ಜನಪ್ರಿಯತೆಯ “ಮಿ.ಬೀನ್” ಕಾಮಿಡಿ ಶೋ ಹುಟ್ಟಿಕೊಂಡಿದ್ದು ಹೇಗೆ… ರೀಲ್ v/s ರಿಯಲ್ ಲೈಫ್ ಜರ್ನಿ

ಮಿಸ್ಟರ್ ಬೀನ್ ತನ್ನ ವಿಭಿನ್ನ ಹಾವಭಾವ, ನಟನೆಯ ಮೂಲಕ ಎಲ್ಲರ ಗಮನ ಸೆಳೆಯುವುದರಲ್ಲಿ ಪ್ರಮುಖರು.

ನಾಗೇಂದ್ರ ತ್ರಾಸಿ, Feb 15, 2020, 6:30 PM IST

Mr.Been-Actor

ಒಂದು ಕಾಲದಲ್ಲಿ ಮೂಕಿ ಚಿತ್ರಗಳ ಮೂಲಕವೇ ಲಕ್ಷಾಂತರ ಜನರನ್ನು ನಗಿಸುತ್ತಿದ್ದ ಖ್ಯಾತ ನಟ ಚಾರ್ಲಿ ಚಾಪ್ಲಿನ್. ಇಂದಿಗೂ ಸಾರ್ವಕಾಲಿಕ ಸಿನಿಮಾವಾಗಿ ಪರಿಗಣಿಸಬಹುದಾಗಿದೆ. ನಕ್ಕು, ನಕ್ಕು ಸುಸ್ತಾಗಿಸಬಲ್ಲಷ್ಟು ಹಾಸ್ಯಪ್ರಜ್ಞೆಯ ಜತೆಗೆ ಸೂಕ್ಷ್ಮ ಕಥಾಹಂದರದ ಎಳೆಯನ್ನು ಬಿಚ್ಚಿಡುತ್ತಾ ಸಾಗುವುದೇ ಚಾಪ್ಲಿನ್ ಸಿನಿಮಾದ ಜೀವಾಳವಾಗಿತ್ತು. ಆ ನಂತರ ಜಾಗತಿಕವಾಗಿ ಜನಪ್ರಿಯತೆ ಪಡೆದುಕೊಂಡ ಹಾಸ್ಯ ನಟನೆಂದರೆ ಮಿಸ್ಟರ್ ಬೀನ್! ಆದರೆ ಇಲ್ಲಿ ಗಮನಿಸಬೇಕಾದ ಅಂಶ ಚಾಪ್ಲಿನ್ ಗೂ ಬೀನ್ ಗೂ ಹೋಲಿಸುತ್ತಿಲ್ಲ. ಚಾಪ್ಲಿನ್ ಜಗತ್ತಿನ ಸರ್ವ ಶ್ರೇಷ್ಠ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಹಾಸ್ಯನಟನಾಗಿ ಮಿಸ್ಟರ್ ಬೀನ್ ಮಕ್ಕಳಿಂದ ಹಿಡಿದು ಮುದುಕರವರೆಗೂ ಗಳಿಸಿದ ಮನ್ನಣೆ ಕುರಿತ ಮಾಹಿತಿಯನ್ನಷ್ಟೇ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ…

ಯಾರೀತ ಮಿಸ್ಟರ್ ಬೀನ್?

ತನ್ನ ಮುಖಭಾವ, ಆಂಗಿಕ ಅಭಿನಯದ ಮೂಲಕವೇ ಜಗತ್ತಿನ ಪ್ರೇಕ್ಷಕರನ್ನು ನಗಿಸುವ ರೋವನ್ ಅಟ್ಕಿನ್ ಸನ್ ಮಿ.ಬೀನ್ ಪಾತ್ರವನ್ನು ಡೆವಲಪ್ ಮಾಡಿದ್ದರು. 1955ರ ಜನವರಿ 6ರಂದು ರೋವನ್ ಸೆಬಾಸ್ಟೀಯನ್ ಅಟ್ಕಿನ್ ಸನ್ ಯುನೈಟೆಡ್ ಕಿಂಗ್ ಡಮ್ ನಲ್ಲಿ ಜನಿಸಿದ್ದರು. ವಿಲ್ಲಾ ಮತ್ತು ಎರಿಕ್ ದಂಪತಿಯ ಪುತ್ರ ರೋವನ್. ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೆಂಡ್ ನಲ್ಲಿ ಪಡೆದಿದ್ದರು. ಶಾಲಾ ದಿನಗಳಲ್ಲಿ ಅತೀ ಸಂಕೋಚದ ಹುಡುಗನಾಗಿದ್ದ. ಕುತೂಹಲದ ವಿಷಯವೆನೆಂದರೆ ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮತ್ತು ರೋವನ್ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು!

