4 ಕೊರಗ ಕುಟುಂಬಗಳಿಗೆ ಆರ್‌ಸಿಸಿ ಮನೆಯ ಭಾಗ್ಯ
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಪಂಚಾಯತ್ ಅನುದಾನ
Team Udayavani, Feb 13, 2020, 5:50 AM IST
ಬಜಪೆ: ಬಜಪೆ ಗ್ರಾ.ಪಂ. ವ್ಯಾಪ್ತಿಯ 5ನೇ ವಾರ್ಡ್‌ನ ಶಾಂತಿಗುಡ್ಡೆಯ ಕೊರಗ ಕಾಲನಿಯ ಕೊರಗ ಜನಾಂಗದ 4 ಕುಟುಂಬದ ನಾದುರಸ್ತಿಯಲ್ಲಿದ್ದ ಮನೆಗಳಿಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಅನುದಾನಕ್ಕೆ ಪಂಚಾಯತ್ ಅನುದಾನವೂ ನೀಡುತ್ತಿದ್ದು ಆರ್‌ಸಿಸಿ ಮನೆ ನಿರ್ಮಾಣಕ್ಕೆ ತಯಾರಾಗುತ್ತಿದೆ.
ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಿಂದ ಅನುಮೋದನೆಗೊಂಡು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಅನು ದಾನ, (ಐಟಿಡಿಪಿ)ಯಿಂದ 4 ಮನೆಗಳಿಗೆ ತಲಾ 2ಲಕ್ಷ ರೂ. ಈಗಾಗಲೇ ಅನುದಾನ ಮಂಜೂರಾಗಿದೆ. ಬಜಪೆ ಗ್ರಾ.ಪಂ. ಅನು ದಾನದಿಂದ ತಲಾ 50 ಸಾವಿರ ರೂ.ನಂತ ನಾಲ್ಕು ಮನೆಗಳಿಗೆ ಅನುದಾನ ನೀಡಲಾಗುತ್ತಿದೆ.
7 ಮನೆಗಳು ನಾದುರಸ್ತಿ
2011ರ ಸರ್ವೆ ಪ್ರಕಾರ ಜಿಲ್ಲೆಯಲ್ಲಿ ಕೊರಗರ 6,064 ಜನಸಂಖ್ಯೆ ಇದ್ದು, ಮಂಗಳೂರು ಗ್ರಾಮಾಂತರದಲ್ಲಿ 2,705 ಜನಸಂಖ್ಯೆ ಹಾಗೂ ಬಜಪೆ ಗ್ರಾ.ಪಂ.ನಲ್ಲಿ 40 ಜನಸಂಖ್ಯೆ 8 ಕುಟುಂಬಗಳಿವೆ. ಇದರಲ್ಲಿ 7 ಕುಟುಂಬಗಳ ಮನೆ ನಾದು ರಸ್ತಿ ಯಲ್ಲಿವೆ. ಅನ್ನು ಕೊರಗ, ಅಪ್ಪಿ ಆನಂದ, ಹೊನ್ನು ಕೊರಗ,ಪೊನ್ನು ಕೊರಗ ಇವರ ನಾಲ್ಕು ಮನೆಗಳನ್ನು ಈ ಬಾರಿಯ ಯೋಜನೆಯಲ್ಲಿ ಆರ್‌ಸಿಸಿ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಯಾಗಿದೆ. ಬಾಕಿ ಉಳಿದ ಅಣ್ಣಿ ಕೊರಗ, ಲಕ್ಷ್ಮೀ, ರೂಪಾ ಅವರ ಆರ್‌ಟಿಸಿ ಅವರ ಹೆಸರಿನಲ್ಲಿರದ ಕಾರಣ ಅದನ್ನು ಸರಿಪಡಿಸಿ. ಮುಂದಿನ ಅನುದಾನದಲ್ಲಿ ಮನೆಗಳ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಗ್ರಾ.ಪಂ. ನಿರ್ಧಾರ ತೆಗೆದುಕೊಂಡಿದೆ.
ಈ ನಾಲ್ಕು ಮನೆಗಳಿಗೆ 2ವರ್ಷಗಳಿಂದ ಮಳೆಗಾಲದಲ್ಲಿ ಪಂಚಾಯತ್‌ನಿಂದ ಟರ್ಪಾ ಲನ್ನು ನೀಡಲಾಗಿತ್ತಿತ್ತು. ಈ ಬಾರಿ ಮನೆಗಳು ಬೀಳುವ ಸ್ಥಿತಿಯಲ್ಲಿ ದ್ದರಿಂದ ಮನೆ ನಿರ್ಮಾಣಕ್ಕಾಗಿ ಇಲಾ ಖೆ ಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿ ಸಲಾ ಗಿತ್ತು. ಮನೆ ನಿರ್ಮಾಣಕ್ಕೆ 2ಲಕ್ಷ ರೂ. ಅನುದಾನ ಸಾಲದು. ಇದಕ್ಕಾಗಿ ಪಂಚಾಯತ್‌ನಿಂದ 50ಸಾವಿರ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದೆ ಬೇರೆ ಅನುದಾನದಿಂದ ಈ ಮನೆ ಪೂರ್ಣಗೊಳಿಸಲಾಗುವುದು. ಉಳಿದ 3 ಕುಟುಂಬಗಳ ಜಾಗದ ದಾಖಲೆಯನ್ನು ಸರಿಪಡಿಸಿ, ಆರ್‌ಸಿಸಿ ಮನೆಯನ್ನಾಗಿ ಕಟ್ಟುವ ಉದ್ದೇಶವಿದೆ ಎಂದು ಗ್ರಾ.ಪಂ. ಸದಸ್ಯ ಸುರೇಂದ್ರ ಪೆರ್ಗಡೆ ತಿಳಿಸಿದ್ದಾರೆ.
