ಪ್ರವಾಸೋದ್ಯಮ, ರಿಂಗ್‌ರೋಡ್, ಸಿಟಿಬಸ್‌ಗೆ ಬೇಡಿಕೆ
Team Udayavani, Feb 15, 2020, 6:54 AM IST
ಕುಂದಾಪುರ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸೆಲ್ಕೋ ಫೌಂಡೇಶನ್ ಬೆಂಗಳೂರು ಸಹಭಾಗಿತ್ವದಲ್ಲಿ ಕುಂದಾಪುರ ಮಿಷನ್ 2030 ಪರಿಕಲ್ಪನೆ ಕುರಿತು ಶುಕ್ರವಾರ ಇಲ್ಲಿನ ಆರ್.ಎನ್. ಶೆಟ್ಟಿ ಹಾಲ್‌ನಲ್ಲಿ ಗಣ್ಯರ ಜತೆ ಸಂವಾದ ನಡೆಯಿತು.
ಪ್ರವಾಸೋದ್ಯಮಕ್ಕೆ ಆದ್ಯತೆ
ಅನಿವಾಸಿ ಭಾರತೀಯ ಸುಧಾಕರ ಶೆಟ್ಟಿ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ನಮ್ಮಲ್ಲಿ ವಿದೇಶವನ್ನು ಮೀರಿಸುವ ಸಾಕಷ್ಟು ಪ್ರಾಕೃತಿಕ ಸಂಪತ್ತು ಇದೆ. ಆದರೆ ಮೂಲಸೌಕರ್ಯಗಳೇ ಇಲ್ಲ. ಕೋಡಿ ಕಡಲತಡಿಗೆ ಉತ್ತಮ ರಸ್ತೆ ಇಲ್ಲ ಎಂದರು. ಪತ್ರಕರ್ತ ಯು.ಎಸ್. ಶೆಣೈ, ಒಂದೇ ಸಂಪರ್ಕ ರಸ್ತೆ ಹೊಂದಿದ ಸುತ್ತಲೂ ನೀರು ಇರುವ ಕುಂದಾಪುರಕ್ಕೆ ರಿಂಗ್‌ರೋಡ್ ಬೇಕು. ಪಂಚಗಂಗಾವಳಿಯನ್ನು ಹೂಳುತೆಗೆಸಿ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮ ಕ್ಷೇತ್ರವಾಗಿಸಬೇಕು. ಉಡುಪಿಗೆ ಪರ್ಯಾಯ, ಮಂಗಳೂರಿಗೆ ಕರಾವಳಿ ಉತ್ಸವದ ಹೆಸರಿನಲ್ಲಿ ವಿಶೇಷ ಅನುದಾನ ಬರುತ್ತದೆ. ಆದ್ದರಿಂದ ಕುಂದಾಪುರಕ್ಕೊಂದು ವಿಶೇಷ ಉತ್ಸವ ಬೇಕು. ಕೌಶಲಾಭಿವೃದ್ಧಿಗೆ ಯೋಜನೆಗಳಾಗಬೇಕು ಎಂದರು.
ಪಾರ್ಕಿಂಗ್ ಬೇಕು
ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಬಸೂÅರು, ತಲ್ಲೂರು, ಉಪ್ಪಿನಕುದ್ರು, ಕೋಟೇಶ್ವರ, ಉಪ್ಪಿನಕುದ್ರು ಪ್ರದೇಶಗಳನ್ನು ನಗರಸಭೆಯಾಗುವಾಗ ಸೇರಿಸಬೇಕು. ಪಂಚ ಗಂಗಾವಳಿ ಅಭಿವೃದ್ಧಿಯಾಗಬೇಕು. ಉದ್ಯಾನವನ ನಿರ್ಮಿಸಬೇಕು. ಸರ್ವಋತು ರಸ್ತೆ ಬೇಕು. ಪಾರ್ಕಿಂಗ್ ವ್ಯವಸ್ಥೆಯಾಗಬೇಕು. 5 ಸಾವಿರ ಜನರಿಗೆ ಉದ್ಯೋಗವಾಗುವ ಯೋಜನೆ ಬರಬೇಕು. ಪರವೂರಿನ ಕಾರ್ಮಿಕರಿಗೆ ವಸತಿ ವ್ಯವಸ್ಥೆಯಾಗಬೇಕು ಎಂದರು. ಹೆದ್ದಾರಿ ಅಭಿವೃದ್ಧಿ ಸಮಿತಿ ಸಂಚಾಲಕ ಕೆಂಚನೂರು ಸೋಮಶೇಖರ ಶೆಟ್ಟಿ, ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆಬೇಕು. ಬಸೂÅರು ರೈಲು ನಿಲ್ದಾಣಕ್ಕೆ ಆದರ್ಶ ಆಸ್ಪತ್ರೆ ಬಳಿಯಿಂದ ನೇರ ದ್ವಿಪಥವಾಗಬೇಕು ಎಂದರು.
