ಸಿಂಡಿಕೇಟ್ ಬ್ಯಾಂಕ್ ಒಟ್ಟಾರೆ ವಹಿವಾಟು 5 ಲಕ್ಷ ಕೋಟಿ ರೂಪಾಯಿಗೆ ಏರಿಕೆ
Team Udayavani, Feb 12, 2020, 3:05 AM IST
ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ತ್ತೈಮಾಸಿಕದಲ್ಲಿ ಸಿಂಡಿಕೇಟ್ ಬ್ಯಾಂಕ್ 435 ಕೋಟಿ ರೂ.ನಿವ್ವಳ ಲಾಭ ಗಳಿಸಿದ್ದಲ್ಲದೇ, ಬ್ಯಾಂಕ್‌ನ ಒಟ್ಟಾರೆ ವಹಿವಾಟನ್ನು ಐದು ಲಕ್ಷ ಕೋಟಿ ರೂ.ಗೆ ಏರಿಸಿ ದಾಖಲೆ ಮಾಡಿದೆ.
ಗಾಂಧಿನಗರದ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕದ ಫಲಿತಾಂಶ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಮಹಾಪಾತ್ರ, 2019-20ನೇ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕದ ಅಂತ್ಯಕ್ಕೆ ಸಿಂಡಿಕೇಟ್ ಬ್ಯಾಂಕ್ ಐದು ಲಕ್ಷ ಕೋಟಿ ರೂ. ವಹಿವಾಟು ನಡೆಸಿ ದಾಖಲೆ ಮಾಡಿದೆ ಎಂದರು.
ಕಳೆದ ಆರ್ಥಿಕ ವರ್ಷದ (2018-19)ಮೂರನೇ ತ್ತೈಮಾಸಿಕದಲ್ಲಿ 108 ಕೋಟಿ ರೂ. ಇದ್ದ ನಿವ್ವಳ ಲಾಭವು ಈ ಬಾರಿ 435 ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರಮುಖವಾಗಿ ಒಟ್ಟು ಅನುತ್ಪಾದಕ ಆಸ್ತಿ ಪ್ರಮಾಣ ಅನುಪಾತವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.54 ರಿಂದ 11.33ಕ್ಕೆ ಇಳಿಕೆಯಾಗಿದೆ. ಅಂತೆಯೇ ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣ ಅನುಪಾತ ಕೂಡ 6.75 ರಿಂದ 5.94 ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದರು.
ಅಂತೆಯೇ 2018-19ರ ಮೂರನೇ ತ್ತೈಮಾಸಿಕಕ್ಕಿಂತ ಈ ಬಾರಿ ನಿರ್ವಹಣಾ ಲಾಭ ಪ್ರಮಾಣವು ಶೇ.111 ರಷ್ಟು ಏರಿಕೆಯಾಗಿದ್ದು, 1336 ಕೋಟಿ ರೂ. ತಲುಪಿದೆ. ಜತೆಗೆ ಬಡ್ಡಿಯಿಂದ ಬರುವ ನಿವ್ವಳ ಬಡ್ಡಿ ಆದಾಯವು ಶೇ.16 ರಷ್ಟು ಏರಿಕೆಯಾಗಿದ್ದು, 1871 ರೂ.ಗೆ ತಲುಪಿದೆ. ಚಾಲ್ತಿ ಹಾಗೂ ಉಳಿತಾಯ ಖಾತೆಯ ಠೇವಣಿ ಪ್ರಮಾಣವು ಶೇ 8.19 ಏರಿಕೆಯಾಗಿದೆ.
ಕಳೆದ ಡಿಸೆಂಬರ್‌ನಲ್ಲಿದ್ದ ಶೇ.64.81 ನಿಬಂಧನೆ ವ್ಯಾಪ್ತಿ ಅನುಪಾತವು 2019 ಡಿಸೆಂಬರ್‌ನಲ್ಲಿ ಶೇ.69.28 ಸುಧಾರಿಸಿದೆ. ಒಟ್ಟಾರೆ ಸಿಬ್ಬಂದಿ ಶ್ರಮದಿಂದ ಮೂರನೇ ತ್ತೈಮಾಸಿಕದಲ್ಲಿ ಬ್ಯಾಂಕ್ ಅತ್ಯುತ್ತಮ ವಹಿವಾಟು ನಡೆಸಿದ್ದು, ನಾಲ್ಕನೇ ತ್ತೈಮಾಸಿಕದಲ್ಲಿಯೂ ಮುಂದುವರೆಸುವ ಭರವಸೆ ಇದೆ ಎಂದರು.
ಒಟ್ಟು ವ್ಯವಹಾರ ಶೇ.7ರಷ್ಟು ಹೆಚ್ಚಳ: 2018ರ ಡಿಸೆಂಬರ್‌ನಲ್ಲಿ ರೂ. 4,67,911 ಕೋಟಿ ರೂ. ಇದ್ದ ವಹಿವಾಟು ಶೇ.7ರಷ್ಟು ಹೆಚ್ಚಳವಾಗಿ 5,00,971 ಕೋಟಿ ರೂ.ಗೆ ತಲುಪಿದೆ. ಈ ದಾಖಲೆಯ ವಹಿವಾಟಿಗೆ ಮೂರನೇ ತ್ತೈಮಾಸಿಕದಲ್ಲಿ ಠೇವಣಿ ಹೆಚ್ಚಳವು ಪ್ರಮುಖ ಕಾರಣವಾಗಿದೆ. ಚಿಲ್ಲರೆ ಮತ್ತು ಕೃಷಿ ಕ್ಷೇತ್ರದಲ್ಲಿ ಕ್ರಮವಾಗಿ ಶೇ.7 ಮತ್ತು ಶೇ.10ರಷ್ಟು ಬೆಳವಣಿಗೆ ಕಂಡು ಬಂದಿದೆ ಎಂದು ಹೇಳಿದರು.
ಗ್ರಾಹಕರ ಅನುಕೂಲವನ್ನು ಹೆಚ್ಚಿಸಲು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ನ ಪರಿಷ್ಕೃತ ಆವೃತ್ತಿಯಲ್ಲಿ ಬ್ಯಾಂಕ್ ಹಿಂದಿ, ಇಂಗ್ಲಿಷ್ ಭಾಷೆಗಳ ಜತೆಗೆ 9 ಪ್ರಾದೇಶಿಕ ಭಾಷೆಗಳನ್ನು ಸಕ್ರಿಯಗೊಳಿಸಿದೆ. ಆಕಸ್ಮಿಕ ಮರಣ ವಿಮೆ, ಮೈಕ್ರೋ ಲೈಫ್, ಇನುರೆನ್ಸ್ ಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗೆ ದಾಖಲಾತಿ, ನೆಫ್ಟ್, ಸಾಲ ಖಾತೆಗಳಿಗೆ ಬಡ್ಡಿ ಪ್ರಮಾಣ ಪತ್ರ ವಿತರಣೆ,
ಟಿಡಿಎಸ್, ಫಾರ್ಮ್ 16 ಪ್ರಮಾಣಪತ್ರ ವಿತರಣೆ ಮತ್ತು ಇತರ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಇನ್ನು ಬ್ಯಾಂಕ್ ವಿಲೀನ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಎಸ್.ಕೃಷ್ಣನ್, ಅಜಯ್ ಕೆ.ಕುರಾನಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jasprit Bumrah ಬೌಲಿಂಗ್ ಶೈಲಿಯನ್ನೇ ಶಂಕಿಸಿದ ಆಸೀಸ್ ಮಾಧ್ಯಮಗಳು!
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.