ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌

ಕರ್ನಾಟಕದ ಎದುರಾಳಿ ಜಮ್ಮು ಮತ್ತು ಕಾಶ್ಮೀರ

Team Udayavani, Feb 6, 2020, 6:00 AM IST

jammu-kshmir

ಬೆಂಗಳೂರು: 2019-20ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ನಾಕೌಟ್‌ ಹಂತದ ಚಿತ್ರಣವೀಗ ಸ್ಪಷ್ಟಗೊಂಡಿದೆ. ಲೀಗ್‌ ಹಂತದ ಮುಖಾಮುಖೀಗಳೆಲ್ಲ ಶನಿವಾರಕ್ಕೆ ಕೊನೆಗೊಳ್ಳುವುದರೊಂದಿಗೆ ಕ್ವಾರ್ಟರ್‌ ಫೈನಲ್‌ ಹಣಾಹ ಣಿಗೆ ಕ್ಷಣಗಣನೆ ಮೊದಲ್ಗೊಂಡಿದೆ. ಫೆ. 20ರಿಂದ 24ರ ತನಕ ದೇಶದ 4 ಕೇಂದ್ರಗಳು ಈ ಪಂದ್ಯಗಳನ್ನು ಆಯೋಜಿಸಲಿವೆ.

ಇದರಂತೆ “ಎಲೈಟ್‌ ಎ-ಬಿ’ ಹಂತದ ತೃತೀಯ ಸ್ಥಾನಿ ಕರ್ನಾಟಕ “ಎಲೈಟ್‌ ಸಿ’ ಹಂತದ ಅಗ್ರಸ್ಥಾನಿಯಾದ ಜಮ್ಮು ಕಾಶ್ಮೀರವನ್ನು ಎದುರಿ ಸಲಿದೆ. ಈ ಮುಖಾಮುಖೀ ಜಮ್ಮುವಿನಲ್ಲಿ ನಡೆಯಲಿದೆ.

ಶುಕ್ರವಾರದ ತನಕ ಕರ್ನಾಟಕ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿತ್ತು. ಆದರೆ ಗುಜರಾತ್‌ ತಂಡ ಆಂಧ್ರಪ್ರದೇಶವನ್ನು 8 ವಿಕೆಟ್‌ಗಳಿಂದ ಮಣಿಸಿ ಅಗ್ರಸ್ಥಾನಕ್ಕೆ ನೆಗೆ ಯಿತು. ಮೊದಲ ಸ್ಥಾನದಲ್ಲಿದ್ದ ಬಂಗಾಲ ಎರಡಕ್ಕೆ, ಎರಡರಲ್ಲಿದ್ದ ಕರ್ನಾಟಕ ಮೂರಕ್ಕೆ ಇಳಿಯಿತು. ಸೌರಾಷ್ಟ್ರ 4ನೇ ಸ್ಥಾನ ಪಡೆದರೆ, ಆಂಧ್ರ ಪ್ರದೇಶ 5ನೇ ಸ್ಥಾನದೊಂದಿಗೆ ನಾಕೌಟ್‌ ಟಿಕೆಟ್‌ ಸಂಪಾದಿಸಿತು. ನಿರ್ಣಾಯಕ ಪಂದ್ಯ ವೊಂದರಲ್ಲಿ ಬಂಗಾಲ ವಿರುದ್ಧ ಪಂಜಾಬ್‌ ಸೋತ ಕಾರಣ ಆಂಧ್ರಕ್ಕೆ ಅದೃಷ್ಟ ಕೈ ಹಿಡಿಯಿತು.

