ಬಲ್ಬುಗಳ ಬೆಳಕಿನಲ್ಲಿ ಹೂ ಬೇಸಾಯ
Team Udayavani, Feb 16, 2020, 4:00 AM IST
ತಮ್ಮ ಪುಟ್ಟ ಹೊಲದಲ್ಲಿ ಸೇವಂತಿಗೆ ಬೆಳೆಯುತ್ತಿರುವ ಪಶ್ಚಿಮ ಬಂಗಾಳದ ನೂರೈವತ್ತು ಮಂದಿ ರೈತರ ಆದಾಯದಲ್ಲಿ, ಇತ್ತೀಚಿಗೆ ಗಣನೀಯ ಏರಿಕೆ ಕಂಡಿತ್ತು. ಅದಕ್ಕೆ ಹೊಲದ ತುಂಬಾ ನೇತಾಡುತ್ತಿರುವ ಎಲ…ಇಡಿ ಬಲ್ಬುಗಳು ಕಾರಣವಾಗಿದ್ದು ಹೇಗೆ?
ಪ್ರವಾಸಿ ತಾಣವಾದ ಹೊಲಗಳು ಅಂತೂ ಮಹತ್ತುರ ಗ್ರಾಮ ಇದೀಗ ಪ್ರವಾಸಿ ಕೇಂದ್ರವೂ ಆಗಿದೆ. ಯಾಕೆಂದರೆ ಕೋಲ್ಕತಾ- ಮುಂಬೈ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಆ ಗ್ರಾಮ, ಹೊಲಗಳ ರಾತ್ರಿ ಬೆಳಕಿನ ಚೋದ್ಯದಿಂದಾಗಿ ಹೆದ್ದಾರಿ ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಅಲ್ಲಿನ ಹಸುರು ಹೊಲಗಳು ಸಾಲುಸಾಲು ಬಲ್ಬುಗಳ ಬೆಳಕಿನಲ್ಲಿ ಹೊನಲು ಬೆಳಕಿನ ಬಯಲಿನಂತೆ ಮಿಂಚುವುದನ್ನು ನೋಡಲಿಕ್ಕಾಗಿ ಪ್ರಯಾಣಿಕರು ತಮ್ಮ ವಾಹನಗಳನ್ನು ಸಾಲುಗಟ್ಟಿ ನಿಲ್ಲಿಸುತ್ತಾರೆ.
ಸಸ್ಯಗಳು ಬೆಳೆಯಲು ಬೆಳಕು ಅಗತ್ಯವಾಗಿ ಬೇಕು. ಅದೇ ರೀತಿ, ಸಸ್ಯಗಳು ಹೂ ಬಿಡಬೇಕಾದರೆ ಕತ್ತಲಿನ ಅವಧಿಯೂ ಬೇಕು. ಸಸ್ಯಗಳನ್ನು ನಿರಂತರವಾಗಿ ಬೆಳಕಿಗೆ ಒಡ್ಡುವ ಮೂಲಕ, ಅವು ಹೂ ಬಿಡುವ ಸಮಯವನ್ನು ಬದಲಾಯಿಸಲು ರೈತರಿಗೆ ಸಾಧ್ಯ. ಈ ವಿಧಾನದಿಂದ ಮಾರುಕಟ್ಟೆ ಬೇಡಿಕೆಗೆ ಅನುಸಾರವಾಗಿ ಹೂ ಬೆಳೆಸಲು ರೈತರಿಗೆ ಅನುಕೂಲ; ಅಂದರೆ ಹಬ್ಬಗಳು ಮತ್ತು ಮದುವೆಯ ಹಂಗಾಮಿನಲ್ಲಿ ಹೂಗಳ ಇಳುವರಿ ಹೆಚ್ಚಿಸಲು ಸಾಧ್ಯ.
