ಸ್ಕೆಚ್ ಆರ್ಟ್ ಕಲಾತ್ಮಕ ಕೆಲಸ
Team Udayavani, Feb 12, 2020, 4:53 AM IST
ಸ್ಕೆಚ್ ಆರ್ಟ್ ಅಥವಾ ಪೆನ್ಸಿಲ್ ಆರ್ಟ್ ಎಂಬುದು ಸಂಪೂರ್ಣವಾಗಿ ಕಲಾತ್ಮಕವಾಗಿ ಕೈಯಲ್ಲೇ ತಯಾರಿಸಲ್ಪಡುವ ಕೆಲಸವಾಗಿದೆ. ಯಾವುದೇ ಒಂದು ವಸ್ತು, ಪ್ರತಿಮೆಗಳನ್ನು ಅದರಂತೆ ಚಿತ್ರಿಸುವುದೇ ಈ ಸ್ಕೆಚ್ ಆರ್ಟ್‌ನ ಮೂಲ ಉದ್ದೇಶ. ಕೇವಲ ಫ್ಯಾಶನ್ ಆಗಿ ಗುರುತಿಸಲ್ಪಟ್ಟಿದ್ದ ಸ್ಕೆಚ್ ಆರ್ಟ್ ಉದ್ಯಮವಾಗಿ ಅಥವಾ ಒಂದು ಪ್ರೊಫೆಶನ್ ಆಗಿ ಬೆಳೆದದ್ದು ಇತ್ತೀಚೆಗೆ.
ಫೋಟೋಗಳ ಕಲಾತ್ಮಕತೆ ಉತ್ತುಂಗಕ್ಕೇರಿ ನಿಂತ ಸಮಯದಲ್ಲಿ ಅದಕ್ಕಿಂತ ಭಿನ್ನವಾಗಿ ಚಿತ್ರಗಳನ್ನು ಹೇಗೆ ಸೆರೆಹಿಡಿಯಬಹುದೆಂಬ ಆಲೋಚನೆ ಉಂಟಾಯಿತು. ಅದರ ಪ್ರತಿಫಲವೇ ಸ್ಕೆಚ್ ಆರ್ಟ್. ಮೊದ ಮೊದಲು ಕೇವಲ ಪೆನ್ಸಿಲ್‌ನ ತುದಿಯಲ್ಲಿ ತಯಾರಾಗುತ್ತಿದ್ದ ಸ್ಕೆಚ್ ಆರ್ಟ್‌ನಲ್ಲಿ ಅನಂತರದಲ್ಲಿ ಭಿನ್ನ ಭಿನ್ನ ಆವಿಷ್ಕಾರಗಳು ಬಂದವು. ಗ್ರಾಫಿಕ್ ಡಿಸೈನ್ ಅದರ ಮುಂದುವರಿದ ರೂಪ. ಪೆನ್ಸಿಲ್, ಬಣ್ಣದ ಪೆನ್ಸಿಲ್, ಚಾರ್ಕೋಲ್, ರಬ್ಬರ್ ಮೊದಲಾದ ಉಪಕರಣಗಳು ಸ್ಕೆಚ್‌ಆರ್ಟ್‌ನಲ್ಲಿ ಬಳಸಲ್ಪಡುತ್ತದೆ. ಶೇಡಿಂಗ್ ಇಲ್ಲಿ ಹೆಚ್ಚು ಪರಿಣಾಮಕಾರಿ.
