ಕಲೆ ಅಳಿಸುವ ಕಲೆ
Team Udayavani, Feb 12, 2020, 4:31 AM IST
ಹಾಲು ಒಡೆಯಲು ಒಂದು ಹನಿ ಹುಳಿ ಸಾಕು. ಹಾಗೆಯೇ, ಬಟ್ಟೆ ಹಾಳಾಗಲು ಒಂದು ಚಿಕ್ಕ ಕಲೆ ಸಾಕು. ಅದರಲ್ಲೂ ಹೊಸ ಬಟ್ಟೆ ಮೇಲೆ ಕಲೆ ಆಗಿಬಿಟ್ಟರಂತೂ, ಧರಿಸುವಂತಿಲ್ಲ, ಬಿಡುವಂತಿಲ್ಲ ಎಂದು ಪೇಚಾಡುವ ಪರಿಸ್ಥಿತಿ. ಕಠಿಣ ಕಲೆಯನ್ನು ಅಳಿಸುವುದು ಸವಾಲಿನ ಕೆಲಸವೇ. ಆ ಸವಾಲನ್ನು ಸ್ವಲ್ಪ ಸುಲಭ ಮಾಡುವಂಥ ಟಿಪ್ಸ್‌ಗಳು ಇಲ್ಲಿವೆ. ಯಾವ ಕಲೆಗೆ, ಯಾವುದು ರಾಮಬಾಣ ಅಂತ ನೋಡಿ…
-ಆಯಿಲ್ ಪೇಂಟ್, ಗ್ರೀಸ್
ಆಯಿಲ್ ಪೇಂಟ್ ಹತ್ತಿದ ಬಟ್ಟೆಯನ್ನು, ಸೀಮೆಎಣ್ಣೆಯಲ್ಲಿ ಒಂದು ಗಂಟೆ ನೆನೆಸಿಟ್ಟು, ಬಟ್ಟೆ ಸೋಪ್/ಪೌಡರ್‌ನಿಂದ ತೊಳೆದರೆ ಕಲೆ ಹೋಗುತ್ತದೆ.
-ಲಿಪ್‌ಸ್ಟಿಕ್
ಲಿಪ್‌ಸ್ಟಿಕ್ ಕಲೆಯ ಅಂಟಿರುವ ಜಾಗಕ್ಕೆ ಗ್ಲಿಸರಿನ್ ಹಚ್ಚಿ, ಕಲೆ ಸಂಪೂರ್ಣವಾಗಿ ಹೋಗುವವರೆಗೆ ಉಜ್ಜಿ, ನಂತರ ಸೋಪ್ ಹಾಕಿ ತೊಳೆಯಿರಿ.
-ರಕ್ತ
ಬಟ್ಟೆಯ ಮೇಲೆ ರಕ್ತ ಬಿದ್ದ ತಕ್ಷಣ, ಉಪ್ಪುನೀರಿನಿಂದ ತೊಳೆದರೆ ಕಲೆ ಉಳಿಯುವುದಿಲ್ಲ. ಇಲ್ಲದಿದ್ದರೆ, ಉಪ್ಪಿನ ನೀರಿನಲ್ಲಿ ಒಂದೆರಡು ಗಂಟೆ ನೆನೆಸಿಟ್ಟು, ನಂತರ ತೊಳೆದರೆ ಕಲೆ ಹೋಗುತ್ತದೆ.
-ಟೀ, ಕಾಫಿ
ಕಲೆ ಆಗಿರುವ ಜಾಗಕ್ಕೆ ಎತ್ತರದಿಂದ ಬಿಸಿ ನೀರನ್ನು ಚೆಲ್ಲಿ. ನಂತರ, ಬಿಸಿ ಸೋಪಿನ ನೀರಿನಲ್ಲಿ ತೊಳೆಯಬೇಕು.
-ಶಾಯಿಯ ಬಣ್ಣ
ಟೊಮೇಟೋ ತುಂಡಿನಿಂದ, ಕಲೆಯಿರುವ ಭಾಗವನ್ನು ಚೆನ್ನಾಗಿ ಉಜ್ಜಿ. ನಂತರ ಕಲೆಯ ಭಾಗಕ್ಕೆ ಉಪ್ಪು ಲೇಪಿಸಿ, ತಣ್ಣೀರಿನಲ್ಲಿ ತೊಳೆಯಿರಿ. ಕಲೆಯಿರುವ ಭಾಗವನ್ನು ಅರ್ಧ ಗಂಟೆ ಮೊಸರಿನಲ್ಲಿ ನೆನೆಸಿಟ್ಟು, ನಂತರ ತೊಳೆದರೂ ಸರಿಯೇ.
-ಎಲೆ ಅಡಿಕೆ ರಸ
ಬಟ್ಟೆಯ ಮೇಲೆ ಎಲೆ ಅಡಿಕೆ ರಸವೇನಾದರೂ ಬಿದ್ದಿದ್ದರೆ, ಆ ಜಾಗಕ್ಕೆ ಸೀಬೆಕಾಯಿ ರಸ ಹಚ್ಚಿ, ಚೆನ್ನಾಗಿ ಉಜ್ಜಿ ಆನಂತರ ತೊಳೆಯಬೇಕು.
-ಎಣ್ಣೆ
ಕಲೆಯಾಗಿರುವ ಭಾಗವನ್ನು ಹೀರಿಕೊಳ್ಳುವಂತೆ ಸೀಮೆ ಸುಣ್ಣ, ಫೇಸ್ ಪೌಡರ್, ಟಾಲ್ಕಮ್ ಪೌಡರ್‌ನಂಥ ವಸ್ತುಗಳಿಂದ ಪುಡಿಯನ್ನು ಹರಡಬೇಕು. ಕುದಿಯುವ ನೀರನ್ನು ಬಹಳ ಎತ್ತರದಿಂದ ಸುರಿದು ಸೋಪಿನಿಂದ ತೊಳೆಯಬೇಕು.
-ತುಕ್ಕು
ಲಿಂಬೆ ರಸ ಮತ್ತು ಉಪ್ಪನ್ನು ಬೆರೆಸಿದ ಮಿಶ್ರಣದಲ್ಲಿ ತುಕ್ಕಿನ ಕಲೆ ಇರುವ ಬಟ್ಟೆಯ ಭಾಗವನ್ನು ಸ್ವಲ್ಪ ಹೊತ್ತು ನೆನೆಸಿ, ನಂತರ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸಿ. ಇದೇ ರೀತಿ 2-3 ಸಾರಿ ಮಾಡಿದರೆ ಕಲೆ ಹೋಗುತ್ತದೆ.
-ಬಾಲ್ ಪಾಯಿಂಟ್ ಪೆನ್
ಸ್ಪಿರಿಟ್ ಅನ್ನು ಲೇಪಿಸಿ ಸರಿಯಾಗಿ ಉಜ್ಜಿ, ಆಮೇಲೆ ಸೋಪಿನಿಂದ ತೊಳೆಯಬೇಕು.
-ಶಿವಲೀಲಾ ಸೊಪ್ಪಿಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.