ಕೇರಳ ವಿದ್ಯಾರ್ಥಿನಿ ಕೊರೊನಾ ಮುಕ್ತ
Team Udayavani, Feb 11, 2020, 7:00 AM IST
ಸಾಂದರ್ಭಿಕ ಚಿತ್ರ
ತೃಶ್ಶೂರ್/ಬೀಜಿಂಗ್: ಇಡೀ ಜಗತ್ತೇ ಕೊರೊನಾ ವೈರಸ್‌ನ ಆತಂಕದಲ್ಲಿರುವ ಹೊತ್ತಲ್ಲೇ ಕೇರಳದಿಂದ ಸಮಾಧಾನಕರ ಸುದ್ದಿ ಯೊಂದು ಬಂದಿದೆ. ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದ್ದ ತೃಶ್ಶೂರ್‌ನ ಯುವತಿ ಈಗ ಸೋಂಕಿನಿಂದ ಮುಕ್ತಗೊಂಡಿರುವುದಾಗಿ ಕೇರಳ ಆರೋಗ್ಯ ಇಲಾಖೆ ಸೋಮವಾರ ಘೋಷಿ ಸಿದೆ. ಈ ಮೂಲಕ ಎಲ್ಲರೂ ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ವುಹಾನ್‌ನಿಂದ ಹುಟ್ಟೂರಿಗೆ ಆಗಮಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿಗೆ ಸೋಂಕು ತಗುಲಿರುವುದು ಇತ್ತೀಚೆಗೆ ದೃಢ ಪಟ್ಟಿತ್ತು. ಇದು ದೇಶದ ಮೊದಲ ಕೊರೊನಾ ಪ್ರಕರಣವಾಗಿತ್ತು. ಅದಾದ ಬಳಿಕ ಮತ್ತಿಬ್ಬರಿಗೆ ಕೊರೊನಾ ತಗುಲಿತ್ತು.
ಸದ್ಯಕ್ಕೆ ವಿದ್ಯಾರ್ಥಿನಿ ಆಸ್ಪತ್ರೆಯಲ್ಲೇ ಇದ್ದು, ಆಕೆಯ ರಕ್ತದ ಮಾದರಿಯ ವರದಿ “ನೆಗೆಟಿವ್’ ಎಂದು ಬಂದಿದೆ. ಹೀಗಾಗಿ ಆಕೆ ಸೋಂಕಿನಿಂದ ಮುಕ್ತಗೊಂಡಿರುವುದು ಸಾಬೀತಾಗಿದೆ. ಪುಣೆಯಲ್ಲಿನ ಪ್ರಯೋಗಾಲಯಕ್ಕೂ ರಕ್ತದ ಮಾದರಿ ಕಳುಹಿಸಿದ್ದೇವೆ. ಅದರ ವರದಿಗಾಗಿ ಕಾಯುತ್ತಿದ್ದೇವೆ. ವಿದ್ಯಾರ್ಥಿಯ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಸೋಂಕು ತಗುಲಿರುವ ಇನ್ನೂ ಇಬ್ಬರು ವಿದ್ಯಾರ್ಥಿಗಳು ಅಲಪ್ಪುಳ ಮತ್ತು ಕಾಸರಗೋಡು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 34 ಮಂದಿ ಯಲ್ಲಿ ರೋಗಲಕ್ಷಣ ಕಾಣಿಸಿ ಕೊಂಡಿದ್ದು, ಪ್ರತ್ಯೇಕ ವಾರ್ಡ್‌ಗಳಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರ ಮೇಲೆ ನಿಗಾ ಇರಿಸಲಾಗಿದೆ.
ನೌಕೆಯಲ್ಲಿರುವ 65 ಮಂದಿಗೆ ಸೋಂಕು
ಇನ್ನೊಂದೆಡೆ ಚೀನದ ವುಹಾನ್‌ನಿಂದ ಜಪಾನ್‌ಗೆ ಆಗಮಿಸಿರುವ ಡೈಮಂಡ್ ಪ್ರಿನ್ಸೆಸ್ ನೌಕೆಯಲ್ಲಿ ಮತ್ತೆ 65 ಮಂದಿಗೆ ಸೋಂಕು ತಗುಲಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಮೂಲಕ ಹಡಗಿನಲ್ಲಿರುವ 3,700 ಜನರ ಪೈಕಿ 135 ಮಂದಿ ಕೊರೊನಾದಿಂದ ಬಳಲುತ್ತಿರುವುದು ದೃಢಪಟ್ಟಿದೆ.
“ಮೋದಿಜೀ ನಮ್ಮನ್ನು ರಕ್ಷಿಸಿ’
ನೌಕೆಯಲ್ಲಿ ಪ್ರಾಣಭೀತಿ ಎದು ರಿಸುತ್ತಿರುವ ಭಾರತೀಯರು ಎಸ್‌ಒಎಸ್ ಸಂದೇಶ ರವಾನಿಸಿದ್ದು, ಪ್ರಧಾನಿ ಮೋದಿಯವರೇ, “ದಯವಿಟ್ಟು ನಮ್ಮನ್ನು ರಕ್ಷಿಸಿ’ ಎಂದು ಅಲವತ್ತು ಕೊಂಡಿ ದ್ದಾರೆ. ಪಶ್ಚಿಮ ಬಂಗಾಲದ ಬಾಣಸಿಗ ವಿನಯ್ ಕುಮಾರ್ ಸರ್ಕಾರ್ ಅವರು ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ನಮಗೆ ಕೊರೊನಾ ವೈರಸ್ ತಗುಲಿದೆಯೇ ಎಂಬ ಪರೀಕ್ಷೆಯನ್ನೂ ಮಾಡಿಲ್ಲ. ದಯವಿಟ್ಟು, ನಾವು ಮನೆ ತಲುಪುವಂತೆ ಕ್ರಮ ಕೈಗೊಳ್ಳಿ’ ಎಂದು ಕೈಮುಗಿದು ಕೋರಿ ಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.