5 ದಿನಗಳ ನಾಕೌಟ್‌ ಪಂದ್ಯ
ನಾಕೌಟ್‌ ಹಂತದಿಂದ ರಣಜಿ ಪಂದ್ಯಗಳು 5 ದಿನಗಳ ಕಾಲ ನಡೆಯಲಿವೆ. ನಾಲ್ಕೂ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಫೆ. 20ರಿಂದ ಆರಂಭಗೊಂಡು ಫೆ. 24ಕ್ಕೆ ಕೊನೆಗೊಳ್ಳುತ್ತವೆ. ಹೀಗಾಗಿ ಎಲ್ಲ ಪಂದ್ಯಗಳು ಸ್ಪಷ್ಟ ಫ‌ಲಿತಾಂಶ ಕಾಣುವುದರಲ್ಲಿ ಅನುಮಾನವಿಲ್ಲ. ಇಲ್ಲವಾದರೆ ಮೊದಲ ಇನ್ನಿಂಗ್ಸ್‌ ಮುನ್ನಡೆ ನಿರ್ಣಾಯಕವಾಗಲಿದೆ.

3 ವಿಭಾಗಗಳ ಲೀಗ್‌ ಸ್ಪರ್ಧೆ
ರಣಜಿ ತಂಡಗಳನ್ನು ಒಟ್ಟು 3 ಗುಂಪುಗಳಾಗಿ ವಿಂಗಡಿಸಿ ಲೀಗ್‌ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಇದರಂತೆ “ಎಲೈಟ್‌ ಎ-ಬಿ ವಿಭಾಗ’ದ 5 ಅಗ್ರಸ್ಥಾನಿ ತಂಡಗಳು, “ಎಲೈಟ್‌ ಸಿ ವಿಭಾಗ’ದ ಅಗ್ರ 2 ತಂಡಗಳು ಹಾಗೂ ಪ್ಲೇಟ್‌ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ತಂಡ ಸೇರಿದಂತೆ ಒಟ್ಟು 8 ತಂಡಗಳು ನಾಕೌಟ್‌ ಹಂತಕ್ಕೆ ತೇರ್ಗಡೆಯಾಗಿವೆ.

ರಣಜಿ ಕಿಂಗ್‌ ಖ್ಯಾತಿಯ ಮುಂಬಯಿ, ಕಳೆದೆರಡು ಬಾರಿಯ ಚಾಂಪಿಯನ್‌ ವಿದರ್ಭ ಮೊದಲಾದ ದೊಡ್ಡ ಹಾಗೂ ಬಲಿಷ್ಠ ತಂಡಗಳೆಲ್ಲ ಈ ಸಲ ಲೀಗ್‌ ಹಂತದಲ್ಲೇ ಉದುರಿ ಹೋದವು. ಕಾಶ್ಮೀರ, ಗೋವಾದಂಥ ತಂಡಗಳು ಇವನ್ನು ಮೀರಿ ನಿಂತದ್ದು ವಿಶೇಷ. ಇದರಿಂದ ರಣಜಿ ಲೀಗ್‌ ಮಾದರಿಯ ಬಗ್ಗೆ ಅಪಸ್ವರವೆದ್ದಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

ಸಿ ವಿಭಾಗದ ಅಗ್ರಸ್ಥಾನಿ ಜಮ್ಮು ಕಾಶ್ಮೀರ 9ರಲ್ಲಿ 6 ಪಂದ್ಯಗಳನ್ನು ಗೆದ್ದು 39 ಅಂಕ ಸಂಪಾದಿಸಿದೆ. ಒಡಿಶಾ ಐದನ್ನು ಗೆದ್ದು ದ್ವಿತೀಯ ಸ್ಥಾನಿಯಾಯಿತು (38 ಅಂಕ). ಪ್ಲೇಟ್‌ ವಿಭಾಗದ ಅಗ್ರ ತಂಡವಾದ ಗೋವಾ 9ರಲ್ಲಿ 7 ಗೆಲುವು ಸಂಪಾದಿಸಿ ಕೂಟದಲ್ಲೇ ಸರ್ವಾಧಿಕ 50 ಅಂಕ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.

ಟಾಪ್ ನ್ಯೂಸ್

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

IPl-RCb

IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

suicide

Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.