ಹೃನ್ಮನ ಸೂರೆಗೊಂಡ ಕಾರ್ತ್ಯ – ರತ್ನಾವತಿ ಕಲ್ಯಾಣ


Team Udayavani, Feb 14, 2020, 4:55 AM IST

kartya

ನೀಲಾವರ ಮಹಿಷಮರ್ದಿನಿ ದಶಾವತಾರ ಯಕ್ಷಗಾನ ಮೇಳದ ಯಕ್ಷಗಾನ ಪ್ರದರ್ಶನವೊಂದು ಇತ್ತೀಚೆಗೆ ಕೂರಾಡಿಯಲ್ಲಿ ಜರಗಿತು.ಕಾರ್ತ್ಯ – ರತ್ನಾವತಿ ಕಲ್ಯಾಣ ಎಂಬೆರಡು ಆಖ್ಯಾನಗಳನ್ನು ರಂಗದಲ್ಲಿ ಅನಾವರಣಗೊಳಿಸಿ ರಂಗರಸಿಕರ ಹೃನ್ಮನ ಸೂರೆಗೊಳ್ಳುವಲ್ಲಿ ಕಲಾವಿದರ ಶ್ರಮ ಅನನ್ಯವಾಗಿತ್ತು.

ಆರಂಭದಲ್ಲಿ ನಡೆದ ಕಾರ್ತ್ಯ ಪ್ರಸಂಗದಲ್ಲಿ ಲಂಕಾಧಿಪತಿ ರಾವಣೇಶ್ವರ ದಿಗ್ವಿಜಯಾರ್ಥಿಯಾಗಿ ಅನುಜ ವಿಭೀಷಣ, ಮಂತ್ರಿ ಪ್ರಹಸ್ತನೊಂದಿಗೆ ಅಬ್ಬರದ ರಂಗಪ್ರವೇಶ. ರಾವಣನಾಗಿ ವಿಠuಲ ಚೋರಾಡಿ ಪೀಠಿಕೆಯಲ್ಲಿ ವಿಷಯ ಮಂಡನೆ ತುಸು ಕಡಿಮೆಯಾದರೂ ಕುಣಿತ – ಅಭಿನಯದಲ್ಲಿ ಸೈ ಎನಿಸಿಕೊಂಡರು . ವಿಭೀಷಣ ( ಗಂಗಾಧರ ಹೊನ್ನಾವರ ) , ಪ್ರಹಸ್ತ (ಗಿರೀಶ ಮಾವಿನಕಟ್ಟೆ ) ಇವರೀರ್ವರ ಹಿತಮಿತ ಮಾತುಗಾರಿಕೆ , ನಾಟ್ಯ ಕೌಶಲ ಹಿತವೆನಿಸಿತು.

ಪ್ರಸಂಗದ ಕೇಂದ್ರ ಬಿಂದು ಕಾರ್ತವೀರ್ಯನ ಪಾತ್ರದಲ್ಲಿ ರಾಘವೇಂದ್ರ ಶೆಟ್ಟಿ ಬಡಾಬಾಳು ಅಭಿನಯಿಸಿದ ಪರಿ ಮೆಚ್ಚಬೇಕು . ಪೀಠಿಕೆಯಲ್ಲಿ ತನ್ನ ಪೂರ್ವಾಪರವನ್ನು ತೆರೆದಿಟ್ಟ ಬಗೆ , ಸಾಹಿತ್ಯ ಮಿಳಿತ ವಾಗ್ವೆ„ಖರಿ , ಸಂಪ್ರದಾಯಬದ್ಧ ಕುಣಿತ ಜನಮಾನಸದಲ್ಲಿ ಅಚ್ಚೊತ್ತಿ ನಿಲ್ಲುವಂತೆ ಮಾಡಿತು . ಸಖೀಯರೊಂದಿಗೆ (ರಾಘವೇಂದ್ರ ತೀರ್ಥಹಳ್ಳಿ, ರಾಘವೇಂದ್ರ ಜೋಗಿ ) ಕಾರ್ತವೀರ್ಯ ವನವಿಹಾರದಲ್ಲಿ ವಿಹರಿಸುವ ಸಂದರ್ಭ; ನೀಲ ಗಗನದೊಳು …ಮೇಘಗಳ … ಹಾಡಿಗೆ ನಾಟ್ಯ ವೈಭವ ಸೊಗಸಾಗಿತ್ತು .

