ವ್ಯವಸ್ಥಿತ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ

ನೆಕ್ಕಿಲದಲ್ಲಿ 4.5 ಕೋಟಿ ರೂ. ಯೋಜನೆಯ ಕಾಮಗಾರಿಗೆ ಚಾಲನೆ

Team Udayavani, Feb 15, 2020, 5:44 AM IST

1402RJH5A

ಪುತ್ತೂರು: ದಶಕಗಳಿಂದ ಪುತ್ತೂರು ನಗರ ಸ್ಥಳೀಯಾಡಳಿತಕ್ಕೆ ಸವಾಲಾಗಿರುವ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕ ಹಾಗೂ ವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ರೂಪಿಸಲಾದ 4.5 ಕೋಟಿ ರೂ. ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬನ್ನೂರು ನೆಕ್ಕಿಲದಲ್ಲಿರುವ ಡಂಪಿಂಗ್‌ ಯಾರ್ಡ್‌ನಲ್ಲಿ ಮೊದಲ ಹಂತದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.

ವೈಜ್ಞಾನಿಕವಾಗಿ ನಿರ್ವಹಿಸುವ ಈ ಬೃಹತ್‌ ಯೋಜನೆಗೆ 4.49 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಶೇ. 35 ಕೇಂದ್ರ ಸರಕಾರ (1.57 ಕೋಟಿ) ಭರಿಸಲಿದೆ. ಶೇ. 23.30 (1.04 ಕೋಟಿ) ರಾಜ್ಯ ಸರಕಾರ, ಶೇ. 41.70 (1.87 ಕೋಟಿ) ನಗರಸಭೆ ಭರ್ತಿ ಮಾಡಲಿದೆ. ತ್ಯಾಜ್ಯ ಸಂಗ್ರಹ ಮತ್ತು ಸಾಗಾಟ ಯೋಜನೆಗೆ 119.13 ಲಕ್ಷ (1.19 ಕೋಟಿ), ಸಂಸ್ಕರಣೆ ಮತ್ತು ನಿರ್ವಹಣೆಗೆ 330.25 ಲಕ್ಷ (3.30 ಕೋಟಿ) ನಿಗದಿ ಮಾಡಲಾಗಿದೆ.

ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಯ ಮೂಲಕ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದ್ದು, ನಗರಸಭೆಯ ಕೌನ್ಸಿಲ್‌ ಮೀಟಿಂಗ್‌ 1 ವರ್ಷದ ಹಿಂದೆ ಅಂಗೀಕರಿಸಿತ್ತು. ಜಿಲ್ಲಾಧಿಕಾರಿ ಅನುಮತಿ ಬಳಿಕ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದ್ದು, ರಾಜ್ಯ ಪೌರಾಡಳಿತ ಇಲಾಖೆಯ ನಿರ್ದೇಶಕರು ಮಂಜೂರಾತಿ ನೀಡಿದ್ದಾರೆ. ಈ ಯೋಜನೆಯ ಗುತ್ತಿಗೆ ಕಾಮಗಾರಿಯನ್ನು ಹಂಝ ಅವರು ವಹಿಸಿಕೊಂಡಿದ್ದು, ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ.

ಕಾಮಗಾರಿ ಆರಂಭ
ಬನ್ನೂರು ನೆಕ್ಕಿಲದ ಡಂಪಿಂಗ್‌ ಯಾರ್ಡ್‌ನ ಆವರಣ ಗೋಡೆ ಎತ್ತರಿಸಿ ವಿದ್ಯುತ್‌ ಕಾಮಗಾರಿಯ ಕಾರ್ಯ ನಡೆಯುತ್ತಿದೆ. ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ಯಾರ್ಡ್‌ ನಿರ್ಮಾಣಕ್ಕಾಗಿ ಕಾಮಗಾರಿಗಳು, ಯಂತ್ರಗಳ ಖರೀದಿ ಸೇರಿದಂತೆ ಹತ್ತಾರು ಬಗೆಯ ಸಲಕರಣೆಗಳ ಖರೀದಿಗೆ ಸಿದ್ಧತೆ ನಡೆದಿದೆ. ಬನ್ನೂರಿನ ಲ್ಯಾಂಡ್‌ಫಿಲ್‌ ಸೈಟಿನಲ್ಲಿ ಘನ, ಹಸಿ, ಒಣ ತ್ಯಾಜ್ಯ ಗಳ ವೈಜ್ಞಾನಿಕ ವಿಂಗ ಡಣೆಗೆ ಬೇಕಾದ ಯಂತ್ರ ಗಳ ಜೋಡ ನೆಗೆ ಬೇಕಾದ ಸ್ಥಳ, ಬೆಡ್ಡಿಂಗ್‌ ಕಾರ್ಯ ನಡೆಯುತ್ತಿದೆ. ಇದರ ಜತೆಗೆ ಶೆಡ್‌ಗಳ ನಿರ್ಮಾಣ, ಕಸ ಸಂಗ್ರಹ, ಸಾಗಾಟಗಳಿಗೆ ಬೇಕಾದ ವಾಹನಗಳ ವ್ಯವಸ್ಥೆ, ಕಾರ್ಮಿಕರು, ತಂತ್ರಜ್ಞರು, ಮೇಲ್ವಿಚಾರಕರು, ಕಾವಲು ಸಿಬಂದಿ ವ್ಯವಸ್ಥೆ ನಗರಸಭೆಯ ಜಂಟಿ ಸಹಭಾಗಿತ್ವದಲ್ಲಿ ನಡೆಯಲಿದೆ. 75 ಕಾರ್ಮಿಕರು, ಸಿಬಂದಿ ನೇಮಿಸಿಕೊಳ್ಳುವ, 15 ವಾಹನ ಬಳಸಿಕೊಳ್ಳುವ ಯೋಜನೆಯ ಟೆಂಡರ್‌ ಹಂತ ಮುಗಿದಿದೆ.

