ಬ್ಯಾಕ್ಟೀರಿಯಾದಿಂದ ದುರ್ನಾತ ತಡೆ ಯತ್ನ

Team Udayavani, Feb 15, 2020, 3:05 PM IST

KOPALA-TDY-1

ಸಾಂಧರ್ಬಿಕ ಚಿತ್ರ

ಕೊಪ್ಪಳ: ನಗರಸಭೆಯು ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯೀಕರಣಕ್ಕೆ ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದೆ. ಈಗ ನಗರದಲ್ಲಿನ ಚರಂಡಿಗಳ ದುರ್ವಾಸನೆ ತಡೆಯಲು ಚರಂಡಿಯಲ್ಲಿ ಬ್ಯಾಕ್ಟೀರಿಯಾ ಬಿಡುಗಡೆ ಮಾಡುವ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆ.

ವರ್ಷದಿಂದ ವರ್ಷಕ್ಕೆ ನಗರೀಕರಣ ವಿಸ್ತಾರವಾಗುತ್ತಿದೆ. ಜನಸಂಖ್ಯೆ ಬೆಳೆದಂತೆಲ್ಲ ನಿತ್ಯ ಬಳಕೆ ವಸ್ತುಗಳ ಖರೀದಿ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಲಕ್ಷಾಂತರ ಲೀಟರ್‌ ತ್ಯಾಜ್ಯ ನೀರು ನಗರದಿಂದ ಹರಿದು ಹಳ್ಳ ಸೇರುತ್ತಿದೆ. ಹಳ್ಳಕ್ಕೆ ಸೇರುವ ನೀರು ಮುಂದೆ ನದಿಪಾತ್ರಗಳಿಗೆ ನೇರವಾಗಿ ಸೇರುತ್ತಿದೆ. ನಗರದ ತ್ಯಾಜ್ಯ, ಚರಂಡಿ ನೀರನ್ನು ನೇರ ನದಿಗಳಿಗೆ, ಹಳ್ಳಗಳಿಗೆ ಹರಿ ಬಿಡುವಂತಿಲ್ಲ ಎಂದು ಕಾನೂನು ಖಡಕ್ಕಾಗಿ ಹೇಳುತ್ತಿದೆ. ಚರಂಡಿ ನೀರನ್ನು ನದಿ ಪಾತ್ರಗಳಿಗೆ ಹರಿ ಬಿಡುವ ಮೊದಲು ಅದನ್ನು ಪರೀಕ್ಷೆ ಮಾಡಿ, ಶುದ್ಧೀಕರಿಸಿ ಹರಿಬಿಡಬೇಕಿದೆ. ಆದರೆ ಕೊಪ್ಪಳದಲ್ಲಿ ಹಾಗಾಗುತ್ತಿಲ್ಲ. ನೇರವಾಗಿಯೇ ನಗರದ ಚರಂಡಿ ನೀರು ಹಳ್ಳ ಮೂಲಕ ಮುಂದೆ ನದಿಗೆ ಹರಿಯುತ್ತಿದೆ. ಇದರಿಂದ ಗಂಭೀರ ಸಮಸ್ಯೆ ಎದುರಾಗಿ ರೋಗ, ರುಜಿನಗಳಿಗೆ ಕಾರಣವಾಗುತ್ತಿದೆ.

ಇದನ್ನು ಗಮನಿಸಿದ ಜಿಲ್ಲಾಡಳಿತ ಹಾಗೂ ಕೊಪ್ಪಳ ನಗರಸಭೆ ನಗರದಿಂದ ಲಕ್ಷಾಂತರ ಲೀಟರ್‌ ಚರಂಡಿ ನೀರು ಹಳ್ಳಕ್ಕೆ ಹರಿಯುವುದನ್ನು ತಡೆಯುವ ಪ್ರಯತ್ನ ಮುಂದುವರಿಸಿದ್ದು, ಅದಕ್ಕೂ ಪೂರ್ವದಲ್ಲಿ ಚರಂಡಿಯಲ್ಲಿನ ಕಲ್ಮಶ ನೀರಿನಲ್ಲಿ ರೋಗ ರುಜಿನಕ್ಕೆ ಕಾರಣವಾಗುವ ಕೆಲವೊಂದು ಕೀಟ, ಸೂಕ್ಷ್ಮಾಣುಗಳನ್ನು ತಿನ್ನಲು ಬ್ಯಾಕ್ಟೀರಿಯಾ ಬಿಡಲು ಯೋಜನೆ ರೂಪಿಸಿವೆ.

