ಅಡಕೆ ಗಿಡಗಳನ್ನು ಯಾವ ಅವಧಿಯಲ್ಲಿ ಹಾಗೂ ಹೇಗೆ ನೆಡಬೇಕು?
Team Udayavani, Feb 17, 2020, 5:09 AM IST
ಅಡಕೆ ಗಿಡಗಳನ್ನು ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೆಡಲು ಮೇ- ಜೂನ್ ತಿಂಗಳುಗಳು ಸರಿಯಾದ ಕಾಲ. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಆಗಸ್ಟ್ – ಸೆಪ್ಟೆಂಬರ್ ತಿಂಗಳು ಗಿಡ ನೆಡಲು ಸೂಕ್ತ ಕಾಲ. ಮೊದಲು ಭೂಮಿಯನ್ನು ಉಳುಮೆ ಮಾಡಿ ಸಮತಟ್ಟು ಮಾಡಬೇಕು. ಪಶ್ಚಿಮ ಮತ್ತು ದಕ್ಷಿಣ ಅಂಚಿನಲ್ಲಿ ಮಹೋಗನಿ, ಮುರುಗಲು, ಸಿಲ್ವರ್ ಓಕ್ ಇತ್ಯಾದಿ ಗಿಡಗಳನ್ನು ನಾಟಿ ಮಾಡಿ, ಶಾಶ್ವತ ಗಾಳಿ ತಡೆ ಒದಗಿಸಬೇಕು. ಮಣ್ಣನ್ನು ಆಧರಿಸಿ 75 x 75 x 75 ಸೆಂ.ಮೀ ಅಥವಾ 90 x 90 x 90 ಸೆಂ.ಮೀ. ಗುಣಿಗಳನ್ನು ತೆಗೆದು ಮೇಲ್ಮಣ್ಣು ಮತ್ತು ಗೊಬ್ಬರ ಮಿಶ್ರಣದಿಂದ ತುಂಬಬೇಕು. ಅವುಗಳ ಮಧ್ಯದಲ್ಲಿ ಸಸಿಗಳನ್ನು 30- 45 ಸೆಂ.ಮೀ ಆಳದಲ್ಲಿ ನಾಟಿ ಮಾಡಬೇಕು. ಇದು ನೀರುಣಿಸಲು ಅನುಕೂಲವಾಗುತ್ತದೆ.
ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಎರಡು ಸಾಲಿಗೆ ಒಂದರಂತೆ 90 ಸೆಂ.ಮೀ. ಆಳವಾದ ಬಿಸಿಲಿನ ತಾಪದಿಂದ ಸುಡುವುದನ್ನು ತಪ್ಪಿಸಲು ನಿರ್ದಿಷ್ಟ ದಿಕ್ಕಿನಲ್ಲಿ ನಾಟಿ ಮಾಡಬೇಕು. ಹೆಚ್ಚು ಫಸಲಿಗಾಗಿ ಸಾವಯವ ಗೊಬ್ಬರವನ್ನು ಸಾಕಷ್ಟು ಪ್ರಮಾಣ ಬಳಸಬೇಕು. ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಪ್ರತಿ ಗಿಡಗಳಿಗೆ ರಸಗೊಬ್ಬರಗಳನ್ನು ಒದಗಿಸಬೇಕು. ನೀರಿನ ಕೊರತೆ ಇರುವ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡರೆ ಹಲವು ಉಪಯೋಗಗಳಿವೆ.
– ಮಂಜುನಾಥ ಚನ್ನಗಿರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.