![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 16, 2020, 1:20 PM IST
ಬೆಂಗಳೂರು: ಇಲ್ಲಿ ನಡೆಯುತ್ತಿರುವ ಅಸಂಖ್ಯ ಪ್ರಮಥರ ಗಣಮೇಳ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಗೆ ದಾಖಲಾಗಿತು.
ಏಕಕಾಲದಲ್ಲಿ 24 ಸಾವಿರ ಜನ ಸಹಜ ಶಿವಯೋಗ ನಡೆಸುವ ಮೂಲಕ ಮೇಳವು ಈ ದಾಖಲೆಗೆ ಸಾಕ್ಷಿಯಾಯಿತು. ತುಮಕೂರು ರಸ್ತೆಯ ನಂದಿ ಮೈದಾನ ಈ ಅಪರೂಪದ ಕ್ಷಣಕ್ಕೆ ವೇದಿಕೆಯಾಯಿತು.
ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ಪ್ರದೀಪ್ ಈ ಪ್ರಮಾಣ ಪತ್ರವನ್ನು ಚಿತ್ರದುರ್ಗದ ಮುರುಘಾ ಶರಣರಿಗೆ ಪದಕ ಪ್ರಧಾನ ಮಾಡಿ ಗೌರವಿಸಿದರು. ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ದಲಿಂಗ ಸ್ವಾಮೀಜಿ, ರವಿಶಂಕರ ಗುರೂಜಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ವಿ. ಸೋಮಣ್ಣ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಮತ್ತಿತರರು ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಸುತ್ತೂರು ಸ್ವಾಮೀಜಿ, ಅಸಮಾನತೆ, ದ್ವೇಷಗಳನ್ನು ಮರೆತು, ಜಗತ್ತಿನ ಕಲ್ಯಾಣಕ್ಕೆ ಎಲ್ಲರೂ ಕಂಕಣ ತೊಡಬೇಕು ಎಂದರು.
You seem to have an Ad Blocker on.
To continue reading, please turn it off or whitelist Udayavani.