ಸಸ್ಯದ ಬೆಳವಣಿಗೆ ಹೆಚ್ಚಾಗುತ್ತದೆ
ಕೋಲ್ಕತಾದಿಂದ 80 ಕಿ.ಮೀ. ದೂರದ ಮಹತು³ರ್ ಗ್ರಾಮದ ಸುಮಾರು ನೂರೈವತ್ತು ರೈತರು ಎಲ್‌ಇಡಿ ಬಲ್ಬುಗಳನ್ನು ಬಳಸಿ ಸೇವಂತಿಗೆ ಹೂಗಳನ್ನು ಬೆಳೆಯುತ್ತಿದ್ದಾರೆ. ಸಹಜ ಬೆಳಕಿನ ಪರಿಣಾಮವನ್ನು ಕೃತಕ ಬೆಳಕು ಕೂಡ ಉಂಟುಮಾಡುತ್ತದೆ. ಎಲ್ಇಡಿ ಬಲ್ಬುಗಳ ಆವಿಷ್ಕಾರದ ಅನಂತರ, ಸಸ್ಯಗಳನ್ನು ಬೆಳೆಸಲು ಅವುಗಳ ಬಳಕೆಯ ಬಗ್ಗೆ ಹೆಚ್ಚೆಚ್ಚು ಅಧ್ಯಯನಗಳು ನಡೆಯುತ್ತಿವೆ. ಯಾಕೆಂದರೆ ಈ ಬಲ್ಬುಗಳು ಉಪಯೋಗಿಸುವ ವಿದ್ಯುತ್ತಿನ ಪ್ರಮಾಣ ಅತ್ಯಂತ ಕಡಿಮೆ. ಇವೆಲ್ಲ ಬೆಳವಣಿಗೆಗಳು ಮಹತ್ತುರ ಗ್ರಾಮದ ರೈತರಿಗೆ ತಿಳಿದಿಲ್ಲ. ಆದರೆ, ಒಂದು ದಶಕದ ಹಿಂದೆ, ಅಲ್ಲಿನ ರೈತ ರಬೀಂದ್ರನಾಥ ಜನಾ ಒಂದು ಚೋದ್ಯ ಗಮನಿಸಿದರು. ವಿದ್ಯುತ್ ಬಲ್ಬಿನ ಬೆಳಕು ನಿರಂತರವಾಗಿ ಕೆಲವು ದಿನ ಒಂದು ಸಸ್ಯದ ಮೇಲೆ ಬೀಳುತ್ತಿತ್ತು. ಬಲ್ಬನ್ನು ಆರಿಸಿದ ಅನಂತರ, ಆ ಸಸ್ಯದ ಬೆಳವಣಿಗೆ ಇತರ ಸಸ್ಯಗಳ ಬೆಳವಣಿಗೆಗಿಂತ ಮೂರು ಪಟ್ಟು ಜಾಸ್ತಿಯಾಗಿತ್ತು.
ತಮ್ಮ ಮೇಲೆ ನಿರಂತರವಾಗಿ ಬೆಳಕು ಬೀಳುವಾಗ ಸಸ್ಯಗಳು ಶಕ್ತಿಯನ್ನು ಉತ್ಪಾದಿಸುತ್ತಲೇ ಇರುತ್ತವೆ. ಅನಂತರ, ಬಲ್ಬ್ ನಂದಿದಾಗ ಸಸ್ಯಗಳು ಬಹಳ ಬೇಗನೆ ಬೆಳೆಯುತ್ತಿದ್ದವು. ಹೂ, ಬೇಗನೆ ಹಾಳಾಗುವ ವಸ್ತು. ಹೂ ಬಿಡುವುದನ್ನು ನಿಯಂತ್ರಿಸಲು ಸಾಧ್ಯವಾಗಿರುವುದರಿಂದ ಹೂ ಬೆಳೆಗಾರರಿಗೆ ಬಹಳ ಅನುಕೂಲವಾಗಿದೆ.