ಹವ್ಯಾಸ, ಆಸಕ್ತಿ
ಒಬ್ಬ ಸ್ಕೆಚ್ ಆರ್ಟಿಸ್ಟ್ ಆಗಲು ಮುಖ್ಯವಾಗಿ ಬೇಕಾಗಿರುವುದು ಹವ್ಯಾಸ ಮತ್ತು ಆಸಕ್ತಿ. ಯಾವುದೇ ಡಿಗ್ರಿ ಕ್ವಾಲಿಫಿಕೇಷನ್ ಇದ್ದವರು ಸ್ಕೆಚ್ ಆರ್ಟಿಸ್ಟ್ ಆಗಬಹುದು. ಸ್ಕೆಚ್ ಆರ್ಟಿಸ್ಟ್ ಗಳಿಗಾಗಿ 6 ತಿಂಗಳುಗಳ ಡಿಪ್ಲೊಮಾ ಕೋರ್ಸ್‌ಗಳು ಲಭ್ಯವಿವೆ. ಇವುಗಳಲ್ಲಿ ತರಬೇತಿ ಪಡೆದು ಸರ್ಟಿಫಿಕೇಟ್‌ಗಳನ್ನು ಪಡೆಯುವುದರಿಂದ ಮುಂದೆ ಅದನ್ನು ಒಂದು ಸ್ವತಂತ್ರ ಉದ್ಯಮವಾಗಿ ಸ್ಥಾಪಿಸಲು ಸುಲಭವಾಗುತ್ತದೆ. ಫಾರೆನ್ಸಿಕ್ ಸ್ಕೆಚ್ ಆರ್ಟಿಸ್ಟ್ ಆಗುವವರ ವಿದ್ಯಾಭ್ಯಾಸ ಸ್ವಲ್ಪ ಹೆಚ್ಚು ಇರಬೇಕಾಗುತ್ತದೆ. ಅವರಿಗೆ ಕಾನೂನು, ನೀತಿ ನಿಯಮಗಳ ಪರಿಚಯ ಇರಬೇಕಾಗುತ್ತದೆ. ಅಥವಾ ಅವರು ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಫಾರ್ ಐಡೆಂಟಿಫಿಕೇಷನ್ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದಿರಬೇಕು.
ಈ ಉದ್ಯೋಗವನ್ನು ಪಾರ್ಟ್ ಟೈಂ ಅಥವಾ ಸ್ವತಂತ್ರವಾಗಿ ಉದ್ಯಮವಾಗಿ ಆರಂಭಿಸಬಹುದು. ವೇತನವು ಕೆಲಸದ ಕ್ರಮಬದ್ಧತೆಯ ಮೇಲೆ ನಿಗದಿಯಾಗುತ್ತದೆ. ಕೆಲಸ ಚೆನ್ನಾಗಿ ಮಾಡಿದಂತೆ ಕಲೆಗಾರನ ಪ್ರಸಿದ್ಧಿ ಹೆಚ್ಚುತ್ತದೆ. ಜತೆಗೆ ವೇತನವೂ. ಪ್ರೊಫೆಶನ್ ಬೇರೆಯಾಗಿದ್ದು, ಸ್ಕೆಚ್ ಆರ್ಟ್ ಫ್ಯಾಶನ್ ಆಗಿದ್ದರೆ ಪಾರ್ಟ್ ಟೈಂ ಕೆಲಸ ಆಗಿ ಮುಂದುವರಿಯಬಹುದು.
ಈ ಉದ್ಯೋಗಕ್ಕೆ ಅಪಾರ ಅವಕಾಶಗಳಿವೆ. ಕೆಲಸ ಉತ್ತಮವಾಗಿದ್ದರೆ ಅದನ್ನೇ ಉದ್ಯಮವಾಗಿ ಮುಂದುವರಿಸಬಹುದು.
ಕಲಿಕೆಯ ಜತೆಗೆ ಉದ್ಯೋಗ
ಇದಕ್ಕೆ ಪ್ರತ್ಯೇಕವಾಗಿ ಸಮಯದ ಅವಧಿ ಇಲ್ಲದುದರಿಂದ ಕಲಿಕೆಯ ಜತೆ ಜತೆಗೆ ಇದನ್ನು ಮಾಡಬಹುದು. ಚಿತ್ರ ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ಇದನ್ನು ಪಾರ್ಟ್ ಟೈಂ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು. ವ್ಯಕ್ತಿಗಳ ಚಿತ್ರ, ವಸ್ತುಗಳ ಚಿತ್ರಗಳನ್ನು ಬರೆಯಬಹುದು. ಒಂದು ಚಿತ್ರಕ್ಕೆ ಇಂತಿಷ್ಟು ಹಣ ಎಂದು ನಿರ್ಣಯ ಮಾಡಿ, ಬಿಡುವಿನ ವೇಳೆಯಲ್ಲಿ ಮಾಡಿ ಮುಗಿಸಬಹುದು.
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.