ಕಾರ್‌ ಶೋ- ಆಟೋ ಎಕ್ಸ್‌ಪೋ 2020ಕ್ಕೆ ತೆರೆ


Team Udayavani, Feb 17, 2020, 6:19 AM IST

Renaul

“ಭಾರತ ಅಭಿವೃದ್ಧಿಶೀಲ ದೇಶವಲ್ಲ, ಅಭಿವೃದ್ಧಿ ಹೊಂದಿದ ರಾಷ್ಟ್ರ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸುವ ಹೊತ್ತಿಗೆ, ನವದೆಹಲಿಯ ಗ್ರೇಟರ್‌ ನೋಯ್ಡಾದಲ್ಲಿ ನಡೆಯುತ್ತಿದ್ದ ಆಟೋ ಎಕ್ಸ್‌ಪೋ 2020ಕ್ಕೆ ತೆರೆ ಬಿದ್ದಿದೆ. ಆರು ದಿನಗಳ ಕಾಲ ನಡೆದು ಬುಧವಾರ ಸಂಜೆ ಕೊನೆಗೊಂಡ ಈ ಎಕ್ಸ್‌ಪೋಗೆ ಭೇಟಿ ನೀಡಿದವರ ಸಂಖ್ಯೆ ಸುಮಾರು 6 ಲಕ್ಷ! ಇಲ್ಲಿಯವರೆಗೆ ನಡೆದ ಎಲ್ಲಾ ಎಕ್ಸ್‌ಪೋಗಳ ದಾಖಲೆಯನ್ನು ಅಳಿಸಿದ ಹೆಗ್ಗಳಿಕೆ ಇದರದ್ದು. ಜಾಗತಿಕವಾಗಿ ಮತ್ತು ದೇಶೀಯವಾಗಿ ಆಟೊಮೊಬೈಲ್‌ ಕ್ಷೇತ್ರದಲ್ಲಿ ಆರ್ಥಿಕ ಕುಸಿತವಿದೆ ಎಂದು ಹೇಳುತ್ತಿರುವ ಹೊತ್ತಿಗೇ ಆಟೋ ಎಕ್ಸ್‌ಪೋಗೆ ಭಾರೀ ಪ್ರಮಾಣದಲ್ಲಿ ಪ್ರತಿಸ್ಪಂದನೆ ಸಿಕ್ಕಿರುವುದು ಉದ್ಯಮ ಮಂದಿಯ ಮೊಗದಲ್ಲಿ ಖುಷಿ ತರಿಸಿದೆ.

ಎಕ್ಸ್‌ಪೋ ಅವಧಿ- ಫೆ.7 ರಿಂದ ಫೆ.12
ಭಾಗವಹಿಸಿದ ಮಂದಿ- 6,08,526
ಪ್ರದರ್ಶನಗೊಂಡ ಕಾರುಗಳು – 352
ಭಾಗವಹಿಸಿದ ಸಂಸ್ಥೆಗಳು – 108
ಹೊಸದಾಗಿ ಅನಾವರಣ – 70
ಎಲೆಕ್ಟ್ರಿಕ್‌- 35
ಕಾನ್ಸೆ±r… ಕಾರುಗಳ ಸಂಖ್ಯೆ – 15

