ಬಡ ಸಂಸಾರದ ಆಸರೆಯಾಗಿದ್ದ ಒಡಿಶಾದ ಸೋಮನಾಥನ ಕಥೆಗೆ ಸುಖಾಂತ್ಯ

ಮನೋ ಕಾಯಿಲೆ ವಾಸಿಗೊಳಿಸಿ ಹೆತ್ತವರ ಮಡಿಲಿಗೊಪ್ಪಿಸಿದ ಸ್ನೇಹಾಲಯ ಸಂಸ್ಥೆ

Team Udayavani, Feb 13, 2020, 5:55 AM IST

11KSDE5A-SOMANATH

ಕಾಸರಗೋಡು: ಅಂದಂದು ದುಡಿದು ವೃದ್ಧ ತಂದೆ ಸಹಿತ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ ಯುವಕ…..ಸತ್ತೇ ಹೋದನೆಂದು ಬಗೆದ ಮನೆಮಂದಿ…. ಅದೋ, ಎರಡು ವರ್ಷಗಳ ಬಳಿಕ ಆ ಮಗ ಅನಿರೀಕ್ಷಿತವಾಗಿ ಗುಡಿಸಲನ್ನೇರಿದ್ದಾನೆ. ದೀನ ಕುಟುಂಬಕ್ಕೆ ಆದ ಆನಂದ ವರ್ಣನಾತೀತ. ಇತ್ತ, ದಕ್ಷಿಣ ಭಾರತದಲ್ಲಿರುವ “ಸ್ನೇಹಾಲಯ’ವೆಂಬ ಅಭಯ ಕೇಂದ್ರವು ತಮ್ಮ ಮಗನನ್ನು ಬದುಕಿಸಿ, ಸಾಕಿ – ಸಲಹಿ, ಆತನ ಮನೋ ಕಾಯಿಲೆಯನ್ನು ವಾಸಿಗೊಳಿಸಿ ತಮ್ಮ ಮಡಿಲಿಗೊಪ್ಪಿಸಿರುವ ಕಥೆಯನ್ನರಿತ ವೃದ್ಧ ತಾಯ್ತಂದೆಯರಿಗೆ ಏನು ಹೇಳಬೇಕೋ ತೋಚಲಿಲ್ಲ….. ಇದಕ್ಕಿಂತ ಮೇಲಿನ ಪುಣ್ಯವೇನು, ಕೋಟಿ ನಮನಗಳು ಸ್ನೇಹಾಲಯಕ್ಕೆ ಎಂದು ಆನಂದ ಕಣ್ಣೀರು ಹರಿಸಿದರು.

2019 ರ ಮೇ 29. ಮಂಗಳೂರು ನಗರದ ಪದವಿನಂಗಡಿ ಆಸುಪಾಸಿನಲ್ಲಿ ಪೂರ್ಣ ಹುಚ್ಚನಾಗಿ ತಿರುಗಾಡುತ್ತಾ, ಹೊಟ್ಟೆ ಬೆನ್ನಿಗಂಟಿದ ಸ್ಥಿತಿಯಲ್ಲಿ ಉಪವಾಸ ಮರಣವನ್ನು ಇದಿರು ನೋಡುತ್ತಿದ್ದ ಯುವಕನನ್ನು ಮಂಜೇಶ್ವರ ಸ್ನೇಹಾಲಯದ ಅಭಿಮಾನಿಗಳು ಕಂಡು ಸ್ನೇಹಾಲಯ ಮುಖ್ಯಸ್ಥ ಜೋಸೆಫ್‌ ಕ್ರಾಸ್ತಾರನ್ನು ಸಂಪರ್ಕಿಸಿ ಅವರ ನಿರ್ದೇಶದಂತೆ ಆ ಮತಿ ವಿಕಲನನ್ನು ಸ್ನೇಹದ ಬೀಡಿಗೆ ಸೇರಿಸುತ್ತಾರೆ. ಆತನಿಗೆ ಉನ್ನತ ಚಿಕಿತ್ಸೆಯ ಅನಿವಾರ್ಯವನ್ನು ಮನಗಂಡ ಸ್ನೇಹಾಲಯ ಮರುದಿನವೇ ಮಂಗಳೂರಿನ ಯೇನಪೊಯ ಆಸ್ಪತ್ರೆಯಲ್ಲಿ ದಾಖಲಿಸಿ, ಒಂದು ತಿಂಗಳ ತಜ್ಞ ಚಿಕಿತ್ಸೆಯನ್ನು ಒದಗಿಸಿದೆ. ಸಹಜಾವಸ್ಥೆಗೆ ಬಂದ ಮೇಲೆ ಅಭಯ ಕೇಂದ್ರಕ್ಕೆ ಮರಳಿಸಿ ಆತನಿಗೆ ಆಶ್ರಯ, ಆರೈಕೆ ನೀಡಿದೆ.