ಪಾಠಕ್ಕಿಂತ ನಟನೆ ಮೇಲೆ ಹೆಚ್ಚು ಪ್ರೀತಿ!

ಮಿಸ್ಟರ್ ಬೀನ್ ತನ್ನ ವಿಭಿನ್ನ ಹಾವಭಾವ, ನಟನೆಯ ಮೂಲಕ ಎಲ್ಲರ ಗಮನ ಸೆಳೆಯುವುದರಲ್ಲಿ ಪ್ರಮುಖರು. ಆದರೆ ಮಿಸ್ಟರ್ ಬೀನ್ ನಟ ರೋವನ್ ನಿಜ ಜೀವನದಲ್ಲಿ ಗಂಭೀರ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಶಾಲಾ ದಿನಗಳಲ್ಲಿಯೇ ಸಂಕೋಚ ಸ್ವಭಾವದ ಹಾಗೂ ಕಲಿಕೆಯಲ್ಲಿ ಚುರುಕಿನ ವಿದ್ಯಾರ್ಥಿಯಾಗಿದ್ದರು. ನಟನೆಯ ಮೇಲೆ ಅಪಾರ ಪ್ರೀತಿ ಇರುವುದನ್ನು ಗಮನಿಸಿದ ನಂತರ ಭೌತಶಾಸ್ತ್ರ ಶಿಕ್ಷಕ ಚಾರಿಸ್ ರೋಬ್ಸನ್ ಅವರು ಅಟ್ಕಿನ್ ಸನ್ ನನ್ನು ಸೈಂಟ್ ಬೀಸ್ ಹೈಸ್ಕೂಲ್ ಗೆ ಸೇರಿಸಲು ಸಲಹೆ ಕೊಟ್ಟಿದ್ದರು.  ಅಲ್ಲಿಂದ ಆರಂಭವಾದ ರೋವನ್ ಸ್ಕ್ರೀನ್ ಪಯಣ ಪದವಿ ಶಿಕ್ಷಣ ಪಡೆಯುವವರೆಗೂ ನಾಟಕಗಳಲ್ಲಿ, ಅಭಿನಯದಲ್ಲಿ ತೊಡಗಿಸಿಕೊಂಡಿದ್ದರು.

ಚಿಕ್ಕವಯಸ್ಸಿನಲ್ಲಿಯೇ ಜೇಮ್ಸ್ ಬಾಂಡ್ ಸಿನಿಮಾದ ನಾಯಕನಾಗಬೇಕೆಂಬ ಕನಸು ಕಂಡಿದ್ದ ರೋವನ್ ತನ್ನ ಅದಮ್ಯ ಆಸೆಯ ನಡುವೆಯೇ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಆಕ್ಸ್ ಫರ್ಡ್ ವಿವಿಯಲ್ಲಿ ಪದವಿ ಗಳಿಸಿದ ನಂತರ ರೋವನ್ ಅವರ ಮುಂದಿದ್ದ ಆಯ್ಕೆ ಎಡರೇ..ಒಂದು ಇಂಜಿನಿಯರ್ ಆಗುವುದು ಇಲ್ಲವೇ ಹಾಸ್ಯ ನಟನಾಗುವುದು. ಕೊನೆಗೆ ನಟನಾಗುವ ನಿರ್ಧಾರ ಕೈಗೊಂಡಾಗ ತಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ಆದರೆ ಕೆಲವೇ ವರ್ಷಗಳಲ್ಲಿ ಮಿ.ಬೀನ್ ಅವೆಲ್ಲವನ್ನೂ ಮೀರಿ ಬೆಳೆದ ನಂತರ ಪೋಷಕರಿಗೆ, ಸಹೋದರರಿಗೂ ರೋವನ್ ಸಾಧನೆ ಹೆಮ್ಮೆ ಪಡುವಂತೆ ಮಾಡಿತ್ತು!

1979ರಲ್ಲಿ ಅಟ್ಕಿನ್ ಸನ್ ಬಿಬಿಸಿ ರೇಡಿಯೋದಲ್ಲಿ “ದ ಅಟ್ಕಿನ್ ಸನ್ ಪೀಪಲ್” ಎಂಬ ಕಾಮಿಡಿ ಶೋನ ಸೀರೀಸ್ ಆರಂಭಗೊಂಡಿತ್ತು. ಅದರ ಜತೆ, ಜತೆಗೆ ಟೆಲಿವಿಷನ್ ನಲ್ಲಿ “Not the Nine O’clock News” ಎಂಬ ಕಾಮಿಡಿ ಶೋ ಪ್ರಾರಂಭವಾಗಿತ್ತು. ಟಿವಿ ಕಾರ್ಯಕ್ರಮದ ಯಶಸ್ಸಿನ ಪರಿಣಾಮ ಅಟ್ಕಿನ್ ಸನ್ ಕಾಮಿಡಿ ಸಿನಿಮಾದಲ್ಲಿ ನಟಿಸುವಂತೆ ಮಾಡಿತ್ತು. The Black Adder” ಎಂಬ ಸಿನಿಮಾ ಇಂಗ್ಲೆಂಡ್ ನಾದ್ಯಂತ ಅತೀ ಜನಪ್ರಿಯತೆ ಪಡೆದುಬಿಟ್ಟಿತ್ತು. ನಂತರ ಕಿರು ಹಾಸ್ಯ ಚಿತ್ರಗಳಾದ The Appointments of Dennis Jennings ಮತ್ತು The Tall Guy ಸ್ಥಳೀಯವಾಗಿ ಮತ್ತಷ್ಟು ಜನಮನ್ನಣೆ ಪಡೆದಿತ್ತು.