ಅದೊಂದು ಕಾಲವಿತ್ತು… 80ರ ದಶಕ, ಆಗಿನ್ನೂ ಭಾರತದ ಮಂದಿಗೆ ಸೈಕಲ್‌ ಖರೀದಿಯೇ ದೊಡ್ಡ ವಿಷಯವಾಗಿತ್ತು. ಇನ್ನು ಬೈಕು ಎಂದರೆ ಕೇಳಬೇಕೆ? ಬೈಕ್‌ ಹೊಂದುವುದು, ಶ್ರೀಮಂತಿಕೆಯ ಸಂಕೇತವಾಗಿತ್ತು. ಆ ಸಂದರ್ಭದಲ್ಲಿ ಅಲ್ಲೊಂದು ಇಲ್ಲೊಂದು ಕಾರುಗಳು ಮಾರಾಟವಾಗುವ ಹೊತ್ತಿನಲ್ಲೇ ಹೊಳೆದದ್ದು ಈ ಆಟೋ ಎಕ್ಸ್‌ಪೋಐಡಿಯಾ. 1985ರಲ್ಲಿ ಮೊಳಕೆಯೊಡೆದ ಐಡಿಯಾಗೆ ರೂಪು ಸಿಕ್ಕಿದ್ದು 1986ರಲ್ಲಿ. 1986ರ ಜನವರಿ 3 ರಿಂದ 11ರ ವರೆಗೆ ದೆಹಲಿಯ ಪ್ರಗತಿ ಮೈದಾನದಲ್ಲಿ, ಮೊದಲ ಆಟೋ ಎಕ್ಸ್‌ಪೋ ನಡೆಯಿತು. ಅದರಲ್ಲಿ ಭಾರತೀಯರ ಆಪ್ತ ಮಾರುತಿ 800 ಕಾರು ಅನಾವರಣಗೊಂಡಿತ್ತು. ಇನ್ನೂ ವಿಶೇಷವೆಂದರೆ ಆಗ ಪ್ರದರ್ಶನದಲ್ಲಿ ಭಾಗವಹಿಸಿದ್ದ ಕಂಪನಿಗಳೆಂದರೆ, ಆಲ್‌ ವೈನ್‌ ನಿಸಾನ್‌, ಎಪಿ ಸ್ಕೂಟರ್ ಲಿಮಿಟೆಡ್‌, ಡಿ.ಸಿ.ಎಂ ಟೊಯೊಟಾ, ಎಸ್ಕಾರ್ಟ್‌ ಲಿಮಿಟೆಡ್‌, ಗುಜರಾತ್‌ ನರ್ಮದಾ ಆಟೋ ಲಿಮಿಟೆಡ್‌, ಎಚ್‌ಎಂಟಿ ಲಿಮಿಟೆಡ್‌, ಐಡಿಯಲ್‌ ಜಾವಾ, ಕೈನೆಟಿಕ್‌, ಕೆಲ್ವಿನೇಟರ್‌ ಆಫ್ ಇಂಡಿಯಾ ಲಿಮಿಟೆಡ್‌, ಮಹಾರಾಷ್ಟ್ರ ಸ್ಕೂಟರ್‌, ಮೆಜೆಸ್ಟಿಕ್‌ ಆಟೋ, ಶ್ರೀಚಾಮುಂಡಿ ಮೋಟಾರ್, ಸ್ಟಾಂಡರ್ಡ್‌ ಮೋಟಾರ್ … ಇದರಲ್ಲಿ ಈಗ ಕೆಲವೇ ಕಂಪನಿಗಳು ಉಳಿದಿವೆ, ಇನ್ನು ಕೆಲವು ಬೇರೆ ಕಂಪನಿಗಳ ಜತೆ ವಿಲೀನಗೊಂಡಿದ್ದರೆ, ಒಂದಷ್ಟು ಕಂಪನಿಗಳು ಮುಚ್ಚಿ ಹೋಗಿವೆ.

