ಪಾಲಿಕೆ ಗದ್ದುಗೆಗೆ ರಾಜಕೀಯ ತಂತ್ರಗಾರಿಕೆ

ಮೇಯರ್‌-ಉಪ ಮೇಯರ್‌ ಆಯ್ಕೆಗೆ ಕೈ ಎತ್ತಲು ಬರುತ್ತಿದ್ದಾರೆ ಅನ್ಯ ಜಿಲ್ಲೆಗಳ ಎಂಎಲ್‌ಸಿಗಳು!ಈಗ 62 ವೋಟರ್ಸ್‌

Team Udayavani, Feb 15, 2020, 11:22 AM IST

15-February-03

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್‌-ಉಪ ಮೇಯರ್‌ ಚುನಾವಣೆಗೆ ಈಗಾಗಲೇ ದಿನಾಂಕ (ಫೆ.19) ಫಿಕ್ಸ್‌ ಆಗಿದ್ದು, ಏನಾದರಾಗಲಿ ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕೆಂದು ಕಾಂಗ್ರೆಸ್‌ ಹಾಗೂ ಬಿಜೆಪಿ ಜಿದ್ದಿಗೆ ಬಿದ್ದಿವೆ. ಅದಕ್ಕಾಗಿ ಈಗ ರಾಜಕೀಯ ತಂತ್ರಗಾರಿಕೆಗೆ ಮುಂದಾಗಿವೆ.

45 ಮಂದಿ ಸದಸ್ಯ ಬಲದ ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್‌ 22, ಬಿಜೆಪಿ 17, ಜೆಡಿಎಸ್‌ ಓರ್ವ ಹಾಗೂ ಐವರು ಪಕ್ಷೇತರ ಸದಸ್ಯರನ್ನು ಹೊಂದಿದೆ. ಐವರು ಪಕ್ಷೇತರರಲ್ಲಿ ನಾಲ್ವರು ಕಮಲದ ತೆಕ್ಕೆಗೆ ಜಾರಿರುವುದರಿಂದ ಬಿಜೆಪಿ ಬಲ ಈಗ 21ಕ್ಕೇರಿದೆ. ಇನ್ನು ಮತ್ತೋರ್ವ ಪಕ್ಷೇತರ ಅಭ್ಯರ್ಥಿ ತಮಗೆ ಬೆಂಬಲವೆಂದು ಉಭಯ ಪಕ್ಷಗಳು ಹೇಳಿಕೊಳ್ಳುತ್ತಿವೆ. ಆದರೆ, ಆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಜೆಡಿಎಸ್‌ನ ಓರ್ವ ಮಹಿಳಾ ಸದಸ್ಯೆ ಯಾರಿಗೆ ಒಲವು ತೋರಲಿದ್ದಾರೆಂಬುದು ಮಾತ್ರ ಒಂದಿಷ್ಟು ಕುತೂಹಲ ಮೂಡಿಸಿದೆ.

