ಇನ್ನೂ ಬಹಳ ದೂರವಿದೆ ಅಪೌಷ್ಟಿಕತೆ ಮುಕ್ತ ದೇಶದ ಗುರಿ
Team Udayavani, Feb 12, 2020, 6:30 AM IST
2022ರ ವೇಳೆಗೆ ರಾಷ್ಟ್ರೀಯ ಪೌಷ್ಟಿಕಾಂಶ ಮಿಷನ್ (ಎನ್‌ಎನ್‌ಎಂ) ದೇಶ ದಲ್ಲಿ ಅಪೌಷ್ಟಿಕತೆ ಸಮಸ್ಯೆ ಯನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ಗುರಿ ಹೊಂದಿದೆ. ಆದರೆ ಆ ಗುರಿಯನ್ನು ತಲುಪುವುದು ಸದ್ಯದ ಮಟ್ಟಿಗೆ ಅಸಾಧ್ಯ ಎಂದು ಭಾರತದ ವಾರ್ಷಿಕ ಪರಿಸರ ವರದಿ ಹೇಳಿದೆ. ಹಾಗಾದರೆ ದೇಶಾದ್ಯಂತ ಅಪೌಷ್ಟಿಕತೆ ಸಮಸ್ಯೆಗೆ ಬಲಿಯಾದವರೆಷ್ಟು? ಕಾರಣಗಳೇನು? ಮಾಹಿತಿ ಇಲ್ಲಿದೆ.
10.4 ಲಕ್ಷ ಸಾವು
2017ರಲ್ಲಿ ದೇಶಾದ್ಯಂತ ಸುಮಾರು 10.4 ಲಕ್ಷ ಐದು ವರ್ಷದೊಳಗಿನ ಮಕ್ಕಳು ಅಪೌಷ್ಟಿಕತೆ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಶೇ.68.2ರಷ್ಟು ಸಾವುಗಳು ಅಪೌಷ್ಟಿಕತೆಯಿಂದ ಸಂಭವಿಸಿವೆ.
ಹಸಿವು ಸೂಚ್ಯಂಕದಲ್ಲಿ ಹಿನ್ನಡೆ
ಅದೇ ವರ್ಷ ಜಾಗತಿಕ ಹಸಿವು ಸೂಚ್ಯಂಕದಲ್ಲಿಯೂ ಹಿನ್ನಡೆ ಸಾಧಿಸಿರುವ ಭಾರತ 117 ದೇಶಗಳ ಪೈಕಿ 102ನೇ ಸ್ಥಾನ ಪಡೆದುಕೊಂಡಿತ್ತು.
ಕಳೆಗುಂದಿದ ಅಭಿಯಾನ್
ಸಮಸ್ಯೆಯ ತೀವ್ರತೆಯನ್ನು ಅರಿತ ಕೇಂದ್ರ ಸರಕಾರ ಅಪೌಷ್ಟಿಕತೆ ನಿವಾರಣೆಗೆ 2018ರಲ್ಲಿ ಪೋಷಣ್ ಅಭಿಯಾನ್ ಯೋಜನೆಯನ್ನು ಜಾರಿ ಮಾಡಿತ್ತು. ಆದರೆ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗದ ಕಾರಣ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗುತ್ತಿದ್ದು, ಯೋಜನೆಯ ಗುರಿಗಳು ಕಳೆಗುಂದುತ್ತಿವೆ.
2ನೇ ಬಾರಿ ಸೋಲು
2017ರಿಂದ 2020ರ ನಡುವೆ ಪ್ರತ್ಯೇಕ ವರ್ಷಗಳಲ್ಲಿ ಈ ಸಮಸ್ಯೆಯ ಪ್ರಮಾಣವನ್ನು ಶೇ. 2ರಷ್ಟು ಕಡಿಮೆ ಮಾಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 2020ರ ಒಳಗೆ ತನ್ನ ಗುರಿ ತಲುಪುವುದು ಕಷ್ಟಸಾಧ್ಯವಾಗುತ್ತದೆ ಎಂಬ ವರದಿ ಕಳೆದ ವರ್ಷ ಪ್ರಕಟವಾಗಿತ್ತು. ಆದರೆ ಮತ್ತೆ ಇದೀಗ 2022ರ ವೇಳೆಗೆ ಅಪೌಷ್ಟಿಕತೆ ಮುಕ್ತ ಗುರಿ ಸಂಪೂರ್ಣವಾಗುವುದಿಲ್ಲ ಎಂದು ವರದಿ ಉಲ್ಲೇಖ ಮಾಡಿದೆ.
ಕಾರಣಗಳೇನು…
– ಸರಕಾರಿ ಯೋಜನೆ ಕುರಿತು ಮಾಹಿತಿ ಇಲ್ಲದಿರುವುದು.
– ಬಡತನ ಹಾಗೂ ಸಾಮಾ ಜಿಕ ಪರಿಸ್ಥಿತಿ.
– ಸಮಸ್ಯೆಯ ಪರಿಣಾಮದ ಕುರಿತು ಮಾಹಿತಿ ಕೊರತೆ.
– ಆರೋಗ್ಯ ಸವಲತ್ತುಗಳಿಂದ ವಂಚಿತ ಕುಟುಂಬಗಳು
– ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು ನಿರ್ಲಕ್ಷ್ಯ.
ಪರಿಹಾರ
– ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವುದು.
– ಗರ್ಭಿಣಿಯರಿಗೆ ಕಬ್ಬಿಣಾಂಶ ಮಾತ್ರೆ ಒದಗಿಸುವುದು.
– ಎದೆ ಹಾಲು ಶಿಶುವಿಗೆ ಪೂರಕ ಪೌಷ್ಟಿಕ ಆಹಾರ.
– ತಜ್ಞರಿಂದ ಮಕ್ಕಳ ತಾಯಂದಿರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡುವುದು.
– ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕುರಿತು ಮಾಹಿತಿ ನೀಡುವುದು.
ದೇಶದ ಅಪೌಷ್ಟಿಕತೆ ಸ್ಥಿತಿ
– 10 ಮಕ್ಕಳಲ್ಲಿ 4 ಮಕ್ಕಳ ಬೆಳವಣಿಗೆ ಕುಂಠಿತ.
– ಶೇ. 39.3ರಷ್ಟು ಕುಬj ಬೆಳವಣಿಗೆ.
– 10 ಮಕ್ಕಳಲ್ಲಿ 3 ಮಕ್ಕಳ ತೂಕ ಕಡಿಮೆ.
– 5 ಮಕ್ಕಳ ಪೈಕಿ ಮೂವರಲ್ಲಿ ರಕ್ತ ಹೀನತೆ ಸಮಸ್ಯೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.