ಪ್ರವಾಸ ಸಿದ್ಧತೆ ಹೀಗಿರಲಿ


Team Udayavani, Feb 13, 2020, 5:29 AM IST

tour-idea

ದಿನನಿತ್ಯದ ಜೀವನದಿಂದ ಸ್ವಲ್ಪ ವಿರಾಮ, ಬದಲಾವಣೆ ಬೇಕೆನಿಸಿದಾ ಗ ಎಲ್ಲಾದರೂ ಪ್ರವಾಸ ಹೋಗೋಣ ವೆಂದು ಅನ್ನಿಸುತ್ತದೆ. ಆದರೆ ಪ್ರವಾಸ ಹೋಗುವಾಗ ಅದಕ್ಕೆ ಸೂಕ್ತ ಪೂರ್ವ ಸಿದ್ಧತೆ ಮಾಡಿ ಕೊಳ್ಳುವುದನ್ನು ಮಾತ್ರ ಮರೆತು ಬಿಡುತ್ತೇವೆ. ಗೊತ್ತಿರುವ ಊರಿನಲ್ಲೇ ಹತ್ತು-ಹಲವು ಸಮಸ್ಯೆಗಳಿಗೆ ಸಿಲುಕಿಕೊಳ್ಳುವಾಗ, ಪರಿಚಯವೇ ಇಲ್ಲದ ಪರ ಊರಿಗೆ ಹೋದರೆ ಎಷ್ಟೆಲ್ಲಾ ತಾಪತ್ರ ಯಗಳು ಎದುರಾಗಬಹುದು. ಹಾಗಾಗಿ ಒಳ್ಳೆಯ ಟೂರ್‌ ಪ್ಲಾನ್‌ ಮಾಡೋದು ಹೇಗೆ, ಪ್ರವಾಸ ಹೋಗುವ ಮುನ್ನ ಏನೆಲ್ಲಾ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮಿತ ಬಜೆಟ್‌ನಲ್ಲಿ ಒಳ್ಳೆಯ ಸ್ಥಳಗಳನ್ನು ದರ್ಶನಮಾಡಿ ಬರುವುದು ಹೇಗೆ ಅನ್ನೋದಕ್ಕೆ ಇಲ್ಲಿದೆ ಟಿಪ್ಸ್‌.

ವಸತಿ ವ್ಯವಸ್ಥೆ: ಪ್ರವಾಸ ಹೋದಲ್ಲಿ ಸುರ ಕ್ಷಿತ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಮುಖ್ಯ. ಸರಿಯಾದ ಹೊಟೇಲ್‌ ಪರಿಶೀಲಿಸಿ ಡಿಸ್ಕೌಂಟ್‌ ಲೆಕ್ಕಾಚಾರ ಹಾಕಿ ಹೊಟೇಲನ್ನು ಬುಕ್‌ ಮಾಡಿಕೊ ಳ್ಳುವುದು ಒಳ್ಳೆಯದು. ಸುರಕ್ಷಿತ ಮತ್ತು ಹಣ ಉಳಿತಾಯ ಎರಡು ದೃಷ್ಟಿಯಿಂದಲೂ ಉತ್ತಮ.

ಆಫ್ ಸೀಸನ್‌ ಉತ್ತಮ: ರಜಾ ದಿನಗಳಲ್ಲಿ, ಹಬ್ಬ ಹರಿದಿನಗಳ ಸಮಯದಲ್ಲಿ ಪ್ರವಾಸ ಹೋಗುವುದ ಕ್ಕಿಂತ ಆಫ್ ಸೀಸನ್‌ ಅಲ್ಲಿ ಹೋಗುವುದು ಉತ್ತಮ. ಆನ್‌ ಸೀಸನ್‌ಗೆ ಹೋಲಿಸಿದರೆ, ಆಫ್ ಸೀಸನ್‌ನಲ್ಲಿ ಬಸ್ಸು, ರೈಲು, ವಿಮಾನ ಟಿಕೆಟ್‌ ದರ ಕಡಿಮೆ ಇರಲಿದ್ದು, ಹಣ ಉಳಿತಾಯಕ್ಕೆ ಇದು ಸುಲಭ ಮಾರ್ಗ. ಆಫ್ಸೀಸನ್‌ನಲ್ಲಿ ಪ್ರವಾಸ ಕೈಗೊ ಳ್ಳುವುದರಿಂದ ತೀರಾ ಜನಸಂದಣಿ ಇರುವುದಿಲ್ಲ.

ಆಹಾರ: ಪ್ರವಾಸ ಹೋದಾಗ ಆಹಾರದ ಕಡೆ ಗಮನ ಹರಿಸುವುದು ಅಗತ್ಯ. ಪ್ರಮುಖ ಪ್ರವಾಸಿ ಸ್ಥಳದ ಸುತ್ತಮುತ್ತ ಇರುವ ಹೊಟೇಲ್‌ಗ‌ಳು ದುಬಾರಿ. ಸಾಧ್ಯವಾದಷ್ಟು ಕೆಲವು ಆಹಾರ ತಿನಿಸು, ನೀರುಕೊಂಡು ಹೋಗಬಹುದು.

