ತದೆ. ನೋಟಿನ ಇನ್ನೊಂದು ಬದಿಯ ಸುತ್ತಮುತ್ತಲಿನ ವಿನ್ಯಾಸವು “ಸಾಗರ್ ಸಾಮ್ರಾಟ್’ ತೈಲ ಪರಿಶೋಧನ ವೇದಿಕೆಯ ಚಿತ್ರವನ್ನು ಒಳಗೊಂಡಿರುತ್ತದೆ.
– ಈ ಪುಟ್ಟ ನೋಟಿನಲ್ಲಿ ಹಲವು ವಾಟರ್ ಮಾರ್ಕ್‌ಗಳಿರಲಿವೆ. ಅಶೋಕ ಸ್ತಂಭವೂ ಇರಲಿದೆ. ಇನ್ನು ವಾಟರ್ ಮಾರ್ಕ್ ರೂಪದಲ್ಲಿ “1 ರೂ.’ ಎಂದು ಬರೆಯಲಾಗಿದೆ. ಜತೆಗೆ “ಭಾರತ್’ ಎಂದು ಬಲ ಬದಿಯಲ್ಲಿ ಲಂಬವಾಗಿ ಬರೆಯಲಾಗಿದೆ.
ಆಯತಾಕಾರ
ಹೊಸ ನೋಟು 9.7ಗಿ6.3 ಸೆಂ.ಮೀ. ನ ಆಯತಾಕಾರದಲ್ಲಿರಲಿದೆ. “ಪಿಂಕ್ ಗ್ರೀನ್’ ಬಣ್ಣವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇದು ಶೇ. 100ರಷ್ಟು ಹತ್ತಿ ಉಪಯೋಗಿಸಿ ಈ ನೋಟನ್ನು ಮುದ್ರಿಸಲಾಗಿದೆ. ಮಾತ್ರವಲ್ಲದೆ 110 ಮೈಕ್ರೊನ್ ತೆಳುವಾಗಿದ್ದು, 90 ಜಿ.ಎಸ್.ಎಂ. ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.