ಬಂದರು ಕಾಮಗಾರಿಗೆ ಸ್ಥಳೀಯರ ಅಡ್ಡಿ
Team Udayavani, Feb 14, 2020, 6:26 PM IST
ಸಾಂಧರ್ಬಿಕ ಚಿತ್ರ
ಹೊನ್ನಾವರ: ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕಾರ್ಯಚಟುವಟಿಕೆಗೆ ಬೇಕಾದ ಬೃಹತ ಗಾತ್ರದ ಸಲಕರಣೆಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಸ್ಥಳೀಯರು ವಾಹನವನ್ನು ಅಡ್ಡಗಟ್ಟಿ ಕಂಪನಿಯ ಕಾರ್ಯ ಚಟುವಟಿಕೆಯನು ಕೂಡಲೇ ಸ್ಥಗಿತಗೊಳಿಸಬೇಕುಎಂದು ಆಗ್ರಹಿಸಿದ ಘಟನೆ ಕಾಸರಕೋಡದ ಟೊಂಕಾದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಮೀನುಗಾರಿಕಾ ಸಂಘಟನೆಗಳ ಮುಖಂಡರು, ಊರ ನಾಗರಿಕರು ಈ ವೇಳೆ ಪಾಲ್ಗೊಂಡು ಕಂಪನಿಗೆ ನೀಡಿದ ಗುತ್ತಿಗೆಯನ್ನು ರದ್ದುಗೊಳಿಸಿ ಅವರ ಎಲ್ಲಾ ಕಾರ್ಯಚಟುವಟಿಕೆಗಳು ನಿಲ್ಲಿಸಬೇಕು ಎಂದು ಕಂಪನಿಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಯಾವುದೇ ಕಾರಣಕ್ಕೂ ಕಂಪನಿಯ ವಾಹನ ಊರಿಗೆ ಪ್ರವೇಶ ಮಾಡಬಾರದು ಎಂದು ಬಿಗಿಪಟ್ಟು ಹಿಡಿದರು. ಕೆಲಕಾಲ ಕಾಸರಕೋಡದಲ್ಲಿನ ಬಂದರಿಗೆ ತಲುಪುವ ರಸ್ತೆಯಲ್ಲಿ ಜನಸಮೂಹವೇ ಸೇರಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಜನಪ್ರತಿನಿಧಿಗಳು, ಅಧಿಕಾರಿಗಳು ಮೀನುಗಾರರ ಅಹವಾಲನ್ನು ಕೇಳಿಕೊಂಡು ಸೂಕ್ತ ಪರಿಹಾರವನ್ನು ಒದಗಿಸಲಿದ್ದೇವೆ. ಮಾತ್ರವಲ್ಲ ಅಲ್ಲಿಯವರೆಗೆ ಕೆಲಸ ನಿಲ್ಲಿಸುತ್ತೇವೆ ಎಂದು ಭರವಸೆಕೊಟ್ಟಿದ್ದರು. ಆದರೆ ಇದು ಕೇವಲ ನಮ್ಮ ಮೂಗಿಗೆ ತುಪ್ಪ ಸವರುವ ವಿಚಾರ ಎಂದು ಅಸಮಾಧಾನ ಹೊರಹಾಕಿದರು.
ಜನಾಕ್ರೋಶ ಹೆಚ್ಚಾದ ಹಿನ್ನಲೆ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿದರು. ಎರಡು ದಿನದ ಕಾಲಾವಕಾಶ ನೀಡುತ್ತೇವೆ. ನಂತರ ಮತ್ತೆ ಪುನಃ ಈ ವಿಚಾರವಾಗಿ ಚರ್ಚೆ ನಡೆಯಬೇಕೆಂದು ಪ್ರತಿಭಟನಾ ನಿರತರು ಬಿಗಿಪಟ್ಟು ಹಿಡಿದರು. ಅಧಿಕಾರಿಗಳು, ಜನಪ್ರತಿನಿಧಿ ಗಳಿಂದ ಸರಿಯಾದ ಉತ್ತರ ಸಿಗಬೇಕು. ಪೊಳ್ಳು ಭರವಸೆಗಳ ಅವಶ್ಯಕತೆಯಿಲ್ಲ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಸ್ಥಳಿಯರಾದ ಅಬ್ದುಲ್ ರೆಹಮಾನ್ ಪತ್ರಕರ್ತರೊಂದಿಗೆ ಮಾತನಾಡಿ ಇಲ್ಲಿನ ಧೂಳಿನ ಪರಿಣಾಮವಾಗಿ ಈಗಾಗಲೇ ಜನ, ಜಾನುವಾರು, ವಾತಾವರಣದ ಮೇಲೆ ಘೋರ ಪರಿಣಾಮವಾಗಿದೆ. ರೈತರು, ವಯೋವೃದ್ಧರು, ವಿದ್ಯಾರ್ಥಿಗಳು ಕೂಡ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತಿದೆ. ಇಂಥ ಕಂಪನಿಗಳಿಗೆ ಲಾಭ ಮಾಡಿಕೊಳ್ಳಲು ನೂರಾರು ಎಕರೆ ಜಾಗ ಸಲೀಸಾಗಿ ಮಂಜೂರು ಮಾಡಿ ಕೊಡಲಾಗುತ್ತದೆ. ಆದರೆ ಇಲ್ಲೆ ನೆಲೆ ನಿಂತು ಜೀವನ ಸಾಗಿಸುತ್ತಿರುವ ಪಾರಂಪರಿಕ ಮೀನುಗಾರರಿಗೆ ಇಲ್ಲಿಯವರೆಗೆ ಹಕ್ಕು ಪತ್ರವಾಗಲಿ, ಪಹಣಿ ಪತ್ರವಾಗಲಿ ಮಂಜೂರಾಗಿಲ್ಲ ಎಂದರು. ವಾರದ ಹಿಂದಷ್ಟೆ ಕಡಲಮಕ್ಕಳು ಬೃಹತ ಪ್ರಮಾಣದ ಹೋರಾಟ ಮಾಡಿದಾಗ ಜನಪ್ರತಿನಿಧಿಗಳು ಆಗಮಿಸಿ ಸರ್ಕಾರದಿಂದ ತಡೆ ನೀಡುವ ಭರವಸೆ ನೀಡಿದ್ದರು. ಅದರೆ ಈ ಭರವಸೆ ಹುಸಿಯಾಗಿದ್ದು ಮುಂದೆ ಯಾವ ರೀತಿಯಾಗಿ ಪ್ರತಿಭಟನೆ ಬಿಸಿ ಅನುಭವಿಸುತ್ತಾರೆ ಎನ್ನುವುದು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.