ಭಾರತಕ್ಕೆ ಇಂದಿನಿಂದ “ಟೆಸ್ಟ್ ಅಭ್ಯಾಸ’
ನ್ಯೂಜಿಲ್ಯಾಂಡ್ ಇಲೆವೆನ್ ವಿರುದ್ಧ ತ್ರಿದಿನ ಪಂದ್ಯ
Team Udayavani, Feb 14, 2020, 7:05 AM IST
ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ಪ್ರವಾಸದ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡು, ಏಕದಿನ ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿ ಅಸ್ಥಿರ ಕ್ರಿಕೆಟಿಗೆ ಸಾಕ್ಷಿಯಾದ ಭಾರತ ತಂಡವಿನ್ನು 2 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಬೇಕಿದೆ. ಇದರ ತಯಾರಿಗಾಗಿ ಶುಕ್ರವಾರದಿಂದ ನ್ಯೂಜಿಲ್ಯಾಂಡ್ ಇಲೆವೆನ್ ವಿರುದ್ಧ ತ್ರಿದಿನ ಅಭ್ಯಾಸ ಪಂದ್ಯವನ್ನು ಆಡಲಿದೆ. ಟೆಸ್ಟ್ ತಂಡದ ಕುಂದುಕೊರತೆಗಳನ್ನು ನೀಗಿಸಿಕೊಳ್ಳಲು ಇದು ಸಹಕಾರಿ ಯಾಗಲಿದೆ.
ಇನ್ನೊಂದೆಡೆ ಆತಿಥೇಯರಿಗೂ ಇದು ಅಭ್ಯಾಸ ಪಂದ್ಯ. ಸೀನಿಯರ್ ತಂಡದ ಬಹಳಷ್ಟು ಆಟಗಾರರು ಇಲ್ಲಿ ಆಡಲಿದ್ದು, ಟೆಸ್ಟ್ ಸರಣಿಗೆ ತಯಾರಿ ನಡೆಸಲಿದ್ದಾರೆ. ಲೆಗ್‌ಸ್ಪಿನ್ನರ್ ಸೋಧಿ, ಆಲ್‌ರೌಂಡರ್ ನೀಶಮ್, ಕೀಪರ್ ಸೀಫರ್ಟ್, ವೇಗಿಗಳಾದ ಕ್ಯುಗೆಲೀನ್, ಟಿಕ್ನರ್ ಮೊದಲಾದವರೆಲ್ಲ ಆತಿಥೇಯ ತಂಡದ ಪ್ರಮುಖರು. ಪಂದ್ಯ ಸ್ಪಷ್ಟ ಫಲಿತಾಂಶ ಕಾಣದೆ ಹೋದರೂ ಟೆಸ್ಟ್ ಸರಣಿಗೆ ಇದು ಉತ್ತಮ ಅಭ್ಯಾಸ ಒದಗಿಸುವುದರಲ್ಲಿ ಅನುಮಾನವಿಲ್ಲ.
ಓಪನರ್ ಯಾರು?
ರೋಹಿತ್ ಶರ್ಮ ಗೈರಲ್ಲಿ ಭಾರತವಿಲ್ಲಿ ಬದಲಿ ಆರಂಭಕಾರನನ್ನು ಆಡಿಸಬೇಕಿದೆ. ಅಗರ್ವಾಲ್ ಜತೆ ಇನ್ನಿಂಗ್ಸ್ ಆರಂಭಿಸಲು ಪೃಥಿ ಶಾ, ಶುಭಮನ್ ಗಿಲ್ ರೇಸ್‌ನಲ್ಲಿದ್ದಾರೆ. ಭಾರತ “ಎ’ ತಂಡದೊಂದಿಗಿದ್ದ ಗಿಲ್ ಈಗಾಗಲೇ ನ್ಯೂಜಿಲ್ಯಾಂಡ್ “ಎ’ ವಿರುದ್ಧ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಗಿಲ್ ಟೆಸ್ಟ್ ಕ್ಯಾಪ್ ಧರಿಸಲೂಬಹುದು. ಉಳಿದಂತೆ “ಎ’ ತಂಡದಲ್ಲೂ ಆಡಿ ಯಶಸ್ಸು ಕಂಡ ಪೂಜಾರ, ರಹಾನೆ, ವಿಹಾರಿ ಬ್ಯಾಟಿಂಗ್ ಸರದಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನ್ಯೂಜಿಲ್ಯಾಂಡ್ ಟ್ರ್ಯಾಕ್ ಸ್ಪಿನ್ನರ್‌ಗಳಿಗೆ ಸಹಕರಿಸದ ಕಾರಣ ಟೆಸ್ಟ್ ಪಂದ್ಯಕ್ಕೆ ಸಿಂಗಲ್ ಸ್ಪಿನ್ನರ್ ಯೋಜನೆ ಭಾರತದ್ದಾಗಲೂಬಹುದು. ಹೀಗಾಗಿ ಇಲ್ಲಿ ಅಶ್ವಿನ್, ಜಡೇಜ ಪ್ರದರ್ಶನ ನಿರ್ಣಾಯಕವಾಗಲಿದೆ. ಪೇಸ್ ವಿಭಾಗದಲ್ಲಿ ಭಾರತಕ್ಕೆ ಬಹಳಷ್ಟು ಆಯ್ಕೆಗಳಿವೆ. ಬುಮ್ರಾ ಮತ್ತೆ ವಿಕೆಟ್ ಬೇಟೆಯಲ್ಲಿ ತೊಡಗಬೇಕಿದೆ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಾಹಾ, ಹನುಮ ವಿಹಾರಿ, ರವೀಂದ್ರ ಜಡೇಜ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಆರ್. ಅಶ್ವಿನ್, ರಿಷಭ್ ಪಂತ್, ನವದೀಪ್ ಸೈನಿ, ಶುಭಮನ್ ಗಿಲ್.
ನ್ಯೂಜಿಲ್ಯಾಂಡ್ ಇಲೆವೆನ್:
ಡ್ಯಾರಿಲ್ ಮಿಚೆಲ್ (ನಾಯಕ), ಫಿನ್ ಅಲನ್, ಟಾಮ್ ಬ್ರೂಸ್, ಡೇನ್ ಕ್ಲೀವರ್, ಹೆನ್ರಿ ಕೂಪರ್, ಸ್ಕಾಟ್ ಕ್ಯುಗೆಲೀನ್, ಜೇಮ್ಸ್ ನೀಶಮ್, ರಚಿನ್ ರವೀಂದ್ರ, ಟಿಮ್ ಸೀಫರ್ಟ್, ಐಶ್ ಸೋಧಿ, ಬ್ಲೇರ್ ಟಿಕ್ನರ್, ವಿಲ್ ಯಂಗ್. 13ನೇ ಆಟಗಾರರು-ಜೇಮ್ಸ್ ಗಿಬ್ಸನ್ (ಶುಕ್ರವಾರ), ಸ್ಕಾಟ್ ಜಾನ್‌ಸ್ಟನ್ (ಶನಿವಾರ, ರವಿವಾರ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್ ಹೆಸರಿಲ್ಲ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.