ಸವಾಲಾಗಿತ್ತು
30 ವರ್ಷಗಳ ಹಿಂದೆ ನೆಕ್ಕಿಲದಲ್ಲಿ ಸ್ಥಾಪನೆಯಾದ ಲ್ಯಾಂಡ್‌ಫಿಲ್‌ ಸೈಟ್‌, ಕ್ರಮೇಣ ಸಮಸ್ಯೆಯ ಆಗರವಾಗಿ ಬೆಳೆದಿದೆ. ಅವೈಜ್ಞಾನಿಕ ತ್ಯಾಜ್ಯ ಸಂಗ್ರಹ, ನಿರ್ವಹಣೆ, ಸಂಸ್ಕರಣೆಯಿಲ್ಲದ ವ್ಯವಸ್ಥೆ, ಪಾಳು ಬಿದ್ದಿರುವ ಎರೆ ಗೊಬ್ಬರ ತಯಾರಿ ವ್ಯವಸ್ಥೆ, ಪರಿಸರದಲ್ಲಿ ಸೃಷ್ಟಿಸಿದ ವಾಸನೆ, ಸ್ಥಳೀಯರಿಗೆ ಪದೇ ಪದೇ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ, ಆಗಾಗ್ಗೆ ಸ್ಥಳೀಯರಲ್ಲಿ ಕಟ್ಟೆಯೊಡೆಯುವ ಆಕ್ರೋಶ. ಹೀಗೆ ಸಮಸ್ಯೆಗಳ ಸರಮಾಲೆಯೇ ಇದರ ಹಿಂದೆ ಬೆಳೆದು ಬಂದಿದೆ. 2017ರಲ್ಲಿ ಈ ಡಂಪಿಂಗ್‌ಯಾರ್ಡ್‌ ನಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ 3 ವಾರದ ಕಾಲ ಹೊಗೆಯಾಡಿದ್ದು, ಇಡೀ ಕಸದ ಬೆಟ್ಟವನ್ನೇ ಸುಟ್ಟು ಕರಕಲುಗೊಳಿಸಿತ್ತು. 1989ರಲ್ಲಿ ನಿರ್ಮಾಣವಾದ ಬನ್ನೂರು ಡಂಪಿಂಗ್‌ ಯಾರ್ಡ್‌ 7 ಎಕ್ರೆ ವಿಸ್ತೀರ್ಣ ಹೊಂದಿದೆ. ಪ್ರತ್ಯೇಕ ಜಾಗಕ್ಕೆ ಆಗ್ರಹವಿದೆಯಾದರೂ ವಿರೋಧದ ಕಾರಣದಿಂದ ಈಡೇರಿಲ್ಲ.

ಆರು ತಿಂಗಳೊಳಗೆ ಪೂರ್ಣ
ನಗರಸಭಾ ವ್ಯಾಪ್ತಿಯಲ್ಲಿ ದೊಡ್ಡ ಸಮಸ್ಯೆಯಾಗಿರುವ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡುವ ನಿಟ್ಟಿನಲ್ಲಿ 4.5 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಕಾಮಗಾರಿ ಮುಂದಿನ 6 ತಿಂಗಳೊಳಗೆ ಪೂರ್ಣಗೊಂಡು ಕಾರ್ಯರೂಪಕ್ಕೆ ಬರಲಿದೆ.
– ರೂಪಾ ಟಿ. ಶೆಟ್ಟಿ, ಪುತ್ತೂರು ನಗರಸಭೆ ಪೌರಾಯುಕ್ತೆ

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.