ಸ್ಥಳ ವೀಕ್ಷಣೆ: ಇರುವ ಸಮಯದಲ್ಲಿ, ಕಡಿಮೆ ವೆಚ್ಚ ದಲ್ಲಿ ಪ್ರವಾಸಿ ತಾಣದ ಇತರ ಆಕರ್ಷಣೆಗಳನ್ನು ನೋಡಿಕೊಂಡು ಬನ್ನಿ.

ಸಾರಿಗೆ: ಪ್ರವಾಸ ಹೋದಲ್ಲಿ ಅಲ್ಲಿನ ಸುತ್ತ ಮುತ್ತ ಸ್ಥಳ ವೀಕ್ಷಿಸಲು ಟ್ಯಾಕ್ಸಿ, ಆಟೋ ಹಿಡಿಯುವ ಬದಲು ಸ್ಥಳೀಯ ಬಸ್ಸು, ರೈಲನ್ನು ಹತ್ತಬಹುದು. ಇದರಿಂದ ಖರ್ಚು ಕಡಿಮೆ ಮಾಡಬಹುದು.

ಮೊಬೈಲ್‌ ಬಳಕೆ: ಬೇರೆ ರಾಜ್ಯ, ಬೇರೆ ದೇಶಕ್ಕೆ ಹೋದರೆ ಮೊಬೈಲ್‌ ಕರೆನ್ಸಿ ಚಾರ್ಜ್‌ ದುಪ್ಪಟ್ಟಾ ಗುತ್ತದೆ. ಈ ಸಂದರ್ಭ ಸ್ಥಳೀಯ ಸಿಮ್‌ ಬಳ ಸಬಹುದು.

ಮಕ್ಕಳ ಸುರಕ್ಷೆ: ಪ್ರವಾಸದಲ್ಲಿ ಮಕ್ಕಳನ್ನು ಕರೆದು ಕೊಂಡು ಹೋಗುವುದಿದ್ದರೆ ಅವರ ಆಹಾರ, ಆಟಿಕೆ, ಬಟ್ಟೆಬರೆಗಳನ್ನು ಮನೆಯಿಂದಲೇ ಕೊಂಡು ಹೋಗುವುದು ಒಳ್ಳೆಯದು. ಏಕೆಂದರೆ ಹೋದಲ್ಲಿ ತೆಗೆದುಕೊಂಡರೆ ದುಬಾರಿ ಎನಿಸುತ್ತದೆ.

ಆನ್ ಲೈನ್ ಬುಕ್ಕಿಂಗ್‌: ಡಿಜಿಟಲ್‌ ಲೋಕದಲ್ಲಿ ಬದುಕ ಬಂಡಿಯನ್ನು ಓಡಿಸುತ್ತಿರುವ ನಮಗೆ ಕೈ ಬೆರಳಿನ ತುದಿಯಲ್ಲಿ ಎಲ್ಲ ಸೌಲಭ್ಯಗಳು ಲಭ್ಯ ವಾಗುತ್ತವೆ. ಹಿಂದೆ ಎಲ್ಲ ಗಂಟೆ ಗಟ್ಟಲೆ ಸರದಿ ಸಾಲಿ ನಲ್ಲಿ ನಿಲ್ಲುವ ಗೋಜಲು 4ಜಿ-5ಜಿ ಕಾಲದಲ್ಲಿಲ್ಲ. ಆದ ಕಾರಣ ಎಲ್ಲಿಗೆ, ಯಾವಾಗ ಹೋಗುವುದು ಎಂದು ನಿರ್ಧರಿಸಿ ಏಜೆಂಟರ ಬಳಿ ಹೋಗಿ ಟಿಕೆಟ್‌ ಬುಕ್‌ ಮಾಡುವ ಬದಲು ಇಂಟರ್‌ನೆಟ್‌ನಲ್ಲಿ ಬುಕ್ಕಿಂಗ್‌ ಮಾಡುವುದು ಸುಲಭ.

ಟಾಪ್ ನ್ಯೂಸ್

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ

Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

R Ashwin: ಅಶ್ವಿ‌ನ್‌ಗೆ ಖೇಲ್‌ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ

R Ashwin: ಅಶ್ವಿ‌ನ್‌ಗೆ ಖೇಲ್‌ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ

Virat Kohli: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ವಿರಾಟ್‌ ನೂತನ ಕೇಶ ವಿನ್ಯಾಸ

Virat Kohli: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ವಿರಾಟ್‌ ನೂತನ ಕೇಶ ವಿನ್ಯಾಸ

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.