ಚರಂಡಿ ನೀರು ಪರೀಕ್ಷೆ: ನಗರದಲ್ಲಿ ಈ ಮೊದಲು ಯುಜಿಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಹಲವಾರು ಕಾರಣಕ್ಕೆ ಯುಜಿಡಿ ಕಾಮಗಾರಿ ಸ್ಥಗಿತವಾಗಿದೆ. ಆ ಬಳಿಕ ನಗರದುದ್ದಕ್ಕೂ ಹರಿಯುವ ಚರಂಡಿ ತ್ಯಾಜ್ಯ ತುಂಬಿದ ನೀರನ್ನು ಮೂರು ಭಾಗದಲ್ಲಿ ಸಂಗ್ರಹ ಮಾಡಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಕಲ್ಮಶ ನೀರನ್ನು ಪರೀಕ್ಷೆಗೆ ಕಳಿಸಲಾಗಿದ್ದು, ಅದರ ವರದಿಯೂ ಬಂದಿದೆ. ವರದಿ ಆಧರಿಸಿ ನೀರಿನಲ್ಲಿ ಯಾವೆಲ್ಲ ಅಂಶಗಳಿವೆ. ಯಾವ ಪ್ರಮಾಣ ಹೆಚ್ಚಿದೆ. ಇದಕ್ಕೆ ವೈಜ್ಞಾನಿಕವಾಗಿ ಏನು ಮಾಡಬೇಕು, ಯಾವ ರೀತಿಯ ಬ್ಯಾಕ್ಟಿರಿಯಾ ಬಿಡುಗಡೆ ಮಾಡಿ ನೀರಿನ ತ್ಯಾಜ್ಯದಲ್ಲಿನ ದುರ್ವಾಸನೆ ಕಡಿಮೆ ಮಾಡಬೇಕು ಎನ್ನುವ ಚರ್ಚೆಗಳು ನಡೆದಿವೆ.

ಕೊಪ್ಪಳಕ್ಕೆ ಇತ್ತೀಚೆಗೆ ಆಗಮಿಸಿದ್ದ ಹಸಿರು ನ್ಯಾಯಾಧಿಕರಣ ಪೀಠದ ರಾಜ್ಯ ಸಮಿತಿ ಸದಸ್ಯ ಸುಭಾಷ ಅಡಿ ಅವರು ಇಲ್ಲಿನ ತ್ಯಾಜ್ಯದ ವ್ಯವಸ್ಥೆ ನೋಡಿ ಗರಂ ಆಗಿದ್ದಾರೆ. ಕೂಡಲೇ ಚರಂಡಿ ನೀರು ನೇರವಾಗಿ ಹಳ್ಳ ಸೇರುವುದನ್ನು ತಪ್ಪಿಸಿ ಪರ್ಯಾಯ ವ್ಯವಸ್ಥೆ ಮಾಡಿ ಎನ್ನುವ ಖಡಕ್‌ ಸೂಚನೆ ನೀಡಿದ್ದಾರೆ. ಇದರಿಂದ ಎಚ್ಚೆತ್ತ ನಗರಸಭೆ ಮೊದಲೇ ಯೋಜನೆ ರೂಪಿಸಿದಂತೆ ಅದನ್ನು ಈಗ ಕಾರ್ಯಗತಕ್ಕೆ ಮುಂದಾಗಿದೆ.

ವಿವಿಧೆಡೆ ಬ್ಯಾಕ್ಟಿರಿಯಾ ರಿಲೀಸ್‌: ನಗರಸಭೆ ಚರಂಡಿಗಳಲ್ಲಿ ಬ್ಯಾಕ್ಟಿರಿಯಾ ಬಿಡುಗಡೆ ಮಾಡಿ ಕಲ್ಮಶ ನೀರಿನ ದುರ್ವಾಸನೆ ತಡೆಗೆ ವಿಜ್ಞಾನಿಗಳ ವರದಿ ಆಧರಿಸಿ ಪ್ರಯೋಗಕ್ಕೆ ಮುಂದಾಗಿದೆ. ಇಂತಹ ಪ್ರಯೋಗವನ್ನು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಅವರು, ಕಲಬುರಗಿ ನಗರ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದರು. ಅಲ್ಲಿ ನೀರಿನಲ್ಲಿನ ದುರ್ನಾತ ತಡೆಯುವ ಪ್ರಯತ್ನ ಮಾಡಿದ್ದರು. ಅದನ್ನೇ ಕೊಪ್ಪಳದಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ನಗರಸಭೆಯ ಹೊಸತನದ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಚರಂಡಿ ತ್ಯಾಜ್ಯದ ನೀರು ನೇರವಾಗಿ ಹಳ್ಳಕ್ಕೆ ಸೇರುತ್ತಿದೆ. ಇದರಲ್ಲಿನ ಕಲ್ಮಶ ನಿಯಂತ್ರಣಕ್ಕೆ ತರಲು, ಜೈವಿಕವಾಗಿ ಬ್ಯಾಕ್ಟೀರಿಯಾಗಳನ್ನು ಚರಂಡಿಯಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದೇವೆ. ಬ್ಯಾಕ್ಟೀರಿಯಾಗಳು ಕಲ್ಮಶ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಿ ದುರ್ನಾತ ತಡೆಯಲು ಸಹಕಾರಿಯಾಗಲಿವೆ.  –ಮಂಜುನಾಥ, ನಗರಸಭೆ ಪೌರಾಯುಕ್ತ

ದತ್ತು ಕಮ್ಮಾರ

ಟಾಪ್ ನ್ಯೂಸ್

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.