ರಣಜಿ: ಕರ್ನಾಟಕಕ್ಕೆ ಕಾದಿದೆ “ಬರೋಡ ಟೆಸ್ಟ್’; ಕ್ವಾರ್ಟರ್ ಫೈನಲ್ ತಲುಪಲು ಗೆಲುವು ಅಗತ್ಯ
Team Udayavani, Feb 12, 2020, 9:11 AM IST
ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಕ್ವಾರ್ಟರ್ ಫೈನಲ್‌ಗೆ ಏರುವ ಯೋಜನೆಯಲ್ಲಿ ರುವ ಕರ್ನಾಟಕ ಬುಧವಾರದಿಂದ “ಬರೋಡ ಪರೀಕ್ಷೆ’ ಎದುರಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲೈಟ್ “ಎ-ಬಿ’ ಗುಂಪಿನ ಈ ಕೊನೆಯ ಲೀಗ್ ಮುಖಾಮುಖೀ ರಾಜ್ಯ ತಂಡಕ್ಕೆ ನಿರ್ಣಾಯಕವಾಗಿದೆ. ಗೆದ್ದರಷ್ಟೇ ಕರ್ನಾಟಕದ ಮುಂದಿನ ದಾರಿ ಸಲೀಸಾಗಲಿದೆ ಎಂಬುದು ಈಗಿನ ಲೆಕ್ಕಾಚಾರ.
ಕರ್ನಾಟಕವೀಗ 25 ಅಂಕ ಗಳಿಸಿ 5ನೇ ಸ್ಥಾನದಲ್ಲಿದೆ. ಹೀಗಾಗಿ ಕ್ವಾರ್ಟರ್ ಫೈನಲ್ ಕನಸು ಜೀವಂತವಾಗಿದೆ. ಆದರೆ ಬರೋಡ ಈಗಾಗಲೇ ಕೂಟದಿಂದ ಹೊರಬಿದ್ದಿದೆ. ಮತ್ತೂಂದು ಕಡೆ 24 ಅಂಕ ಗಳಿಸಿ 6ನೇ ಸ್ಥಾನದಲ್ಲಿರುವ ಪಂಜಾಬ್ ಕೂಡ ನಾಕೌಟ್ ರೇಸ್‌ನಲ್ಲಿದೆ. ಅದು ಪಟಿಯಾಲದಲ್ಲಿ ಬಂಗಾಲವನ್ನು ಎದುರಿಸಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ಮುಂದಿನ ಹಂತಕ್ಕೇರಲು ಮಹತ್ವದ್ದಾಗಿದೆ. ಹೀಗಾಗಿ ಕರ್ನಾಟಕ ಸೋಲುಂಡರೆ ಅಥವಾ ಮೊದಲ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದರೆ ಕ್ವಾರ್ಟರ್ ಫೈನಲ್ ಅವಕಾಶ ಕಳೆದುಕೊಳ್ಳಬೇಕಾಗಿ ಬರಬಹುದು. ಈ ಗುಂಪಿನಿಂದ ಅಗ್ರಸ್ಥಾನ ಪಡೆದ 5 ತಂಡಗಳಷ್ಟೇ ಮುಂದಿನ ಸುತ್ತು ತಲುಪಲಿವೆ.
ಸಿಡಿದೇಳಬೇಕಿದೆ ಕರ್ನಾಟಕ ಹಿಂದಿನ ಲೀಗ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ್ದೇ ಕರ್ನಾಟಕಕ್ಕೆ ಕಂಟಕವಾಗಿ ಪರಿಮಿಸಿತ್ತು. ಇ¨ ನ್ನೀಗ ಬರೋಡ ವಿರುದ್ಧ ಸರಿದೂಗಿಸಿ ಕೊಳ್ಳಬೇಕಿದೆ.
ಕರುಣ್ ನಾಯರ್ ಸಾರಥ್ಯದ ತಂಡದಲ್ಲಿ 2 ಬದಲಾವಣೆ ಮಾಡ ಲಾಗಿದೆ. ರೋಹನ್ ಕದಮ್ ಬದಲಿಗೆ ಡಿ. ನಿಶ್ಚಲ್ ಸ್ಥಾನ ಪಡೆದಿದ್ದಾರೆ. ಪ್ರತೀಕ್ ಜೈನ್‌ಗೆ ವಿಶ್ರಾಂತಿ ನೀಡಲಾಗಿದ್ದು, ಇವರ ಬದಲು ವೇಗಿ ಪ್ರಸಿದ್ಧ್ ಕೃಷ್ಣ ಬಂದಿದ್ದಾರೆ. ದೇವದತ್ತ ಪಡಿಕ್ಕಲ್, ಆರ್. ಸಮರ್ಥ್, ಕೆ. ಗೌತಮ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ವಿ. ಕೌಶಿಕ್ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದರೆ ಬರೋಡವನ್ನು ಬಗ್ಗುಬಡಿಯುವುದು ಸಮಸ್ಯೆಯೇನಲ್ಲ.
ಬರೋಡಕ್ಕೆ ಇದು ಔಪಚಾರಿಕ ಪಂದ್ಯ
ಆರಂಭದ 2 ಪಂದ್ಯಗಳಲ್ಲಿ ಬರೋಡ ಉತ್ತಮ ಆಟ ಪ್ರದರ್ಶಿಸಿತ್ತು. ಆದರೆ ಅನಂತರ ಡ್ರಾ ಹಾಗೂ ಸೋಲುಗಳು ಬರೋಡವನ್ನು ಹಳಿ ತಪ್ಪಿಸಿದವು. ಸೌರಾಷ್ಟ್ರ ವಿರುದ್ಧ 4 ವಿಕೆಟ್ ಸೋಲು, ತಮಿಳುನಾಡು ವಿರುದ್ಧ ಇನ್ನಿಂಗ್ಸ್ ಸೋಲು ಅನುಭವಿಸಿದ್ದು ಬರೋಡಕ್ಕೆ ಭಾರೀ ಹೊಡೆತ ನೀಡಿತು. ಕೃಣಾಲ್ ಪಾಂಡ್ಯ ಪಡೆಗೆ ಇದು ಕೇವಲ ಔಪಚಾರಿಕ ಪಂದ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ಯೋಧಾಸ್‌ಗೆ ತಲೈವಾಸ್ ಆಘಾತ
Hockey: ಇಂದಿನಿಂದ ಜೂ. ಏಷ್ಯಾ ಕಪ್ ಹಾಕಿ; ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.