ಮಹಿಳಾ ಟ್ರಾನ್ಸಿಟ್ ಬೇಕು
ಪುರಸಭೆ ಮಾಜಿ ಸದಸ್ಯೆ ಪುಷ್ಪಾ ಶೇಟ್, ಬೇರೆ ಊರಿನ ಮಹಿಳೆಯರು ಒಂದೆರಡು ದಿನ ಉಳಕೊಳ್ಳುವಂತೆ ಮಹಿಳಾ ಟ್ರಾನ್ಸಿಟ್ ಬೇಕು, ವಿಶಾಲ ಬಸ್ ನಿಲ್ದಾಣ ಬೇಕು, ಮಹಿಳಾ ಠಾಣೆ ಬೇಕು ಎಂದರು.
ಕ್ರೀಡಾಂಗಣ ಬೇಕು
ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಕ್ರೀಡೆಗೆ ಪ್ರಾಶಸ್ತ್ಯ ದೊರೆಯಲು ಸುಸಜ್ಜಿತ ಕ್ರೀಡಾಂಗಣ, ಪಂಚಗಂಗಾವಳಿಯಲ್ಲಿ ನೀರಿಗೆ ಸಂಬಂಧಿಸಿದ ಆಟೋಟಗಳಿಗೆ ವ್ಯವಸ್ಥೆ ಆಗಬೇಕು ಎಂದರು.
ಜಿಲ್ಲೆಯಾಗಲಿ
ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಮುಂಬಾರು ದಿನಕರ ಶೆಟ್ಟಿ, ಕುಂದಾಪುರ ಜಿಲ್ಲೆಯಾಗಬೇಕು. ಗ್ರಾಮಾಂತರಕ್ಕೆ ಸಾರಿಗೆ ಬೇಕು ಎಂದರು.
ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್, ಅಭಿವೃದ್ಧಿ ಕುರಿತಾದ ಕಲ್ಪನೆಗಳು ತೀರಾ ದೀರ್ಘಕಾಲಿಕವಾಗ ಬಾರದು. ಉಪ ವಿಭಾಗವಾಗಿ ಇಷ್ಟು ವರ್ಷವಾದರೂ ಇಡೀ ಜಿಲ್ಲೆಗೆ ಒಬ್ಬರೇ ಎಸಿ ಇದ್ದು ಕುಂದಾಪುರದವರ ಕೆಲಸ ಕಾರ್ಯಗಳಿಗೇ ದೊರೆಯುವುದಿಲ್ಲ. ಹೆಚ್ಚುವರಿ ಸಹಾಯಕ ಕಮಿಷನರ್ ಬೇಕು, ರೈಲ್ವೇ ಟಿಕೆಟ್ ಬುಕಿಂಗ್‌ಗೆ ಕೋಟಾ ಪದ್ಧತಿ ತೆಗೆಯಬೇಕು ಎಂದರು.
ಆಸ್ಪತ್ರೆ ಬೇಕು
ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದರು. ಪುರಸಭೆ ಮಾಜಿ ಅಧ್ಯಕ್ಷೆ ಗುಣರತ್ನಾ, ಪುರಸಭೆ ನಗರಸಭೆಯಾಗಬೇಕು ಎಂದರು. ನ್ಯೂ ಮೆಡಿಕಲ್ ಆಸ್ಪತ್ರೆಯ ದಿನಕರ ಶೆಟ್ಟಿ, ರೈಲ್ವೆ ಸ್ಟೇಷನ್‌ನಿಂದ ನಗರಕ್ಕೆ, ನಗರದ ಸುತ್ತಮುತ್ತಲ ಊರಿಗಳಿಗೆ ಸಿಟಿಬಸ್, ರಿಂಗ್‌ರೋಡ್ ರೈಲ್ವೆ ಸ್ಟೇಷನ್‌ವರೆಗೆ ಬೇಕು ಎಂದರು. ನ್ಯಾಯವಾದಿ ಉಮೇಶ್ ಶೆಟ್ಟಿ, ಅಗ್ನಿಶಾಮಕ ಠಾಣೆ ಇನ್ನೂ ಎರಡು ಕಡೆ ಅಗತ್ಯವಿದೆ ಎಂದರು.
ಬಿವಿಟಿಯ ಮನೋಹರ ಕಟೆYàರಿ, ಅಭಿವೃದ್ಧಿಯ ಕುರಿತಾಗಿ ಸಂಗ್ರಹಿಸುವ ಮಾಹಿತಿಗಳ ರೂಪರೇಖೆ, ಅವುಗಳ ವಿಂಗಡನೆ ಕುರಿತು ಮಾಹಿತಿ ನೀಡಿದರು.
ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ರೂಪಾ ಪೈ, ಪುರಸಭೆ ಮಾಜಿ ಸದಸ್ಯೆ ಶಕುಂತಲಾ, ಭಂಡಾರ್‌ಕಾರ್ಸ್ ಕಾಲೇಜು ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ, ಆರ್.ಎನ್. ಶೆಟ್ಟಿ ಕಾಲೇಜು ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ, ಜೆಸಿಐ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಉದ್ಯಮಿ ಕೆ.ಆರ್. ನಾಯ್ಕ, ಬಾಕೂìರು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ, ಉದ್ಯಮಿ ಪ್ರವೀಣ್ ಕುಮಾರ್, ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ, ಹಿರಿಯ ಸಹಕಾರಿ ನೇರಳಕಟ್ಟೆ ನಾರಾಯಣ ನಾಯಕ್ ಮೊದಲಾದವರು ಅಭಿಪ್ರಾಯ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.