ಈ ಮಧ್ಯೆ ಮೇಯರ್‌-ಉಪ ಮೇಯರ್‌ ಚುನಾವಣೆಗೆ ಮತದಾರರ ನೋಂದಣಿ ದಾಖಲೆಯ ಪರಿಷ್ಕೃತ ಪಟ್ಟಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಕಟವಾಗಿರುವ ಪರಿಷ್ಕೃತ ಪಟ್ಟಿಯಲ್ಲಿ ಜಿಲ್ಲೆಗೆ ಸಂಬಂಧಪಡದವರ ಹೆಸರು ಸೇರ್ಪಡೆಯಾಗಿವೆ. ಇದು ರಾಜಕೀಯ ಚರ್ಚೆಗೆ ಗ್ರಾಸವೊದಗಿಸಿದೆ. ಈ ಮೊದಲು ಮೇಯರ್‌-ಉಪ ಮೇಯರ್‌ಗೆ ಆಯ್ಕೆ ಪ್ರಕ್ರಿಯೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್‌, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್‌.ಎ.ರವೀಂದ್ರನಾಥ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಟಾರ್‌ ಮತದಾನದ ಅವಕಾಶ ಪಡೆಯಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಕಾನೂನಿನಲ್ಲಿರುವ ಅವಕಾಶ ಬಳಸಿಕೊಂಡು ದಾವಣಗೆರೆಗೆ ಸಂಬಂಧವಿರದ ವಿಧಾನ ಪರಿಷತ್‌ನ ಸದಸ್ಯರು ದಾವಣಗೆರೆ ನಗರದಲ್ಲಿ ವಾಸವಿರುವ ವಿಳಾಸದ ದಾಖಲೆ ಮೂಲಕ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಹಾಗಾಗಿ ಈಗ ಮಹಾನಗರ ಪಾಲಿಕೆ ಮೇಯರ್‌-ಉಪ ಮೇಯರ್‌ಗೆ ಆಯ್ಕೆಗೆ ಒಟ್ಟು 62 ಮಂದಿ ಮತದಾರರ ಪಟ್ಟಿಯಲ್ಲಿದ್ದಾರೆ. ಹೇಗಾದರೂ ಮಾಡಿ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕೆಂಬ ರಾಜಕೀಯ ತಂತ್ರಗಾರಿಕೆಗೆ ಈ ಪರಿಷ್ಕೃತ ಪಟ್ಟಿ ಸಾಕ್ಷಿಯಾಗಿದೆ ಎನ್ನಲಾಗಿದೆ.

