ಮಂಜೇಶ್ವರದ ಸಮಗ್ರ ಇತಿಹಾಸ ದಾಖಲೀಕರಣ
Team Udayavani, Feb 14, 2020, 5:17 AM IST
ಕಾಸರಗೋಡು: ದ್ರಾವಿಡ ಸಂಸ್ಕಾರಗಳ ಸಂಗಮಭೂಮಿ ಮಂಜೇಶ್ವರದ ಸಮಗ್ರ ಇತಿಹಾಸವನ್ನು ದಾಖಲಿಸುವ ಯೋಜನೆ ಸಿದ್ಧವಾಗುತ್ತಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ ಆಶ್ರಯದಲ್ಲಿ ವಿವಿಧ ವಲಯಗಳ ಪರಿಣತರಾಗಿರುವ ನೂರಾರು ಸಂಶೋಧಕರು ನಡೆಸುವ ಈ ಚರಿತ್ರೆ ರಚನೆಯೊಂದಿಗೆ ಈ ಯೋಜನೆ ತಯಾರಾಗುತ್ತಿದೆ.
ಮಂಜೇಶ್ವರ, ಕುಂಬಳೆ, ಬದಿಯಡ್ಕ ಪ್ರದೇಶಗಳು ಸೇರುವ ಗಡಿವಲಯದ ಸಾವಿರಾರು ವರ್ಷಗಳ ಮಹತ್ವದ ಆಗುಹೋಗುಗಳನ್ನು ಈ ಚರಿತ್ರೆಯಲ್ಲಿ ದಾಖಲಿಸಲಾಗುವುದು. ಯೋಜನೆಯ ಪ್ರಧಾನ ಸಂಪಾದಕರಾಗಿರುವ, ಕಣ್ಣೂರು ವಿವಿಯ ಕಾಸರಗೋಡು ವಿದ್ಯಾನಗರದ ಚಾಲ ಕ್ಯಾಂಪಸ್‌ನ ನಿರ್ದೇಶಕ ಡಾ| ರಾಜೇಶ್ ಬೆಜ್ಜಂಗಳ ಅವರ ನೇತೃತ್ವದಲ್ಲಿ ಈ ಇತಿಹಾಸ ರಚನೆ ಆರಂಭಗೊಂಡಿದೆ.
ಜನಮಾನಸದಿಂದ ಇಲ್ಲಿನ ಐತಿಹಾಸಿಕ ಅಂಶಗಳು ಮಾಸಿಹೋಗದಂತೆ ಅಕಾಡೆ ಮಿಕ್ ರೂಪದಲ್ಲಿ ದಾಖಲೀಕರಣ ಇದರ ಮೂಲ ಉದ್ದೇಶ ಎಂದು ಡಾ| ಬೆಜ್ಜಂಗಳ ಅಭಿಪ್ರಾಯಪಡುತ್ತಾರೆ. ಪ್ರತಿ ವಿಚಾರ ಗಳ ಕುರಿತು ಸುಮಾರು 300 ಲೇಖನಗಳು ಈ ಗ್ರಂಥದಲ್ಲಿರುವುದು. ಈ ವರ್ಷ ಮೇ ತಿಂಗಳಲ್ಲಿ ಸಂಶೋಧನಾ ಲೇಖನಗಳು ಸಲ್ಲಿಕೆಯಾಗಲಿವೆ. ಈ ಲೇಖನಗಳ ಸೂûಾ¾ವಲೋಕನ ನಂತರ ಎಪಿಗ್ರಾಫಿಕ್ ಕ್ರೋಢೀಕರಣ ನಡೆಸಿ ಆಗಸ್ಟ್ ತಿಂಗಳಲ್ಲಿ ಗ್ರಂಥ ಲೋಕಾರ್ಪಣೆ ನಡೆಸುವ ಉದ್ದೇಶವಿದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದಲ್ಲಿ ಕನ್ನಡ ಬಾಷೆಯಲ್ಲಿ ಈ ಗ್ರಂಥ ಸಿದ್ಧವಾಗಲಿದೆ. ನಂತರ ಮಲೆಯಾಳ ಮತ್ತು ಇಂಗ್ಲೀಷ್‌ನಲ್ಲೂ ಅನುವಾದಗೊಳ್ಳಲಿದೆ.
ಸಮಗ್ರ ದಾಖಲೀಕರಣ
ವಿವಿಧ ಸಾಂಸ್ಕೃತಿಕ ಧಾರೆಗಳಾದ ಪ್ರತ್ಯೇಕ ವಲಯಗಳ ಇತಿಹಾಸ, ಐತಿಹಾಸಿಕ ಪುರುಷರು, ಭಾಷಾ ವೈವಿಧ್ಯ, ಧಾರ್ಮಿಕ, ಮತೀಯ ಪಂಗಡಗಳು, ಕೃಷಿ, ವ್ಯಾಪಾರ, ಉದ್ದಿಮೆ-ಆರ್ಥಿಕ ವ್ಯವಹಾರಗಳು, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶಿಕ್ಷಣ ಸಂಸ್ಥೆಗಳು, ಕಲಾಪ್ರಕಾರಗಳ ಚರಿತ್ರೆ ಸಹಿತ ಸಮಗ್ರ ವಿಚಾರಗಳು ಈ ರಚನೆಯಲ್ಲಿ ಅಳವಡಗೊಳ್ಳಲಿವೆ. ಮಂಜೇಶ್ವರದ ಸಾಂಸ್ಕೃತಿಕ ವೈವಿಧ್ಯ ಬಗ್ಗೆ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರೆಫೆರೆನ್ಸ್ ಗ್ರಂಥ ರೂಪದಲ್ಲಿ ಇದು ಪ್ರಯೋಜನಕಾರಿಯಾಗುವಂತೆ ಇದರ ಸಿದ್ಧತೆ ನಡೆಯುತ್ತಿದೆ.
– ಡಾ| ರಾಜೇಶ್ ಬೆಜ್ಜಂಗಳ,
ನಿರ್ದೇಶಕ, ಕಣ್ಣೂರು ವಿವಿಯ ಚಾಲ ಕ್ಯಾಂಪಸ್
5 ಲಕ್ಷ ರೂ. ಮಂಜೂರು
ಮಂಜೇಶ್ವರದ ಸಮಗ್ರ ಇತಿಹಾಸ ರಚನೆ ಯೋಜನೆಯ ಮೊದಲ ಹಂತವಾಗಿ 5 ಲಕ್ಷ ರೂ. ಮಂಜೂರು ಮಾಡಲಾಗಿದೆ.
– ಎ.ಕೆ.ಎಂ.ಅಶ್ರಫ್,
ಅಧ್ಯಕ್ಷ, ಮಂಜೇಶ್ವರ ಬ್ಲಾಕ್ ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.