ಸ್ವಚ್ಛ ಆಹಾರದಿಂದ ಹೃದಯ, ಮನಸ್ಸು ಸ್ವಸ್ಥ
"ಶ್ರೀ ಕೃಷ್ಣ ಪ್ರಸಾದ-ಚಿಣ್ಣರ ಸಂತರ್ಪಣೆ'ಗೆ ಚಾಲನೆ ನೀಡಿ ಅದಮಾರು ಶ್ರೀ
Team Udayavani, Feb 15, 2020, 5:41 AM IST
ಉಡುಪಿ: ಆಹಾರ ಸ್ವಚ್ಛ ವಾಗಿದ್ದರೆ ಹೃದಯ, ಮನಸ್ಸು ಸ್ವಸ್ಥವಾಗಿ ರುತ್ತದೆ. ನೀಡಿದ ಊಟದಲ್ಲಿ ಸಂತುಷ್ಟ
ರಾಗುವ ಗುಣ ಮಕ್ಕಳಲ್ಲಿದೆ. ಈ ಗುಣ ಹಿರಿಯರಲ್ಲೂ ಬರಬೇಕು ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಶುಕ್ರವಾರ ಪರ್ಯಾಯ ಶ್ರೀ ಅದಮಾರು ಮಠ, ಶ್ರೀಕೃಷ್ಣ ಮಠದ ಸಹಯೋಗದಲ್ಲಿ ಶಾಲಾ ಮಕ್ಕಳ ಮಧ್ಯಾಹ್ನ ಊಟದ ಕಾರ್ಯಕ್ರಮ “ಶ್ರೀ ಕೃಷ್ಣ ಪ್ರಸಾದ-ಚಿಣ್ಣರ ಸಂತರ್ಪಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಚನಾ ಶಕ್ತಿ ಬರುವುದೇ ಉತ್ತಮ ಆಹಾರ ಕ್ರಮದಿಂದ. ಶ್ರೀ ಕೃಷ್ಣ ಮಠದಿಂದ ಚಿಣ್ಣರ ಸಂತರ್ಪಣೆ ಕಾರ್ಯಕ್ರಮ 2 ವರ್ಷಗಳ ಕಾಲ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.
ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಾತ ನಾಡಿ, ಬಂಧನಕ್ಕೂ ಮೋಕ್ಷಕ್ಕೂ ಮನಸ್ಸು ಕಾರಣ. ಮನಸ್ಸು ಚೆನ್ನಾಗಿರಲು ಆಹಾರ ಶುದ್ಧವಾಗಿರಬೇಕು. ಸದ್ವಿಚಾರಗಳನ್ನು ಯಾವತ್ತಿಗೂ ಮುಂದುವರಿಸಿಕೊಂಡು ಹೋಗಬೇಕು. ಅದರಂತೆಯೇ ಚಿಣ್ಣರ ಸಂತರ್ಪಣೆಯನ್ನು ಮುಂದುವರಿಸಿ ಕೊಂಡು ಹೋಗಲಾಗುವುದು ಎಂದರು.
ರಾಜ್ಯಕ್ಕೆ ಮಾದರಿ
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಶ್ರೀಕೃಷ್ಣ ಮಠದ ಮೂಲಕ ನಡೆಯುತ್ತಿರುವ ಚಿಣ್ಣರ ಸಂತರ್ಪಣೆ ರಾಜ್ಯಕ್ಕೆ ಮಾದರಿಯಾಗಿದೆ. ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. ಅನುದಾನ ರಹಿತ ಶಾಲೆಗಳಲ್ಲಿ ಸಿಗುತ್ತಿಲ್ಲ. ಕೃಷ್ಣ ಮಠದ ಮೂಲಕ ಈ ಯೋಜನೆ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾ ಜಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲ ಕವೂ ಶ್ರೀಕೃಷ್ಣ ಮಠ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದರು.
ಉದ್ಯಮಿಗಳಾದ ಡಾ| ಜಿ. ಶಂಕರ್, ರಮೇಶ್ ಬಂಗೇರ, ಪ್ರಕಾಶ್‌ಚಂದ್ರ ಶೆಟ್ಟಿ, ಗಾಂಧಿ ಆಸ್ಪತ್ರೆಯ ಮುಖ್ಯಸ್ಥ ಹರಿಶ್ಚಂದ್ರ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು.
ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಪ್ರಸಾದ್ ಕುಮಾರ್ ಉದ್ಯಾವರ ವಂದಿಸಿದರು. ವಿಜಯ ಸಿಂಹಾಚಾರ್ಯ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.