ಮತದಾನ ಹಕ್ಕು ಪಡೆದವರಲ್ಲಿ ಬೆಂಗಳೂರು, ಬಾಗಲಕೋಟೆ, ಶಿವಮೊಗ್ಗ ಸೇರಿದಂತೆ ಇತರೆಡೆಯ ವಿಧಾನ ಪರಿಷತ್‌ ಸದಸ್ಯರೂ ಇದ್ದಾರೆ. ಪಟ್ಟಿಯಲ್ಲಿ ಸೇರ್ಪಡೆಯಾದ 13 ಮಂದಿಯಲ್ಲಿ 8
ಮಂದಿ ಬಿಜೆಪಿ ಹಾಗೂ ಐವರು ಕಾಂಗ್ರೆಸ್‌ ಎಂಎಲ್‌ಸಿಗಳಾಗಿದ್ದಾರೆ. ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಲೆಹಾರ್‌ ಸಿಂಗ್‌ ಸಿರಾಯ್‌, ನಂಜುಂಡಿ ಕೆ.ಪಿ., ರವಿಕುಮಾರ್‌ ಎನ್‌., ಎಸ್‌.ರುದ್ರೇಗೌಡ, ತೇಜಸ್ವಿನಿ ಗೌಡ, ಡಿ.ಯು.ಮಲ್ಲಿಕಾರ್ಜುನ್‌, ಹನುಮಂತ ನಿರಾಣಿ ಹಾಗೂ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್‌, ಮೋಹನ್‌ಕುಮಾರ್‌ ಕೊಂಡಜ್ಜಿ, ಕೆ.ಸಿ.ಕೊಂಡಯ್ಯ, ಎಚ್‌. ಎಂ.ರೇವಣ್ಣ ಹಾಗೂ ಜಿ.ರಘು ಆಚಾರ್‌ ಸೇರ್ಪಡೆಯಿಂದ ಪರಿಷ್ಕೃತ ಮತದಾರರ ಪಟ್ಟಿ ಹಿಗ್ಗಿದೆ. ಪರಿಷ್ಕೃತ ಮತದಾರರ ಪಟ್ಟಿಯಿಂದಾಗಿ ಈಗ ಕಾಂಗ್ರೆಸ್‌ 30 ಹಾಗೂ ಬಿಜೆಪಿ 31 ಮತಗಳನ್ನ ಹೊಂದಿದಂತಾಗಿದ್ದು, ಪಾಲಿಕೆಯ ಓರ್ವ ಜೆಡಿಎಸ್‌ ಸದಸ್ಯೆ ನಿರ್ಧಾರವೇ ಮೇಯರ್‌-ಉಪ ಮೇಯರ್‌ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಜೆಡಿಎಸ್‌ ಸದಸ್ಯೆ ಕಾಂಗ್ರೆಸ್‌ ಬೆಂಬಲಿಸಿದರೆ, ಉಭಯ ಪಕ್ಷಗಳು ಸಮಬಲ ಗಳಿಸಲಿವೆ. ಆದರೆ, ಅವರು ತಟಸ್ಥರಾದಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ರೆಸಾರ್ಟ್‌ ರಾಜಕೀಯ….: ದಾವಣಗೆರೆ
ಮಹಾನಗರ ಪಾಲಿಕೆ ಮೇಯರ್‌ -ಉಪ ಮೇಯರ್‌ ಚುನಾವಣೆ
ಘೋಷಣೆ ಬೆನ್ನಲ್ಲೇ ಅಧಿಕಾರಕ್ಕೇರಲು ಬಿಜೆಪಿ-ಕಾಂಗ್ರೆಸ್‌ ರಾಜಕೀಯ ತಂತ್ರಗಾರಿಕೆ ಸಿದ್ಧಪಡಿಸಿಕೊಂಡಿರುವ ಮಧ್ಯೆಯೇ ರೆಸಾರ್ಟ್‌ ರಾಜಕೀಯ ಗರಿಕೆದರಿದೆ. ಬಿಜೆಪಿಯಿಂದ ಗೆದ್ದಿರುವ ಕೆಲವು ಸದಸ್ಯರಿಗೆ ಪ್ರವಾಸ ಭಾಗ್ಯ ಲಭ್ಯವಾಗಿದ್ದು, ಸದಸ್ಯರು ಮಡಿಕೇರಿಯ ರೆಸಾರ್ಟ್‌ವೊಂದರಲ್ಲಿ ಇದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಸದಸ್ಯರ ಪಕ್ಷಾಂತರ ತಡೆಗೆ ಬಿಜೆಪಿ ಈ ಕಾರ್ಯತಂತ್ರಕ್ಕೆ ಮುಂದಾಗಿದೆ. ಮೇಯರ್‌ ಸ್ಥಾನದ ಪ್ರಬಲ ಆಕಾಂಕ್ಷಿ ಸದಸ್ಯರನ್ನು ಹಿಡಿದಿಡಲು ಅವರನ್ನು ಕರೆದೊಯ್ದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದರೂ ಸದಸ್ಯರು ಶ್ರೀಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದಾರೆ ಎಂಬುದು ಆ ಪಕ್ಷದ ಮುಖಂಡರ ಹೇಳಿಕೆ.