ಏಷ್ಯಾದಲ್ಲಿ ಬೃಹತ್‌ ಪ್ರದರ್ಶನ
ಗ್ರೇಟರ್‌ ನೋಯ್ಡಾದಲ್ಲಿ ನಡೆಯುವ ಈ ಆಟೋ ಎಕ್ಸ್‌ಪೋ ಗೆ, ಏಷ್ಯಾದಲ್ಲೇ ಅತ್ಯಂತ ದೊಡ್ಡ ಆಟೊಮೊಬೈಲ್‌ ಮೇಳ ಎಂಬ ಖ್ಯಾತಿ ಇದೆ. ಸೊಸೈಟಿ ಆಫ್ ಇಂಡಿಯನ್‌ ಆಟೋಮೊಬೈಲ್‌ ಮ್ಯಾನುಫ್ಯಾಕ್ಚರರ್‌(ಎಸ್‌ಐಎಎಂ), ಆಟೋಮೋಟಿವ್‌ ಕಾಂಪೋನೆಂಟ್‌ ಮ್ಯಾನುಫ್ಯಾಕ್ಚರರ್ ಅಸೋಸಿಯೇಶನ್‌ ಆಫ್ ಇಂಡಿಯಾ (ಎಸಿಎಂಎ) ಮತ್ತು ಕಾನೆ#ಡೆರೇಶನ್‌ ಆಫ್ ಇಂಡಿಯನ್‌ ಇಂಡಸ್ಟ್ರಿ (ಸಿಐಐ) ಈ ಮೇಳದ ಆಯೋಜಕರು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮೇಳದಲ್ಲಿ ಹೊಸ ಹೊಸ ಕಾರುಗಳು, ಬೈಕುಗಳು ಸೇರಿದಂತೆ ಹಲವು ವಾಹನಗಳು ಅನಾವರಣಗೊಳ್ಳುತ್ತವೆ. ಹಾಗೆಯೇ ಕೆಲವೊಂದು ಕಾನ್ಸೆ±r… ಕಾರುಗಳೂ ಪ್ರದರ್ಶನಗೊಳ್ಳುತ್ತವೆ. ಈ ಎಕÕ…ಪೋದ ಮುಖ್ಯ ಉದ್ದೇಶವೇ ಕಂಪನಿಗಳ ಸರಕುಗಳನ್ನು ಪ್ರದರ್ಶಿಸುವುದು. ಇದರಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆಯೂ ಹೆಚ್ಚಿರುವುದರಿಂದ, ಕಂಪನಿಗಳಿಗೆ ಇದರಿಂದ ಲಾಭವೇ ಹೆಚ್ಚು. ಹೀಗಿದ್ದರೂ ಈ ಬಾರಿ ಟೊಯೊಟಾ, ಹೊಂಡಾ, ಬಿಎಂಡಬ್ಲೂ, ಆಡಿ ಕಾರು ಕಂಪನಿಗಳು, ಹಾಗೆಯೇ ಹೀರೋ ಮೋಟೋಕಾರ್ಪ್‌, ಬಜಾಜ್‌ ಆಟೋ ಮತ್ತು ಟಿವಿಎಸ್‌ ಮೋಟಾರ್ ಕೋ.ನಂಥ ದ್ವಿಚಕ್ರ ವಾಹನ ತಯಾರಕರು ಗೈರು ಹಾಜರಾಗಿದ್ದು ಅಚ್ಚರಿಯ ಸಂಗತಿ!

ಫೋರ್ಸ್‌ ಮೋಟಾರ್
ಈ ಬಾರಿಯ ಫೋರ್ಸ್‌ ಕಂಪನಿ ಹಾಕಿಕೊಂಡಿದ್ದ ಸ್ಟಾಲ್‌ನ ವಿಶೇಷ, ಹೊಸ ಗುರ್ಕಾ ಕಾರು. ಮಹೀಂದ್ರಾ ಥಾರ್‌ಗೆ ಪ್ರತಿಸ್ಪರ್ಧಿಯಂತಿರುವ ಇದು, ರೆಟ್ರೋ ಲುಕ್‌ನೊಂದಿಗೆ ಬರುತ್ತಿದೆ. ಇದು ಬಿಎಸ್‌6 ಮಾದರಿ ಎಂಜಿನ್‌. ಮುಂದಿನ ಮೇ ತಿಂಗಳಲ್ಲಿ ಇದರ ಬೆಲೆ ತಿಳಿಯಲಿದೆ.

ಗ್ರೇಟ್‌ ವಾಲ್‌ ಮೋಟಾರ್
ಚೀನಾದ ಈ ಕಂಪನಿ ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ರವೇಶಿಸಿದೆ. ತನ್ನದೇ ಹಾವೆಲ್‌ ಬ್ರಾಂಡ್‌ ಜತೆ ಭಾರತದ ಮಾರುಕಟ್ಟೆಯಲ್ಲಿ ಎಸ್‌ಯುವಿಗಳನ್ನು ಬಿಡುಗಡೆ ಮಾಡಲಿದೆ. ವಿಷನ್‌ 2025 ಕಾನ್ಸೆ±r… ಜತೆಗೆ ಎಫ್5, ಎಫ್7 ಮತ್ತು ಒರಾ ಆರ್‌1 ಇವಿ ಕಾರುಗಳು ಅನಾವರಣಗೊಂಡಿವೆ. ಈ ಕಂಪನಿಯ ಮೊದಲ ಕಾರು ಈ ವರ್ಷಾಂತ್ಯಕ್ಕೆ ಭಾರತದ ರಸ್ತೆಗಿಳಿಯಬಹುದು.