ಎಲ್‌ಇಡಿ ಪದ್ಧತಿಯಿಂದಾಗಿ ಮುಂಚೆ ನನಗೆ ಒಂದು ಗಿಡದಿಂದ 7 ಹೂ ಸಿಗುತ್ತಿದ್ದರೆ ಈಗ 20 ಹೂ ಸಿಗುತ್ತಿದೆ. ಅದಲ್ಲದೆ ಹೂಗಳ ಗಾತ್ರವೂ ದೊಡ್ಡದಾಗಿದೆ. ಕಳೆದ ವರ್ಷ ಹೊಲದಲ್ಲಿ 18,000 ಹೂಗಿಡಗಳನ್ನು ನೆಟ್ಟಿದ್ದೆ. ಒಳ್ಳೆಯ ಆದಾಯ ಬಂತು’ ಎನ್ನುತ್ತಾರೆ ರೈತ ಗಣೇಶ್.
ಕೃತಕ ಬೆಳಕಿನಿಂದಾಗಿ ಹೂಗಿಡಗಳಲ್ಲಿ ಹೆಚ್ಚು ಮೊಗ್ಗುಗಳು ಮತ್ತು ಎಲೆಗಳು ಮೂಡುತ್ತಿವೆ. ದಿಲ್ಲಿ ಮತ್ತು ಮಹಾರಾಷ್ಟ್ರದ ನಗರಗಳಿಗೂ ಇಲ್ಲಿನ ಹೂಗಳು ಸರಬರಾಜಾಗುತ್ತಿವೆ. ಹಗಲಿನ ಬೆಳಕು ಗಿಡಗಳಿಗೆ ಸಾಕಷ್ಟು ಸಿಗದಿದ್ದರೂ ರಾತ್ರಿ ಬಲ್ಬುಗಳು ನೀಡುವ ಬೆಳಕಿನಿಂದಾಗಿ ಬೆಳವಣಿಗೆ ಸರಿಹೋಗುತ್ತದೆ ಎನ್ನುವುದು ಇಲ್ಲಿನ ರೈತರ ಮಾತು.
ಇಳುವರಿ ಅಧಿಕ
ಈಗ ಯಾವುದೇ ಸಮಾರಂಭಕ್ಕೆ ಹೂಗಳ ಬೇಡಿಕೆ ಬಂದರೆ, ನಾವು ಗಿಡಗಳಿಗೆ ಕೃತಕ ಬೆಳಕು ಕೊಡುವುದನ್ನು ನಿಲ್ಲಿಸುತ್ತೇವೆ. ಅದಾಗಿ, 30- 40 ದಿನಗಳಲ್ಲಿ ಗಿಡಗಳು ಹೂ ಬಿಡುತ್ತವೆ’ ಎನ್ನುತ್ತಾರೆ ಇನ್ನೊಬ್ಬ ರೈತ ಪನ್ನಾಲಾಲ್ ಪಟ್ಟನಾಯಕ್. ಅಲ್ಲಿ ಎಪ್ರಿಲ್‌ನಲ್ಲಿ ಸೇವಂತಿಗೆ ಗಿಡಗಳನ್ನು ನೆಟ್ಟು ನವೆಂಬರಿನಲ್ಲಿ ಹೂಕೊಯ್ಲು ಮಾಡುವ ಪದ್ಧತಿ. ಸಾಮಾನ್ಯವಾಗಿ ಕೊಯ್ಲಿನ ಸಮಯದಲ್ಲಿ ಹೂ ಇಳುವರಿ ಅಧಿಕಗೊಳ್ಳುತ್ತದೆ. ಈಗ, ಕೃತಕ ಬೆಳಕಿನಲ್ಲಿ ಹೂ ಬೇಸಾಯ ಶುರು ಮಾಡಿದಾಗಿನಿಂದ, ತಡವಾಗಿ ಅಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಹೂಗಿಡ ನೆಟ್ಟು ಮಾರ್ಚ್‌ನಲ್ಲಿ ಕೊಯ್ಲು ಮಾಡಲು ರೈತರಿಗೆ ಸಾಧ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.