ಪಂಚಾಯತ್‌ನಿಂದ ಪ್ರೋತ್ಸಾಹ
ಗ್ರಾ.ಪಂ. ಅಧ್ಯಕ್ಷೆ ರೋಜಿ ಮಥಾ ಯಸ್, ಸದಸ್ಯರಾದ ಸುರೇಂದ್ರ ಪೆರ್ಗಡೆ, ಲೋಕೇಶ್ ಪೂಜಾರಿ ಹಾಗೂ ಪಿಡಿಒ ಸಾಯೀಶ್ ಚೌಟ ಅವರು ಈಗಾಗಲೇ ಕೊರಗರ ಕಾಲನಿಯ ಮನೆಗಳಿಗೆ ಭೇಟಿ ನೀಡಿ, ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿ, ಅವರಿಗೆ ಅನುಕೂಲವಾಗುವಂತೆ ಆರ್ ಸಿಸಿ ಮನೆಗಳನ್ನು ನಿರ್ಮಾಣ ಮಾಡಬಹುವುದು. ಕೊರಗರ ಕುಟುಂಬದ ಸದಸ್ಯರನ್ನು ಕರೆಸಿ ಅವರ ಅಭಿಪ್ರಾಯಗಳನ್ನು ತಿಳಿದು ಮುಂದಿನ ಮನೆ ನಿರ್ಮಾಣದ ಬಗ್ಗೆ ಕ್ರಮ ತೆಗೆದುಕೊಳ್ಳಲು ಹಾಗೂ ಅದಕ್ಕೆ ಬೇಕಾದ ಹೆಚ್ಚುವರಿ ಹಣವನ್ನು ಕ್ರೋಢಿಕರಿಸುವ ಬಗ್ಗೆ ಚರ್ಚಿಸಲಾಗಿದೆ. ಒಂದು ಆರ್‌ಸಿಸಿ ಮನೆಗೆ 4.5ಲಕ್ಷ ರೂ. ಅಗತ್ಯವಿದ್ದು ಈ ಬಗ್ಗೆ ಸಮಾಜ ಕಲ್ಯಾಣ ಹಾಗೂ ಪಂಚಾಯತ್‌ನ ಮುಂದಿನ ಹಣಕಾಸು ಯೋಜನೆಯ ಶೇ. 25ರ ಹಣವನ್ನು ಬಿಡುಗಡೆ ಮಾಡುವ ಬಗ್ಗೆಯೂ ಚಿಂತಿಸಲಾಗಿದೆ.
ಮನೆ ನಿರ್ಮಾಣಕ್ಕೆ 2 ಲಕ್ಷ ರೂ. ಅನುದಾನ
ಅರ್ಜಿಯೊಂದಿಗೆ ಅವರ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಆರ್‌ಟಿಸಿ, ಬ್ಯಾಂಕ್ ಖಾತೆ ಬಗ್ಗೆ ದಾಖಲೆ ಹಾಗೂ ಪಂಚಾಯತ್‌ನಿಂದ ಶಿಫಾರಸು ಪತ್ರವನ್ನು ನೀಡಿದಲ್ಲಿ ಅವರಿಗೆಲ್ಲರಿಗೂ ಅನುಮೋದನೆ ನೀಡಲಾಗಿದೆ. ಈ ಮುಂಚೆ ಮನೆ ಕಟ್ಟಲು 2ಲಕ್ಷ ರೂ. ಅನುದಾನ ನೀಡಲಾಗುತ್ತಿತ್ತು. 2019-20ಸಾಲಿನಿಂದ ಮನೆ ನಿರ್ಮಾಣಕ್ಕಾಗಿ 3.5ಲಕ್ಷ ರೂ ಅನುದಾನ ನೀಡಲಾಗುತ್ತದೆ.
- ಸೋಮಶೇಖರ್, ಸಮನ್ವಯಾಧಿಕಾರಿ, ಗಿರಿಜನ ಅಭಿವೃದ್ಧಿ ಯೋಜನೆ, ಮಂಗಳೂರು
- ಸುಬ್ರಾಯ ನಾಯಕ್, ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.