ರಮೇಶ ವರ್ಗಾವಣೆ ತಡೆಹಿಡಿಯಲು ಮನವಿ
Team Udayavani, Feb 11, 2020, 1:59 PM IST
ಹೊಸಪೇಟೆ: ಪೌರಾಯುಕ್ತ ರಮೇಶ್ ಹೊಸಪೇಟೆ ನಗರಸಭೆಗೆ ವರ್ಗಾವಣೆಯಾಗಿ ಬರುವುದನ್ನು ತಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಕಾರ್ಯಕರ್ತರು, ತಹಶೀಲ್ದಾರ್ ಎಚ್. ವಿಶ್ವನಾಥ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಹಿಂದೆ ಹೊಸಪೇಟೆ ನಗರಸಭೆಯಲ್ಲಿ ಪೌರಾಯುಕ್ತರಾಗಿದ್ದ ರಮೇಶ ಅವರ ಅಧಿಕಾರ ಅವಧಿಯಲ್ಲಿ ಫಾರಂ-3 ಪಡೆಯಲು ಸಾರ್ವಜನಿಕರು, ತಿಂಗಳುಗಟ್ಟಲೆ ಅಲೆದಾಡುತ್ತಿದ್ದರು. ಮತ್ತೆ ರಮೇಶ ಅವರು ಹೊಸಪೇಟೆ ನಗರಸಭೆಗೆ ವರ್ಗವಣೆಯಾಗಿ ಬರುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಅವರು ಪುನಃ ಹೊಸಪೇಟೆ ನಗರಸಭೆಗೆ ವರ್ಗಾವಣೆಯಾಗಿ ಬರುವುದು ಬೇಡ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಮಾಣಿಕ ಹಾಗೂ ನಿಷ್ಠಾವಂತ ಅಧಿಕಾರಿಗಳನ್ನು ಹೊಸಪೇಟೆ ನಗರಸಭೆಗೆ ಕರೆ ತರಬೇಕು ಎಂದು ಒತ್ತಾಯಿಸಿದರು. ಒಂದೊಮ್ಮೆ ನಿರ್ಲಕ್ಷ್ಯವಹಿಸಿದರೆ ಕರವೇ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ನಗರ ಘಟಕದ ಅಧ್ಯಕ್ಷ ಎಸ್.ಎಂ. ಜಾಫರ್, ಅಮೀರ್, ಬಸವರಾಜ, ಮಂಜುನಾಥ, ಗುಜ್ಜಲ ರಾಘವೇಂದ್ರ, ಭೀಮಣ್ಣ, ಬ್ಯಾಲಕುಂದಿ ರಮೇಶ, ಶಮಾ, ಸುಮಾ, ಚೆನ್ನಮ್ಮ, ಗಂಗಮ್ಮ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.