ಕೃಷ್ಣನ್ ಲವ್‌ಸ್ಟೋರಿ!
ವರ್ಷಗಳ ಪ್ರೇಮಕಥೆ ಬಿಚ್ಚಿಟ್ಟ ಜೋಡಿ
Team Udayavani, Feb 12, 2020, 7:04 AM IST
“ನಟ “ಡಾರ್ಲಿಂಗ್’ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಇಬ್ಬರೂ ಲವ್ವರ್ಸ್ ಅಂತೆ. ಅವರಿಬ್ಬರೂ ಮದುವೆ ಆಗ್ತಾರಂತೆ…’ ಇದು ಗಾಂಧಿನಗರ ಮಾತ್ರವಲ್ಲ, ಎಲ್ಲಾ ಕಡೆ ವರ್ಷದಿಂದಲೂ ಹರಿದಾಡುತ್ತಿದ್ದ ಸುದ್ದಿ. ಆದರೆ, ಕೃಷ್ಣ ಆಗಲಿ, ಮಿಲನಾ ಆಗಲಿ ಯಾವತ್ತೂ ತಾವು ಪ್ರೇಮಿಗಳು. ಮುಂದೆ ಮದ್ವೆ ಆಗುತ್ತೇವೆ ಅಂತಾನೂ ಹೇಳಿಕೊಂಡಿರಲಿಲ್ಲ. ಈಗ ಸ್ವತಃ “ಡಾರ್ಲಿಂಗ್’ ಕೃಷ್ಣ ಮಿಲನಾ ನಾಗರಾಜ್ ಅವರನ್ನು ಲವ್ ಮಾಡಿದ್ದು, ಅವರನ್ನೇ ಮದುವೆ ಆಗುತ್ತಿದ್ದೇನೆ’ ಅಂತ ಸ್ಪಷ್ಟಪಡಿಸಿದ್ದಾರೆ.
ಅಷ್ಟಕ್ಕೂ ಕೃಷ್ಣ ಅವರಿಗೆ ಈ ವಿಷಯ ಹೇಳಬಾರದು ಅಂತೇನೂ ಇರಲಿಲ್ಲವಂತೆ. ಆದರೆ, ಮಿಲನಾ ಬಳಿ, ತಾನೊಂದು ಹಿಟ್ ಸಿನಿಮಾ ಕೊಟ್ಟು ಆ ಬಳಿಕ ಎಲ್ಲರ ಮುಂದೆ ನಮ್ಮ ಲವ್ ಅಂಡ್ ಮ್ಯಾರೇಜ್ ಸ್ಟೋರಿ ಬಗ್ಗೆ ಹೇಳ್ತೀನಿ ಅಂದಿದ್ದರಂತೆ. ಅದಕ್ಕೆ ಸರಿಯಾಗಿ, ಅವರ “ಲವ್ ಮಾಕ್ಟೇಲ್’ ಸಿನಿಮಾಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಸಿನಿಮಾ ಗೆದ್ದ ಖುಷಿಯಲ್ಲೇ ಕೃಷ್ಣ, ಪತ್ರಕರ್ತರ ಮುಂದೆ, ಮಿಲನಾ ಜೊತೆ ಮದ್ವೆ ಆಗುವ ವಿಷಯವನ್ನು ಹೇಳಿಕೊಂಡರು.
ಹಾಗಾದರೆ, ಕೃಷ್ಣ ಮತ್ತು ಮಿಲನಾ ಲವ್‌ಸ್ಟೋರಿ ಎಷ್ಟು ವರ್ಷದ್ದು? ಇದಕ್ಕೆ ಉತ್ತರಿಸುವ ಕೃಷ್ಣ, ಕಳೆದ ಐದು ವರ್ಷಗಳಿಂದಲೂ ಲವ್ ಇತ್ತು. ನಮ್ಮ ಆತ್ಮೀಯರಿಗೆ ಬಿಟ್ಟರೆ, ಬೇರೆ ಯಾರಿಗೂ ವಿಷಯ ಗೊತ್ತಿರಲಿಲ್ಲ. ನಾವೂ ಸಹ ಹೇಳಿರಲಿಲ್ಲ. ಮನೆಯಲ್ಲಿ ಮದುವೆಗೆ ಒತ್ತಡ ಇತ್ತು. ಮಿಲನಾ ಮನೆಯವರೂ ಸಹ ಒಮ್ಮೆ ನಮ್ಮ ಮನೆ ನೋಡಲು ಬಂದಿದ್ದರು. ನಾನು ಹೈದರಾಬಾದ್‌ನಲ್ಲಿ ಶೂಟಿಂಗ್‌ನಲ್ಲಿದ್ದೆ. ನನಗೆ ಅದು ಇಷ್ಟ ಇರಲಿಲ್ಲ. ಯಾಕೆಂದರೆ, ಸೋತಿದ್ದೇನೆ.