ನಿತ್ಯ ಚಟುವಟಿಕೆಗಳ ಫಲವಾಗಿ ಶೀಘ್ರ ಚೇತರಿಸಿದ ಆತ ಈಗ ಲವಲವಿಕೆಯ ಯುವಕನಾಗುತ್ತಾನೆ. ದುಡಿಮೆಯಲ್ಲಿ ಆತ ಎತ್ತಿದ ಕೈ, ಹಾಗೆ, ಅಲ್ಲಿನ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಾ ಸಂತೋಷದ ದಿನಗಳನ್ನು ಆಸ್ವಾದಿಸುತ್ತಾನೆ. ಹೀಗಿರಲೊಂದು ದಿನ ಕೇಂದ್ರದ ಮುಖ್ಯಸ್ಥರ ಬಳಿಗೆ ತೆರಳಿ ಊರಿಗೆ ತೆರಳುವ ಬಯಕೆ ವ್ಯಕ್ತಪಡಿಸುತ್ತಾನೆ. ತನ್ನ ಹೆಸರು ಸೋಮನಾಥ ಸಿಂಗ್‌ ಎಂದೂ ಒರಿಸ್ಸಾದ ಬಾಳೇಶ್ವರ ಜಿಲ್ಲೆಯಲ್ಲಿ ಮನೆಯಿರುವುದಾಗಿಯೂ ತಿಳಿಸುತ್ತಾನೆ.

ಆತನು ಸಂಪೂರ್ಣ ಆರೋಗ್ಯವಂತನಾಗಿರುವುದನ್ನು ಗುರುತಿಸಿದ ಸ್ನೇಹಾಲಯವು ಕಳೆದ ವಾರ ಸೋಮನಾಥ ಸಿಂಗ್‌ನನ್ನು ಮುಂಬಯಿಯಿ ಶ್ರದ್ಧಾ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿ ಅವರ ಮೂಲಕ ಆತನ ವಿಳಾಸ ಪತ್ತೆ ಹಚ್ಚಿ ಬಾಳೇಶ್ವರ ಜಿಲ್ಲೆಯ ಮಾಹೇಶ³ಥ ತಾಲೂಕು ಕಾತಕೊಚ್ಚಿ ಗ್ರಾಮದಲ್ಲಿರುವ ಆತನ ಮನೆಗೆ ಸುರಕ್ಷಿತವಾಗಿ ತಲುಪಿಸುತ್ತಾರೆ. ಆ ಮನೆಯ ಸ್ಥಿತಿ ಶೋಚನೀಯ ಎನ್ನುತ್ತಾರೆ ಶ್ರದ್ಧಾ ಕಾರ್ಯಕರ್ತರು. ಕುರುಚಲು ಗುಡಿಸಲು ಅವರದ್ದಾಗಿತ್ತು. ದೂರವಾಣಿ ಸಂಪರ್ಕ ಯಾ ಮೊಬೈಲ್‌ ಅವರಿಗೆ ಇಲ್ಲವಾಗಿತ್ತು. ವಿದ್ಯುತ್‌ ಸಂಪರ್ಕ ಇಲ್ಲ, ಪಾಯಿಖಾನೆ ಕೂಡಾ ಇಲ್ಲದ ದಯನೀಯತೆ. ಈ ಕುಟುಂಬದ ಏಕೈಕ ಆಸರೆಯಾಗಿದ್ದ ಸೋಮನಾಥ. ದಿನಕೂಲಿ ಕಾರ್ಮಿಕ. ಎರಡು ವರ್ಷಗಳ ಹಿಂದೆ ಕೆಲಸ ಅರಸಿ ತೆರಳಿದಾತ ಬಳಿಕ ಮನೆ ಸೇರಿದ್ದು ಈಗ. ಮನೆ ಮಂದಿ ಹುಡುಕಾಡದ ಸ್ಥಳವಿರಲಿಲ್ಲ. ದೂರದ ನಿರೀಕ್ಷೆಯನ್ನೂ ಕೈಬಿಟ್ಟಿದ್ದರು. ಆದರೆ, ದೇವರು ಈ ಕುಟುಂಬದ ಕೈ ಬಿಟ್ಟಿರಲಿಲ್ಲ. ಸ್ನೇಹಾಲಯದ ಪುಣ್ಯಕಾರ್ಯದಿಂದ ಹಾಗೆ ಮತ್ತೂಂದು ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.