ಮಗನ ವರ್ತನೆಯಿಂದ ನೊಂದು ತಾಯಿ ಉಪವಾಸ
19 ವಯೋಮಿತಿ ವಿಶ್ವಕಪ್ ನಂತರ ಭಾರತ-ಬಾಂಗ್ಲಾ ಆಟಗಾರರ ನಡುವೆ ತಳ್ಳಾಟ
Team Udayavani, Feb 13, 2020, 9:26 AM IST
ಜೋಧಪುರ (ರಾಜಸ್ಥಾನ): ಫೆ.9ರಂದು ನಡೆದ 19 ವಯೋಮಿತಿ ವಿಶ್ವಕಪ್ ಫೈನಲ್ ನಂತರ ಭಾರತ-ಬಾಂಗ್ಲಾ ಆಟಗಾರರ ನಡುವೆ ಚಕಮಕಿ ನಡೆಯಿತು.
ಪರಿಣಾಮ ಭಾರತದ ಸ್ಪಿನ್ನರ್ ರವಿ ಬಿಷ್ಣೋಯಿಗೆ ನಿಷೇಧಾಂಕ ಹೇರಲಾಗಿದೆ. ಈ ಘಟನೆಯ ನಂತರ ಮುಂದಿನ ಒಂದು ದಿನದವರೆಗೆ ನನ್ನ ಪತ್ನಿ ಏನನ್ನೂ ತಿಂದಿಲ್ಲ ಎಂದು ರವಿ ತಂದೆ ಮಾಂಗಿಲಾಲ್ ನೊಂದು ನುಡಿದಿದ್ದಾರೆ. ನನ್ನ ಪುತ್ರನಿಗೆ ಬಹಳ ತಾಳ್ಮೆ. ಅವನು ಯಾಕೆ ಹಾಗೆ ತಾಳ್ಮೆ ಕಳೆದುಕೊಂಡನೋ ನನಗೆ ಗೊತ್ತಾಗುತ್ತಿಲ್ಲ ಎಂದು ಮಾಂಗಿಲಾಲ್ ಹೇಳಿದ್ದಾರೆ.
ಆಗಿದ್ದೇನು?: ಫೆ.9ರಂದು ನಡೆದ 19 ವಯೋಮಿತಿ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತುಹೋಯಿತು. ಪಂದ್ಯ ಮುಗಿದ ಕೂಡಲೇ ಬಾಂಗ್ಲಾ ಕ್ರಿಕೆಟಿಗರು ದುರ್ವರ್ತನೆ ತೋರಿದ ಪರಿಣಾಮ, ಭಾರತ-ಬಾಂಗ್ಲಾ ಆಟಗಾರರ ನಡುವೆ ಚಕಮಕಿ ನಡೆಯಿತು. ಬಾಂಗ್ಲಾದ ಅಭಿಮಾನಿಗಳು ಮೈದಾನದೊಳಕ್ಕೆ ನುಗ್ಗಿ ನರ್ತಿಸಿ, ಭಾರತೀಯರನ್ನು ಹಂಗಿಸಿದರು. ಇದರಿಂದ ಎರಡೂ ತಂಡಗಳ ನಡುವೆ ತಳ್ಳಾಟ ನಡೆಯಿತು. ಈ ವೇಳೆ ಬಾಂಗ್ಲಾದ ಮೂವರು, ಭಾರತದ ಇಬ್ಬರಿಗೆ ನಿಷೇಧಾಂಕ ಹೇರಲಾಯಿತು. ಪಂದ್ಯದಲ್ಲಿ ಅಮೋಘ ಸ್ಪಿನ್ ದಾಳಿ ಮಾಡಿದ್ದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ, ತನ್ನ ಆಟಗಾರರನ್ನು ಕಾಪಾಡಿಕೊಳ್ಳುವ ಇಕ್ಕಟ್ಟಿನಲ್ಲಿ ತಳ್ಳಾಟ ನಡೆಸಿದ್ದಾರೆ.
ಘಟನೆಯ ತರುವಾಯ, ಭಾರತದ ನಾಯಕ ಪ್ರಿಯಂ ಗರ್ಗ್, ಬಾಂಗ್ಲಾ ಆಟಗಾರರ ವರ್ತನೆ ಕೊಳಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸೋಲು ಗೆಲುವು ಮಾಮೂಲಾಗಿದ್ದರಿಂದ ನಾವು ಆರಾಮಾಗಿಯೇ ಇದ್ದೆವು. ಆದರೆ ಅವರು ಮಾತ್ರ ವಿಪರೀತವಾಗಿ ವರ್ತಿಸಿದರು ಗರ್ಗ್ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.