ನಾಲ್ವರು ಪಕ್ಷೇತರರು ಬಿಜೆಪಿ ತೆಕ್ಕೆಗೆ ಜಾರಿದ್ದರೂ ಅವರು ಪಕ್ಷದ ಚಿಹ್ನೆ ಮೇಲೆ ಆಯ್ಕೆಯಾಗದಿರುವುದರಿಂದ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಚಲಾಯಿಸುವಂತೆ ವಿಪ್‌ ಜಾರಿಗೆ ಅವಕಾಶ ಇದೆಯೇ ಎಂಬ ಗೊಂದಲವೂ ಸಹ ಈಗ ಕೇಳಿ ಬರುತ್ತಿದೆ. ಹಾಗಾಗಿ ಕಮಲದ ಪಡೆಯಲ್ಲಿದ್ದರೂ ಆ ಪಕ್ಷೇತರ ಸದಸ್ಯರು ಮನಸ್ಸು ಬದಲಾಯಿಸಿದಲ್ಲಿ ನಿರೀಕ್ಷೆ ಹುಸಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಮೂಲದ ಪ್ರಕಾರ ಕಾಂಗ್ರೆಸ್‌ನ ಜಿಲ್ಲಾ ಹೈಕಮಾಂಡ್‌ ಎಂದೇ ಹೇಳಲಾಗುವ ಆ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್‌. ಎಸ್‌.ಮಲ್ಲಿಕಾರ್ಜುನ್‌ ಅಖಾಡಕ್ಕಿಳಿದರೆ ಏನು ಬೇಕಾದರೂ ಆಗಬಹುದು ಎಂಬ ಮಾತು ಆ ಪಕ್ಷದವರಿಂದಲೇ ಕೇಳಿ ಬರುತ್ತಿದೆ. ಆದರೆ, ಆ ವರಿಷ್ಠರು ಈವರೆಗೂ ಯಾವುದೇ ರಾಜಕೀಯ ತಂತ್ರಗಾರಿಕೆಗೆ ಮುಂದಾಗದಿರುವುದು ಬಿಜೆಪಿ ವಲಯದಲ್ಲಿ ಸದ್ಯ ಆತಂಕ ಕಾಣುತ್ತಿಲ್ಲ. ಮೇಯರ್‌-ಉಪ ಮೇಯರ್‌ ಚುನಾವಣೆಗೆ ಇನ್ನು ನಾಲ್ಕು ದಿನ ಬಾಕಿಯಿದ್ದು, ಕಾಂಗ್ರೆಸ್‌ ನಾಯಕರೇನಾದರೂ ಕೈ ಹಾಕಿದರೆ, ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆಯವ ಸಂಭವ ಇದೆ. ಇದಕ್ಕೆಲ್ಲಾ ಉತ್ತರ ಫೆ.19ರಂದು ಸಿಗಲಿದೆ.

ಯಾರ್ಯಾರ ಸೇರ್ಪಡೆ? ಮತದಾನ ಹಕ್ಕು ಪಡೆದವರಲ್ಲಿ ಬೆಂಗಳೂರು, ಬಾಗಲಕೋಟೆ, ಶಿವಮೊಗ್ಗ ಸೇರಿದಂತೆ ಇತರೆಡೆಯ ವಿಧಾನ ಪರಿಷತ್‌ ಸದಸ್ಯರೂ ಇದ್ದಾರೆ. ಪಟ್ಟಿಯಲ್ಲಿ ಸೇರ್ಪಡೆಯಾದ 13 ಮಂದಿಯಲ್ಲಿ 8 ಮಂದಿ ಬಿಜೆಪಿ ಹಾಗೂ ಐವರು ಕಾಂಗ್ರೆಸ್‌ ಎಂಎಲ್‌ಸಿಗಳಾಗಿದ್ದಾರೆ. ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಲೆಹಾರ್‌ಸಿಂಗ್‌ ಸಿರಾಯ್‌, ನಂಜುಂಡಿ ಕೆ.ಪಿ., ರವಿಕುಮಾರ್‌ ಎನ್‌., ಎಸ್‌.ರುದ್ರೇಗೌಡ, ತೇಜಸ್ವಿನಿ ಗೌಡ, ಡಿ.ಯು.ಮಲ್ಲಿಕಾರ್ಜುನ್‌, ಹನುಮಂತ ನಿರಾಣಿ ಹಾಗೂ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್‌, ಮೋಹನ್‌ಕುಮಾರ್‌ ಕೊಂಡಜ್ಜಿ, ಕೆ.ಸಿ.ಕೊಂಡಯ್ಯ, ಎಚ್‌.ಎಂ.ರೇವಣ್ಣ ಹಾಗೂ ಜಿ.ರಘು ಆಚಾರ್‌ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ಈಗ ಮಹಾನಗರ ಪಾಲಿಕೆ ಮೇಯರ್‌-ಉಪ ಮೇಯರ್‌ಗೆ ಆಯ್ಕೆಗೆ ಒಟ್ಟು 62 ಮಂದಿ ಮತದಾರರ ಪಟ್ಟಿಯಲ್ಲಿದ್ದಾರೆ.

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

2-davangere

Davangere: ಮಹಿಳೆಯ ಮೇಲೆ ಕರಡಿ ದಾಳಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.