ಬದುಕಿನ ದಿಕ್ಕು ಬದಲಾಯಿಸಿದ್ದು “ಬಫೂನ್ ಬೀನ್”!

ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅಟ್ಕಿನ್ ಸನ್ ಕನ್ನಡಿ ಮುಂದೆ ನಿಂತು ವಿವಿಧ ಭಂಗಿಯನ್ನು ಪ್ರದರ್ಶಿಸುತ್ತಿದ್ದಾಗ ಹುಟ್ಟಿಕೊಂಡ ಪಾತ್ರವೇ “ಮಿಸ್ಟರ್ ಬೀನ್”!ಇದರಲ್ಲಿ ಕುತೂಹಲಕಾರಿ ವಿಷಯ ಏನೆಂದರೆ ಕಾಮಿಡಿ ಶೋನ ಮೊದಲ ಕಂತು ನಿರ್ಮಾಣಗೊಂಡಿದ್ದರು ಕೂಡಾ ಹೆಸರು ಮಾತ್ರ ಆಯ್ಕೆಯಾಗಿರಲಿಲ್ಲವಾಗಿತ್ತಂತೆ. ಕಾಮಿಡಿ ಶೋನ ಹೆಸರಿಗಾಗಿ ಹಲವಾರು ತರಕಾರಿ ಹೆಸರುಗಳು ಪ್ರಭಾವ ಬೀರಿದ್ದವಂತೆ. ಅದರಲ್ಲಿ ಮಿ.ಕಾಲಿಫ್ಲವರ್ ಕೂಡಾ ಒಂದು! ಅಂತೂ ಕೊನೆಗೂ ಮಿ.ಬೀನ್ ಎಂಬ ಹೆಸರನ್ನು ಅಂತಿಮಗೊಳಿಸಲಾಗಿತ್ತು! 1990ರಲ್ಲಿ ಮಿ.ಬೀನ್ ಕಾಮಿಡಿ ಸೀರಿಯಲ್ ಪ್ರಸಾರವಾದ ನಂತರ ಯುನೈಟೆಡ್ ಕಿಂಗ್ ಡಮ್ ನಲ್ಲಿ ಅಪಾರ ಜನಪ್ರಿಯತೆ ಪಡೆಯಿತು. ನಂತರ ಮಿಸ್ಟರ್ ಬೀನ್ ಜಾಗತಿಕವಾಗಿ ಗಳಿಸಿದ ಜನಮನ್ನಣೆ ಇತಿಹಾಸವಾಗಿದೆ.

ಐದು ವರ್ಷಗಳ ಕಾಲ ಪ್ರಸಾರಗೊಂಡ ಮಿ.ಬೀನ್ ಟೆಲಿವಿಷನ್ ಸರಣಿ ಶೋ ಸುಮಾರು 18ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದರು. ಅಷ್ಟೇ ಅಲ್ಲ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ ಅಟ್ಕಿನ್ ಸನ್ ಅವರ ಮುಡಿಗೇರಿದ್ದವು. ಜಗತ್ತಿನ 245 ದೇಶಗಳಿಗೆ ಮಿ.ಬೀನ್ ಪ್ರಸಾರದ ಹಕ್ಕು ಮಾರಾಟ ಮಾಡಲಾಗಿತ್ತು.

