ಗೂಡಲ್ಲಿ ದುಡ್ಡು; ನಾಲ್ಕು ಎಕರೆಯಲ್ಲಿ ಸಮೃದ್ಧ ರೇಷ್ಮೆ ಬೆಳೆ
Team Udayavani, Feb 17, 2020, 5:21 AM IST
ರೈತ ಪರಮಣ್ಣ ರೇಷ್ಮೆ ಕೃಷಿಯಲ್ಲಿ ವಾರ್ಷಿಕವಾಗಿ ಎರಡೂವರೆ ಲಕ್ಷ ರೂ. ಆದಾಯ ಗಳಿಸುತ್ತಿರುವುದರ ಹಿಂದಿನ ರಹಸ್ಯವೇನು? ರೇಷ್ಮೆ ಕೃಷಿ,
ಕಾಲಕಾಲಕ್ಕೆ ಪಗಾರ ಎಣಿಸಲು ರೇಷ್ಮೆ ಕೃಷಿ ಸೂಕ್ತವಾದ ಮಾರ್ಗ. ರೇಷ್ಮೆ ಕೃಷಿ ನೆಚ್ಚಿಕೊಂಡು ಲಾಭ ಕಾಣುತ್ತಿರುವವರಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಿಂಗಾಪುರ ಪುಟ್ಟ ಗ್ರಾಮದ ರೈತ ಪರಮಣ್ಣ ಬಾಕ್ಲಿಯವರೂ ಒಬ್ಬರು. ಅವರು ತಮ್ಮ 4 ಎಕರೆ ಜಮೀನಿನಲ್ಲಿ ಸಮೃದ್ಧ ರೇಷ್ಮೆ ಬೆಳೆದು ತಿಂಗಳಿಗೆ 25 ಸಾವಿರಕ್ಕೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಕಳೆದ 7 ವರ್ಷಗಳಿಂದಲೂ ರೇಷ್ಮೆ ಕೃಷಿಯಲ್ಲಿ ತೊಡಗಿ ಅದರಲ್ಲಿ ಪರಿಣತರಾಗಿದ್ದಾರೆ. ಪರಮಣ್ಣ, ಮೊದಲಿಗೆ ಗೂಡು ಕಟ್ಟಲು ಹುಳುಗಳಿಗಾಗಿ 4.50 ಲಕ್ಷ ರೂ. ವೆಚ್ಚದಲ್ಲಿ ಗೋದಾಮು ನಿರ್ಮಿಸಿಕೊಂಡರು. ಶುರುವಿನಲ್ಲಿ ಬರುತ್ತಿದ್ದ ಆದಾಯ 5ರಿಂದ 8 ಸಾವಿರ ರೂ. ಪ್ರಸ್ತುತ, 150 ಕೆ.ಜಿ. ರೇಷ್ಮೆಗೂಡು ಮಾರಾಟ ಮಾಡಿ ಸುಮಾರು 75,000 ಸಾವಿರ ರೂ. ಲಾಭ ಪಡೆಯುತ್ತಿದ್ದಾರೆ. ಮೂರು ತಿಂಗಳಿಗೊಮ್ಮೆ ರೇಷ್ಮೆ ಗೂಡು ಕಟ್ಟುವುದರಿಂದ ವರ್ಷದಲ್ಲಿ ಮೂರು ಹಂತದಲ್ಲಿ ರೇಷ್ಮೆ ಗೂಡು ಮಾರಾಟ ಮಾಡಲಾಗುತ್ತದೆ. ವರ್ಷಕ್ಕೆ 2.5 ಲಕ್ಷ ರೂ.ಗೂ ಅಧಿಕ ಆದಾಯ ತಮ್ಮದಾಗಿಸಿಕೊಂಡಿದ್ದಾರೆ.
ತಗುಲಿದ ಖರ್ಚು ಎಷ್ಟು?
ನಾಲ್ಕು ಎಕರೆಗೆ ರೇಷ್ಮೆ ಗೂಡು ಕಟ್ಟಲು 1500 ರೂ. ಖರ್ಚು ಮಾಡಿದರೆ 100 ರೇಷ್ಮೆ ಹುಳು ಸಾಕಾಗಬಹುದು. ರೇಷ್ಮೆ ಬೆಳೆಗೆ 28,000 ಸಾವಿರ ಖರ್ಚು ಮಾಡಲಾಗಿದೆ. ಸಮಗ್ರ ಬೆಳೆ ಬಂದಾಗ ಹಸಿ ಹಿಪ್ಪು ನೇರಳೆ ಸೊಪ್ಪನ್ನು ಕಟಾವು ಮಾಡಿ ಮೇಯಿಸಿದರೆ, ಐದಾರು ದಿನಗಳಲ್ಲಿ 80 ಕೆಜಿಗಿಂತ ಹೆಚ್ಚು ಇಳುವರಿ ಬರುವಂತೆ ಗೂಡು ಕಟ್ಟುತ್ತವೆ. ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ 500ರಿಂದ 600 ರೂ.ಬೆಲೆ ದೊರೆಯುತ್ತದೆೆ. ವರ್ಷದಲ್ಲಿ ಮೂರು ಅಥವಾ ನಾಲ್ಕು ಹಂತದಲ್ಲಿ ಬೆಳೆ ಕಟಾವು ನಡೆಸಿ ರೇಷ್ಮೆ ಗೂಡು ಮಾರಾಟ ಮಾಡಲಾಗುತ್ತದೆ ಎಂದು ರೈತ ಹೇಳುತ್ತಾನೆ.
ರಕ್ಷಣೆಗೆ ಕ್ರಿಮಿನಾಶಕ
ರೋಗ ಹತೋಟಿ ಹಾಗೂ ರೇಷ್ಮೆ ಹುಳುಗಳ ಸಂರಕ್ಷಣೆಗೆ 500 ರೂ.ಬೆಲೆಯ ವಿಜೇತ ಪುಡಿ, ಕಲ್ಲುಸುಣ್ಣ ಸಿಂಪಡಿಸಬೇಕು. ಅಲ್ಲದೇ ರೇಷ್ಮೆ ಬೆಳೆಗೆ ಮುಚ್ಚುರೋಗ ಮಾತ್ರ ಬರುತ್ತದೆ. ನವನ್ ಔಷಧಿ ಸಿಂಪಡಿಸಿ ಈ ರೋಗವನ್ನು ಹತೋಟಿಗೆ ತರಬಹುದು.
ಸಾಗುವಾನಿ ಮರ
ರೇಷ್ಮೆ ಬೆಳೆಯೊಂದಿಗೆ, ಜಮೀನಿನಲ್ಲಿ ಸುಮಾರು 10 ವರ್ಷಗಳ ಹಿಂದೇ 100 ಸಾಗುವಾನಿ ಸಸಿಗಳನ್ನೂ ಉಮೇಶ್ ಹಾಕಿದ್ದರು. ಈಗ ಅವು ಹೆಮ್ಮರವಾಗಿ ಬೆಳೆದು ನಿಂತಿವೆ. ಅವುಗಳ ಆದಾಯವೂ ದುಪ್ಪಟ್ಟು. ಹೀಗಾಗಿ, ಸಮಗ್ರ ಕೃಷಿ ಕೂಡ ಅವರದಾಗಿದೆ.
– ಬಾಲಪ್ಪ ಎಂ. ಕುಪ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.