ರಾವಣನ ಸೊಕ್ಕನ್ನು ಮುರಿಯುವುದರ ಜತೆಗೆ ಕೈಸೆರೆಯಾಗಿ ಸಿಕ್ಕ ಆತನನ್ನು ಮೂದಲಿಸುವ ಸನ್ನಿವೇಶದಲ್ಲಿನ “ಸಿಕ್ಕಿದೆಯಲೋ ದೈತ್ಯರಾಯ …’ ಎನ್ನುವ ಪದ್ಯಕ್ಕೆ ಕಾರ್ತವೀರ್ಯನ ಅಭಿನಯ ಅಮೋಘವಾಗಿತ್ತು .ಎರಡನೇ ಪ್ರಸಂಗ ರತ್ನಾವತಿ ಕಲ್ಯಾಣ. ಕವಿಮುದ್ದಣ ರಚಿಸಿದ ಯಕ್ಷಕೃತಿ ಈಗಾಗಲೇ ಪ್ರೇಕ್ಷಕರ ಮನೋಭೂಮಿಕೆಯಲ್ಲಿ ಸ್ಥಿರವಾಗಿ ನಿಂತ ಪ್ರಸಂಗ. ದೃಢವರ್ಮವಾಗಿ ರಂಗಪ್ರವೇಶ ಮಾಡಿದ ಗುರುಪ್ರಸಾದ್‌ ಸರಳಾಯ ಇವರ ಮಾತಿನಲ್ಲಿ ಸ್ಪಷ್ಟತೆ , ಸ್ವರಭಾರ, ಹಿತಮಿತ ಹೆಜ್ಜೆಗಾರಿಕೆ , ಅಭಿನಯಗಳೆಲ್ಲವೂ ಪ್ರಸಂಗಕ್ಕೆ ವಿಶೇಷ ಕಳೆ ಕೊಟ್ಟಿತು. ಭದ್ರಸೇನನಾಗಿ ಚಂದ್ರಶೇಖರ ಹೆಬ್ಬುರುಳಿ ಇವರ ಸ್ವರಭಾರ ಹಿತವೆನಿಸದಿದ್ದರೂ ವೀರಾವೇಶದ ಪದ್ಯಕ್ಕೆ ಇವರ ನೃತ್ಯಾಭಿನಯ ಮೆಚ್ಚುಗೆಯಾಯಿತು . ರತ್ನಾವತಿಯಾಗಿ ಗಣೇಶ ಉಪ್ಪುಂದರ ಒನಪು ,ವಯ್ನಾರ , ಬೆಡಗುಬಿನ್ನಾಣ ಆಖ್ಯಾನಕ್ಕೆ ಕಳಸ ಇಟ್ಟಂತ್ತಿತ್ತು. ಭಾವಸೃಷ್ಟಿಯನ್ನು ತೆರೆದಿಟ್ಟ ಬಗೆ ನಯ ನಾಜೂಕಿನ ಕುಣಿತ ಮೆಚ್ಚುಗೆಗೆ ಪಾತ್ರವಾಯಿತು. ಸಿಡಿಯುವ ಶೌರ್ಯನಾಗಿ, ಮಂಡಿವೀರನಾಗಿ , ಪಾದರಸ ಚಲನೆಯ ಕುಣಿತಗಾರನಾಗಿ ಕಾಣಿಸಿಕೊಂಡವನು ವತ್ಸಾಖ್ಯ ಪಾತ್ರಧಾರಿ ಕುಮಾರ ಹೆಬ್ಬುರುಳಿ. ವತ್ಸಾಖ್ಯ ಹಾಗೂ ರತ್ನಾವತಿ ಇವರ ಕಲ್ಯಾಣದೊಂದಿಗೆ ರತ್ನಾವತಿ ಕಲ್ಯಾಣಕ್ಕೆ ತೆರೆ ಬೀಳುತ್ತದೆ. ಎರಡೂ ಪ್ರಸಂಗಗಳಲ್ಲಿ ತನ್ನದೇ ಘನ ಹಾಸ್ಯ ಸೃಷ್ಟಿಯ ಸಂಕೋಲೆಯಿಂದ ಪ್ರೇಕ್ಷಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ನಾರಾಯಣ ಅರೋಡಿಯವರು.

ಹಿಮ್ಮೇಳದಲ್ಲಿ ಅಣ್ಣಪ್ಪ ಹಳ್ಳಿಹೊಳೆ ಇವರ ಭಾಗವತಿಕೆ ಮೊಳಗಿತು. ಯುವ ಭಾಗವತ ಪಲ್ಲವ ಗಾಣಿಗರ ಪದ್ಯದಲ್ಲಿ ತಂದೆ ಹೆರಂಜಾಲು ಗೋಪಾಲ ಗಾಣಿಗರ ಸ್ವರಸಿರಿ ಎದ್ದು ಕಾಣುತ್ತಿತ್ತು. ಮದ್ದಳೆ ಚಂಡೆಯಲ್ಲಿ ನಾಗೇಶ ಭಂಡಾರಿ , ಬಾಲಚಂದ್ರ ಶಿರಾಲಿ ,ರಾಮಬಾಯಿರಿ ಕೂರಾಡಿ ಸಹಕರಿಸಿದರು.

-ಕೂರಾಡಿ ಕೇಶವ ಆಚಾರ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.