ಮಿಸ್ಟರ್ ಬೀನ್ ಏಕವ್ಯಕ್ತಿಯ ಅಭಿನಯ, ಕಡಿಮೆ ಮಾತಿನ, ತನ್ನ ವಿಶಿಷ್ಟ ಶೈಲಿಯ ಪೆದ್ದುತನದ ಕೆಲಸದಿಂದ ತಾನೇ ತೊಂದರೆಗೆ ಸಿಲುಕಿಕೊಳ್ಳುವುದು…ಹೀಗೆ ಹೊಸ, ಹೊಸ ಐಡಿಯಾಗಳೊಂದಿಗೆ ಸೀರೀಸ್ ಪ್ರಸಾರವಾಗುವ ಮೂಲಕ ಮಕ್ಕಳಿಂದ ಹಿಡಿದು ವಯಸ್ಕರಿಗೂ ಮಿ.ಬೀನ್ ಅಚ್ಚುಮೆಚ್ಚು. ಅಟ್ಕಿನ್ ಸನ್ ಅವರ ಸೀರೀಸ್ ನಲ್ಲಿ ಪೋಷಕ ಪಾತ್ರಗಳಲ್ಲಿ ಹಲವಾರು ಸಿನಿಮಾ ಹಾಗೂ ಸೀರಿಯಲ್ ಗಳ ಖ್ಯಾತ ನಟರು ಪಾತ್ರಗಳನ್ನು ನಿರ್ವಹಿಸುತ್ತಾರೆ.

ನಟನಾಗದಿದ್ದರೆ ಇಂಜಿನಿಯರ್ ಆಗಿಯೇ ಖುಷಿ ಪಡುತ್ತಿದ್ದ ಎನ್ನುವ ಅಟ್ಕಿನ್ ಸನ್ 1990ರಲ್ಲಿ ಮದುವೆಯಾಗುವ ಮುನ್ನ ಮೇಕಪ್ ಆರ್ಟಿಸ್ಟ್ ಸುನೇತ್ರಾ ಸಸ್ಟ್ರೈ ಜತೆ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಜತೆಗಿದ್ದರು. ದಂಪತಿಗೆ ಲಿಲೈ ಗ್ರೇಸಿ ಹಾಗೂ ಬೆಂಜಮಿನ್ ಅಲೆಕ್ಸಾಂಡರ್ ಸೆಬಾಸ್ಟಿಯನ್ ಎಂಬ ಪುತ್ರನಿದ್ದಾನೆ. 2014ರಲ್ಲಿ ಸುನೇತ್ರಾ ಹಾಗೂ ಅಟ್ಕಿನ್ ಸನ್ ವಿಚ್ಛೇದನ ಪಡೆಯುವ ಮೂಲಕ ಬೇರಾಗಿದ್ದರು.

ನಂತರ ಅಟ್ಕಿನ್ ಸನ್ ನಟಿ, ಗೆಳತಿ ಲೂಯಿಸ್ ಫೋರ್ಡ್ ಜತೆ ಡೇಟಿಂಗ್ ಆರಂಭಿಸಿದ್ದರು. ಇಬ್ಬರು ವಿವಾಹವಾಗಿರಲಿಲ್ಲವಾಗಿತ್ತು. ಆದರೆ ಜೋಡಿಗೆ ಮಗುವೊಂದು ಜನಿಸಿತ್ತು. ಎರಡು ವರ್ಷದ ಹಿಂದಷ್ಟೇ ಮಿ.ಬೀನ್ ಸಾವನ್ನಪ್ಪಿರುವ ಸುಳ್ಳು ಸುದ್ದಿ ಭರ್ಜರಿಯಾಗಿ ಹರಿದಾಡಿತ್ತು. ಕೊನೆಗೆ ಅದು ಸುಳ್ಳು ಎಂದು ಸ್ವತಃ ಅಟ್ಕಿನ್ ಸನ್ ಸ್ಪಷ್ಟನೆ ನೀಡಿದ್ದರು. ಅಭಿನಯದ ಜತೆಗೆ ರೇಸಿಂಗ್ ಕಾರು ಮತ್ತು ಕಾರು ಸಂಗ್ರಹದ ವಿಪರೀತ ಗೀಳು ಅಟ್ಕಿನ್ ಸನ್ ಗೆ. ಬೆಳ್ಳಿಪರದೆ ಮೇಲೆ ನಕ್ಕು ನಗಿಸುವ ಅಟ್ಕಿನ್ ಸನ್ ವೈಯಕ್ತಿಕ ಬದುಕಿನಲ್ಲಿ ಗಂಭೀರ ಹಾಗೂ ಸಂಕೋಚ ಸ್ವಭಾವದ ವ್ಯಕ್ತಿ. ಅಂದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಅಟ್ಕಿನ್ ಸನ್ ಯಾವುದೇ ಖಾತೆ ಹೊಂದಿಲ್ಲ. ಇನ್ಸ್ ಸ್ಟಾಗ್ರಾಂ ಹಾಗೂ ಟ್ವೀಟರ್ ನಲ್ಲಿ ಕೆಲವು ಅಭಿಮಾನಿಗಳು ಖಾತೆಯನ್ನು ತೆರೆದಿದ್ದಾರೆ.

*ನಾಗೇಂದ್ರ ತ್ರಾಸಿ

ಟಾಪ್ ನ್ಯೂಸ್

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

5

Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.