ಪಂ. ಸದಸ್ಯರಿಂದಲೇ ಕೆರೆ ಅತಿಕ್ರಮಣ: ಸ್ಥಳೀಯರ ಆರೋಪ


Team Udayavani, Feb 15, 2020, 6:15 AM IST

panchayath-sadasya

ತಲ್ಲೂರು: ಉಪ್ಪಿನಕುದ್ರು ಶಾಲೆಯ ಬಳಿಯ ವಾಸನಕೆರೆಯ ಸಮೀಪದ ಸುಮಾರು 13 ಸೆಂಟ್ಸ್‌ ಜಾಗದಲ್ಲಿರುವ ಸರಕಾರಿ ಅಧೀನದ ನಾಗನ ಕೆರೆಯ ಬಹುಭಾಗವನ್ನು ಗ್ರಾ.ಪಂ. ಸದಸ್ಯರೊಬ್ಬರು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ. ಈ ಸಂಬಂಧ ಈಗ ಊರವರು ಪಂಚಾಯತ್‌ಗೆ ದೂರನ್ನು ಕೂಡ ನೀಡಿದ್ದಾರೆ.

ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ನಾಗನಕೆರೆಯು ಈ ಹಿಂದೆ 13 ಸೆಂಟ್ಸ್‌ ವಿಸ್ತೀರ್ಣ ಹೊಂದಿತ್ತು. ಆದರೆ ಈ ಕೆರೆಯ ಸಮೀಪದಲ್ಲೇ ಮನೆ ಹೊಂದಿರುವ ಪಂಚಾಯತ್‌ ಸದಸ್ಯರೊಬ್ಬರು ಒತ್ತುವರಿ ಮಾಡಿಕೊಂಡಿರುವುದಾಗಿ ಇಲ್ಲಿನ ಅಕ್ಕ-ಪಕ್ಕದ ನಿವಾಸಿಗಳು ಆರೋಪಿಸಿದ್ದಾರೆ.

ಕೃಷಿಗೆ ಅನುಕೂಲ
ಈ ನಾಗನಕೆರೆಯು ಹಿಂದೆ 30 ಎಕರೆ ಕೃಷಿ ಪ್ರದೇಶಕ್ಕೆ ನೀರುಣಿಸುವ ಜಲ ಸಂಪನ್ಮೂಲ ವಾಗಿತ್ತು. ಇದಲ್ಲದೆ ಈ ಕೆರೆಯ ಆಸುಪಾಸಿನಲ್ಲಿ 20-30
ಮನೆಗಳಿದ್ದು, ಅಲ್ಲಿನ ಬಾವಿಗಳಲ್ಲಿನ ನೀರಿನ ಮಟ್ಟ ಏರಿಸುವಲ್ಲಿಯೂ ಈ ಕೆರೆ ವರದಾನವಾಗಿತ್ತು. ಮೇಯಲು ಬಿಡುವ ಜಾನುವಾರು ಗಳಿಗೆ ದಣಿವಾರಿಸಿಕೊಳ್ಳಲು ಇದು ಪ್ರಯೋಜನವಾಗುತ್ತಿತ್ತು.

ಆದರೆ ಇದು ಸರಕಾರಿ ಕೆರೆಯಾಗಿದ್ದರೂ, ಈಗ ಈ ಕೆರೆಯ ಬಹುಭಾಗ ಒತ್ತುವರಿಯಾಗಿದೆ. ಬಾಕಿ ಇರುವ ಕೆರೆಯ ಅಲ್ಪ ಭಾಗದಲ್ಲಿ ಹೂಳು ತುಂಬಿಕೊಂಡಿದೆ. ಇರುವ ಅಲ್ಪ- ಸ್ವಲ್ಪ ಬಣ್ಣ ಬದಲಾಗಿ ಬಳಕೆಗೆ ಬಾರದಂತಾಗಿದೆ. ಇನ್ನು ಕೆಲ ವರ್ಷಗಳ ಹಿಂದೆ ಈ ಕೆರೆಯ ಒಂದು ಭಾಗಕ್ಕೆ ತಲ್ಲೂರು ಪಂಚಾಯತ್‌ ಅನುದಾನದಿಂದಲೇ ತಡೆಗೋಡೆಯನ್ನು ನಿರ್ಮಿಸಲಾಗಿತ್ತು.

ಈ ಬಗ್ಗೆ ಸ್ಥಳೀಯರಿಂದ ದೂರು ಬಂದಿದೆ. ಪರಿಶೀಲನೆ ನಡೆಸಿದ ಬಳಿಕ ತಹಶೀಲ್ದಾರ್‌ ಗಮನಕ್ಕೆ ತಂದು, ಮುಂದೆ ಕಾನೂನು ಪ್ರಕಾರ ಏನು ಕ್ರಮಕೈಗೊಳ್ಳಬೇಕು ಅದನ್ನು ತೆಗೆದುಕೊಳ್ಳುವುದಾಗಿ ತಲ್ಲೂರು ಗ್ರಾ.ಪಂ. ಪಿಡಿಒ ನಾಗೇಂದ್ರ ತಿಳಿಸಿದ್ದಾರೆ.

ಸೂಕ್ತ ಕ್ರಮ
ಆ ಮನೆಯ ಸಮೀಪವೇ ಕೆರೆ ಇರುವುದರಿಂದ ಅತಿಕ್ರಮಿಸಿರಬಹುದು. ಈ ಬಗ್ಗೆ ಪಂಚಾಯತ್‌ ಗಮನಕ್ಕೆ ಬಂದಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ, ಕೂಡಲೇ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗುವುದು.
– ಆನಂದ ಬಿಲ್ಲವ, ಅಧ್ಯಕ್ಷರು, ತಲ್ಲೂರು ಗ್ರಾ.ಪಂ.

ಅನೇಕ ಬಾರಿ ಮನವಿ
ಈ ಸಂಬಂಧ ಈಗಾಗಲೇ ಅನೇಕ ಬಾರಿ ಸ್ಥಳೀಯರಿಂದ ಪಂಚಾಯತ್‌ಗೆ ಮನವಿ ಸಲ್ಲಿಸಿದರೂ, ಈವರೆಗೆ ಪಂಚಾಯತ್‌ ಗಮನವೇ ಕೊಟ್ಟಿಲ್ಲ. ಪಂಚಾಯತ್‌ ಸದಸ್ಯರೇ ಆಗಿರುವುದರಿಂದ ಪ್ರಭಾವಕ್ಕೊಳಕ್ಕಾಗಿ ಅಧಿಕಾರಿಗಳು ನಿರ್ಲಕ್ಷé ವಹಿಸುತ್ತಿದ್ದಾರೆ. ಈಗ ಮತ್ತೆ ಮನವಿ ನೀಡಲಾಗಿದೆ.
– ಸುಧೀರ್‌ ನಾಗನಕೆರೆ, ಸ್ಥಳೀಯರು

ಟಾಪ್ ನ್ಯೂಸ್

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts

Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

20-

Burhan Wani; ಬುರ್ಹಾನ್‌ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್‌

19-

IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು

18-

Formula E race; ಫಾರ್ಮುಲಾ-ಇ ರೇಸ್‌ ಪ್ರಕರಣ: ಕೆಟಿಆರ್‌ ಮೇಲೆ ಎಸಿಬಿ ಎಫ್ಐಆರ್‌

17-gdp

GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್‌

16-onion

Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.