ಕಿಯಾ ಮೋಟಾರ್
ಈ ಬಾರಿಯ ಆಟೋ ಎಕ್ಸ್‌ಪೋ ಅನ್ನು ಸರಿಯಾಗಿ ಬಳಸಿಕೊಂಡಿದ್ದು ಕಿಯಾ ಮೋಟಾರ್ . ಇತ್ತೀಚೆಗಷ್ಟೇ ಇದು ಆಂಧ್ರಪ್ರದೇಶದಲ್ಲಿ ತನ್ನ ತಯಾರಿಕಾ ಘಟಕ ಆರಂಭಿಸಿತ್ತು. ಎಕ್ಸ್‌ಪೋ ದಲ್ಲಿ ಹೊಸ ಹೊಸ ಗಾಡಿಗಳನ್ನು ಅನಾವರಣ ಮಾಡಿತು. ಇದರಲ್ಲಿ ಮುಖ್ಯವಾಗಿ “ಕಾರ್ನಿವಲ್‌’ ಎಂಬ ಎಂಪಿವಿ ಕಾರನ್ನು ಪ್ರದರ್ಶಿಸಿತು. ಕಾಂಪ್ಯಾಕr… ಎಸ್‌ಯುವಿ ಕಾನ್ಸೆ±r… ಕಾರು “ದಿ ಸಾನೆಟ್‌…’ಅನ್ನೂ ಅನಾವರಣ ಮಾಡಿತು. ಜತೆಗೆ, ಸೆಲ್ಟೋಸ್‌ ಎಕ್ಸ್‌ಲೈನ್‌ ಕಾನ್ಸೆ±r…, ಸೌಲ್‌ ಇವಿ ಮತ್ತು ಇ- ನಿರೋ, ಎಕ್ಸೀಡ್‌ ಮತ್ತು ಸ್ಟೋನಿಕ್‌ ಕ್ರಾಸ್‌ಓವರ್‌ ಅನ್ನೂ ಪ್ರದರ್ಶಿಸಿತು.

ಹೈಮಾ ಆಟೋಮೊಬೈಲ್‌
ಚೀನಾದ ಮತ್ತೂಂದು ಕಂಪನಿಯಾದ ಹೈಮಾ ಆಟೊಮೊಬೈಲ್‌ ಕಂಪನಿ, ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ನೋಡುತ್ತಿದೆ. ಸಂಸ್ಥೆಯ ಕಾರುಗಳು 2022ರಲ್ಲಿ ಭಾರತ ಮಾರುಕಟ್ಟೆಗೆ ಬರಲಿವೆ. ಈ ಆಟೋಎಕ್ಸ್‌ಪೋದಲ್ಲಿ ಇ1 ಇವಿ, 8ಎಸ್‌ ಎಸ್‌ಯುವಿ, 7ಎಕ್ಸ್‌ ಎಂಪಿವಿಗಳನ್ನು ಹೈಮಾ ಪ್ರದರ್ಶಿಸಿತು. ಜನರಿಂದ ಇವುಗಳಿಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತು.

ಹುಂಡೈ ಮೋಟಾರ್
ಆಟೋ ಎಕ್ಸ್‌ಪೋದಲ್ಲಿ ದೊಡ್ಡ ಮಟ್ಟದಲ್ಲಿ ಭಾಗೀದಾರ ಸಂಸ್ಥೆಯಾಗಿರುವ ಹುಂಡೈ ಕಂಪನಿ, ಈ ಬಾರಿ ಸೆಕೆಂಡ್‌ ಜನರೇಶನ್‌ನ ಹುಂಡೈ ಕ್ರೀಟಾ ಅನ್ನು ಅನಾವರಣ ಮಾಡಿತು. ಜತೆಗೆ ಟಕ್ಸನ್‌ನ ಫೇಸ್‌ಲಿಫr… ಮಾದರಿ, ಗ್ರಾಂಡ್‌ ಐ10 ನಿಯೋಸ್‌ನ ಟಬೋì ಕಾರುಗಳು ಪ್ರದರ್ಶನಗೊಂಡವು. ಕ್ರೀಟಾ ಮತ್ತು ನಿಯೋಸ್‌ ಅನ್ನು ಖ್ಯಾತ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅನಾವರಣ ಮಾಡಿದ್ದು ವಿಶೇಷ. ಇದರ ಜತೆಗೆ ಹುಂಡೈ ತನ್ನ ಕಾನ್ಸೆ±r… ಕಾರಾದ “ಲೇ ಫಿಲ್‌ ರೋಗ್‌’ ಅನ್ನೂ ಪ್ರದರ್ಶನ ಮಾಡಿತು.