ಮುಂದೆ ಏನೋ ಗೊತ್ತಿಲ್ಲ. ಆದರೂ, ಮದ್ವೆ ಮುನ್ನ ಒಂದು ಸಕ್ಸಸ್ ಚಿತ್ರ ಕೊಡಬೇಕು ಅಂತ ನಿರ್ಧಾರ ಮಾಡಿದೆ. ಸಕ್ಸಸ್ ಇದ್ದವರ ಜೊತೆ ಇರೋದೇ ಕಷ್ಟ. ಅಂತಹದರಲ್ಲಿ ಮೂರ್‍ನಾಲ್ಕು ವರ್ಷ ಯಾವುದೇ ಗೆಲುವು ಇಲ್ಲದ ನನ್ನ ಜೊತೆ ಮಿಲನಾ ಇದ್ದರು. ನಾನು ಯಾವ ಸಕ್ಸಸ್ ಇಲ್ಲದೆ ಮದುವೆ ಅನೌನ್ಸ್ ಮಾಡಿದರೆ ಹೇಗೆ ಎಂಬ ಭಯವಿತ್ತು. ಆಗ ಒಂದು ಸಿನಮಾ ಸಕ್ಸಸ್ ಕೊಟ್ಟ ಬಳಿಕ ನಾನೇ ಅನೌನ್ಸ್ ಮಾಡ್ತೀನಿ ಅಂತ ಹೇಳಿದ್ದೆ.
ಈಗ “ಲವ್ ಮಾಕ್ಟೇಲ್’ ಸಕ್ಸಸ್ ಆಗಿದೆ. ಆ ಖುಷಿಯಲ್ಲೇ ಎಲ್ಲರ ಸಮ್ಮುಖದಲ್ಲಿ ಮದುವೆ ಆಗುವ ವಿಷಯ ಪ್ರಸ್ತಾಪಿಸಿದ್ದೇನೆ. ಸದ್ಯಕ್ಕೆ ಮದುವೆ ಯಾವಾಗ ಎಂಬ ಬಗ್ಗೆ ಗೊತ್ತಿಲ್ಲ. ಮನೆಯವರೇ ಅದನ್ನು ಫಿಕ್ಸ್ ಮಾಡ್ತಾರೆ’ ಎಂಬುದು ಕೃಷ್ಣ ಮಾತು. ಮಿಲನಾ, “ನಮ್ಮ ಫ್ರೆಂಡ್ಸ್ ಸರ್ಕಲ್‌ನಲ್ಲಿದ್ದವರಿಗೆ ನಮ್ಮ ಲವ್ ವಿಷಯ ಗೊತ್ತಿತ್ತು. ಕೃಷ್ಣ ಕೂಡ ಒಂದು ಸಕ್ಸಸ್ ನಂತರ ವಿಷಯ ಹೇಳ್ಳೋಣ ಅಂದಿದ್ದರು. ಅವರಂದುಕೊಂಡಂತೆ ಆಗಿದೆ.
ಮದುವೆ ಯಾವಾಗ ಅನ್ನೋದು ಮನೆಯವರು ನಿರ್ಧರಿಸುತ್ತಾರೆ’ ಅಂದರು. ಅಂದಹಾಗೆ, “ಲವ್ ಮಾಕ್ಟೇಲ್’ ಸಿನಿಮಾ ನೋಡುವ ಪ್ರೇಮಿಗಳಿಗೊಂದು ವ್ಯಾಲೆಂಟೈನ್ಸ್ ಡೇ’ಗೆ ವಿಶೇಷ ಗಿಫ್ಟ್ ಇದೆ. ಅದೇನೆಂದರೆ, ಸಿನಿಮಾ ನೋಡಲು ಬರುವ ಲವ್ವರ್ ಅಥವಾ ಕಪಲ್ಸ್‌ಗೆ ಒಂದು ಟಿಕೆಟ್ ಉಚಿತವಂತೆ. ಹುಡುಗನ ಜೊತೆ ಹುಡುಗಿಗೊಂದು ಟಿಕೆಟ್ ಫ್ರೀ ಇರುತ್ತೆ. ಇದು ಮಾಲ್‌ಗೆ ಅನ್ವಯಿಸಲ್ಲ. ಚಿತ್ರಮಂದಿರಗಳಲ್ಲಿ ಮಾತ್ರ’ ಎಂಬುದು ಕೃಷ್ಣ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.