ಗೋಪಾಲ ಆಚಾರ್ಯರಿಗೆ ಭೋಜಪ್ಪ ಸುವರ್ಣ ಪ್ರಶಸ್ತಿ
Team Udayavani, Feb 14, 2020, 4:50 AM IST
ಉಡುಪಿ ಗುಂಡಿಬೈಲಿನ ಯಕ್ಷಗಾನ ಕಲಾಕ್ಷೇತ್ರವು 2019ನೇ ಸಾಲಿನ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿಗಾಗಿ ಯಕ್ಷರಂಗದ ಚಿರಯುವಕ ತೀರ್ಥಹಳ್ಳಿ ಗೋಪಾಲ ಆಚಾರ್ಯರನ್ನು ಆಯ್ಕೆ ಮಾಡಿದೆ.
ತೀರ್ಥಹಳ್ಳಿ ಗೋಪಾಲ ಆಚಾರ್ಯ 3ನೇ ತರಗತಿ ವಿದ್ಯಾಭ್ಯಾಸದ ಬಳಿಕ ಯಕ್ಷಗಾನದತ್ತ ಆಕರ್ಷಿತರಾಗಿ ಹವ್ಯಾಸಿ ಕಲಾವಿದರಾಗಿದ್ದ ತಂದೆಯವರಿಂದ ಯಕ್ಷಗಾನದ ಪ್ರಾಥಮಿಕ ಪಾಠವನ್ನು ಕರಗತ ಮಾಡಿಕೊಂಡು ಮುಂದೆ ಯಕ್ಷಗಾನ ನೃತ್ಯ ಗುರುಗಳೂ ಹವ್ಯಾಸಿ ಕಲಾವಿದರೂ ಆದ ಕೃಷ್ಣೋಜಿ ರಾವ್ ಇವರಲ್ಲಿ ನೃತ್ಯಾಭಿನಯ ಅಭ್ಯಾಸ ನಡೆಸಿದರು. 1970ರಲ್ಲಿ ರಂಗ ಪ್ರವೇಶ ಮಾಡಿದ ಬಳಿಕ ರೆಂಜದಕಟ್ಟೆ ಮೇಳ, ನಾಗರಕೋಡಿಗೆ , ಹೊಸನಗರ, ಗೋಳಿಗರಡಿ, ಸಿರ್ಸಿ ಪಂಚಲಿಂಗೇಶ್ವರ ಮೇಳಗಳಲ್ಲಿ ಕಲಾಸೇವೆಯನ್ನು ಮಾಡಿದ ಇವರು ಸಾಲಿಗ್ರಾಮ ಮೇಳದಲ್ಲಿ 10 ವರ್ಷ, ಪೆರ್ಡೂರು ಮೇಳದಲ್ಲಿ 27 ವರ್ಷಗಳ ಕಲಾ ಸೇವೆಯೊಂದಿಗೆ ಸುಮಾರು 5 ದಶಕಗಳ ಕಾಲ ವೈವಿಧ್ಯಮಯ ಪಾತ್ರಗಳಲ್ಲಿ ರಂಜಿಸಿದ್ದಾರೆ. ಅಭಿಮನ್ಯು, ಬಭುÅವಾಹನ, ಕುಶ-ಲವ, ಧರ್ಮಾಂಗದ, ರುಕಾ¾ಂಗದ, ಶುಭಾಂಗ, ಚಿತ್ರಕೇತ-ಚಿತ್ರವಾಹನ, ಮೈಂದ-ದ್ವಿವಿದ ಮೊದಲಾದ ಪಾತ್ರಗಳಲ್ಲಿ ಮಿಂಚಿದರೆ, ಕಾಲ್ಪನಿಕ ಪ್ರಸಂಗಗಳಲ್ಲಿ ದಾಖಲೆ ನಿರ್ಮಿಸಿದ್ದ ನಾಗಶ್ರೀ, ಚೆಲುವೆ ಚಿತ್ರಾವತಿ, ಶ್ರೀದೇವಿ ಬನಶಂಕರಿ, ರತಿರೇಖಾ ಮೊದಲಾದ ಪ್ರದರ್ಶನಗಳಲ್ಲಿ ಜನಮನ ಗೆದ್ದರು. ಪ್ರಸ್ತುತ ನಿವೃತ್ತಿ ಪಡೆದು ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ.
ಯಕ್ಷಗಾನ ಕಲಾಕ್ಷೇತ್ರದ 69ನೇ ವಾರ್ಷಿಕೋತ್ಸವ ಸಂಭ್ರಮ ಫೆ. 22 ಹಾಗೂ 23 ನಡೆಯಲಿದ್ದು , ಫೆ. 23ರರಂದು ಪ್ರಶಸ್ತಿ ಪ್ರದಾನ ನಡೆಸಲಾಗುವುದು.
-ಜಯಂತ್ ಕಾಪು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.