ಎಲ್ಲ ಬಗೆಯ ಮಣ್ಣಲ್ಲೂ ಬೆಳೆಯುವ ನುಗ್ಗೆ
Team Udayavani, Feb 16, 2020, 4:27 AM IST
ನುಗ್ಗೆ, ಒಂದು ಬಹುವಾರ್ಷಿಕ ತರಕಾರಿ ಬೆಳೆಯಾಗಿದೆ. ಅದನ್ನು ಎಲ್ಲ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಈ ಬೆಳೆಗೆ, ಮರಳು ಮಿಶ್ರಿತ ಗೋಡು ಮಣ್ಣು ಹೆಚ್ಚು ಸೂಕ್ತ. ಈ ಬೆಳೆಯನ್ನು ನಾಟಿ ಮಾಡಲು ಜೂನ್-ಜುಲೈ ಪ್ರಶಸ್ತ ತಿಂಗಳಾಗಿದೆ. ನೀರಾವರಿ ಸೌಲಭ್ಯವಿದ್ದಲ್ಲಿ ಎಲ್ಲ ಕಾಲದಲ್ಲಿಯೂ ನಾಟಿ ಮಾಡಬಹುದು. ಭಾಗ್ಯ (ಕೆ.ಡಿ.ಎಂ.-01), ಪಿ.ಕೆ.ಎಂ.-01, ಧನರಾಜ್ (ಸೆಲೆಕ್ಷನ್ 64) ಮತ್ತು ಜಿ.ಕೆ.ವಿ.ಕೆ.- 2, 3 ಎನ್ನುವ ಗಿಡ್ಡ ತಳಿಗಳಿವೆ. ಎಕ್ರೆಗೆ 100 ಗ್ರಾಂ. ಬೀಜ ಹಾಗೂ ಸಸಿಗಳಾದಲ್ಲಿ 370 ಬೇಕಾಗುತ್ತದೆ. ಪ್ರತಿ ಸಸಿಯನ್ನು 3.25 ಮೀ. ಅಂತರದಲ್ಲಿ ನಾಟಿ ಮಾಡಬೇಕು. ನಾಟಿಯಾದ 65ರಿಂದ 70ನೇ ದಿನಕ್ಕೆ ಗಿಡದ ಮುಖ್ಯ ತುದಿ ಚಿವುಟುವುದರಿಂದ ಗಿಡಗಳ ಕವಲುಗಳು ಹೆಚ್ಚಾಗಿ ಒಡೆದು ಇಳುವರಿ ಹೆಚ್ಚುವುದು. ಅಲ್ಲದೆ, ಗಿಡದ ಎತ್ತರ ಕಡಿಮೆಯಾಗಿ ಕಾಯಿಗಳನ್ನು ಕಟಾವು ಮಾಡಲು ಅನುಕೂಲವಾಗುತ್ತದೆ.
ನಾಟಿ ಮಾಡಿದ 90 ದಿನಗಳ ಅನಂತರ ಎಕ್ರೆಗೆ 5 ಕೆ.ಜಿ. ಸಾರಜನಕ, 25 ಕೆ.ಜಿ. ರಂಜಕ, 6 ಕೆ.ಜಿ. ಪೊಟ್ಯಾಷ್ ರಸಗೊಬ್ಬರ ಮತ್ತು 10 ಟನ್ ಕೊಟ್ಟಿಗೆ ಗೊಬ್ಬರವನ್ನು ಒದಗಿಸಬೇಕು. ಇದೇ ಪ್ರಮಾಣದ ಗೊಬ್ಬರವನ್ನು ಮತ್ತೆ 90 ದಿನಗಳ ಅನಂತರ ಒದಗಿಸಬೇಕು. ನೆಟ್ಟ 8ನೇ ತಿಂಗಳಿನಿಂದ ಈ ಗಿಡ್ಡ ತಳಿಗಳು, ಹೂ ಮತ್ತು ಕಾಯಿಗಳನ್ನು ಬಿಡಲು ಆರಂಭಿಸುತ್ತವೆ. ಈ ತಳಿಗಳಲ್ಲಿ ಎರಡು ವರ್ಷಗಳ ಅನಂತರ ಪ್ರತಿ ಗಿಡದಿಂದ 200-250 ಕಾಯಿಗಳು ದೊರೆಯುತ್ತವೆ. ನುಗ್ಗೆ ಸೊಪ್ಪನ್ನು ತರಕಾರಿಯಾಗಿ ಹಾಗೂ ಔಷಧಿಗಾಗಿಯೂ ಬಳಸುವುದರಿಂದ ಅವುಗಳಿಗೂ ತುಂಬಾ ಬೇಡಿಕೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.