ಮಹೀಂದ್ರಾ
ಭವಿಷ್ಯದ ಓಡಾಟದ ಬಗ್ಗೆ ಈಗಿನಿಂದಲೇ ಚಿಂತನೆ ನಡೆಸುತ್ತಿರುವ ಮಹೀಂದ್ರಾ ಕಂಪನಿ, ಪ್ರಮುಖವಾಗಿ ಎಲೆಕ್ಟ್ರಿಕ್‌ ಕಾರುಗಳತ್ತ ಗಮನ ನೀಡಿತು. ಎಕ್ಸ್‌ಪೋದಲ್ಲಿ ಇಕೆಯುವಿ100, ಮಹೀಂದ್ರಾ ಇಎಕ್ಸ್‌ಯುವಿ 300 ಅನಾವರಣಗೊಂಡವು. ಜತೆಗೆ ಫ‌ನ್‌ಸ್ಟರ್‌ ಕಾನ್ಸೆ±r… ಕಾರನ್ನೂ ಪ್ರದರ್ಶಿಸಿತು.

ಮಾರುತಿ ಸುಜುಕಿ
ಈ ಬಾರಿಯ ವಿಶೇಷವೆಂದರೆ ಮಾರುತಿ ಸುಜುಕಿ ಒಟ್ಟು 17 ಕಾರುಗಳನ್ನು ಬಿಡುಗಡೆ ಮಾಡಿದ್ದು. ಜತೆಗೆ ಫ್ಯೂಚರೋ-ಇ ಕಾನ್ಸೆ±r… ಕಾರು ಎಲ್ಲರ ಕುತೂಹಲಕ್ಕೆ ಕಾರಣವಾಯಿತು. ವಿಟಾರಾ ಬ್ರೆಝಾ ಫೇಸ್‌ಲಿಫr… ಮತ್ತು ಇಗ್ನಿಸ್‌ ಫೇಸ್‌ಲಿಫr… ಬಿಡುಗಡೆಯಾದ ಪ್ರಮುಖವಾದ ಕಾರುಗಳು. ಜತೆಗೆ 32 ಕಿ.ಮೀ. ಮೈಲೇಜ್‌ ಭರವಸೆ ನೀಡಿರುವ ಸುಜುಕಿ ಸ್ವಿಫr… ಹೈಬ್ರಿಡ್‌, ಜಿಮ್ಮಿ ಆಫ್ ರೋಡರ್‌ ಮತ್ತು ಮಾರುತಿ ಎಸ್‌ಪ್ರಸೊÕà ಎಸ್‌-ಸಿಎನ್‌ಜಿ ಕಾರುಗಳು ಅನಾವರಣಗೊಂಡವು.

ಮರ್ಸಿಡಿಸ್‌ ಬೆಂಝ್
ಇಡೀ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸಿದ್ದ ಪ್ರಮುಖ ಲಕ್ಷುರಿ ಕಾರು ತಯಾರಕ ಕಂಪನಿ. ಈ ಎಕ್ಸ್‌ಪೋದಲ್ಲಿ ಎಎಂಜಿ ಜಿಟಿ 4-ಡೋರ್‌ ಕೋಪ್‌ ಮತ್ತು ವಿ-ಕ್ಲಾಸ್‌ ಮಾರ್ಕೋಪೋಲೋ ಎಂಪಿವಿ ಕಾರುಗಳ ದರವನ್ನು ಬಿಡುಗಡೆ ಮಾಡಿತು. ಇದರ ಜತೆಗೆ ಎಎಂಜಿ ಎ35 ಫಾರ್ಮ್ ಮತ್ತು ಜಿಎಲ…ಎ ಎಸ್‌ಯುವಿಯನ್ನು ಅನಾವರಣ ಮಾಡಿತು.

ಎಂ.ಜಿ. ಮೋಟಾರ್
ಎಂ.ಜಿ ಹೆಕ್ಟರ್‌ ಕಂಪನಿಯ ಇ200 ಇವಿ ಮತ್ತು ಆಟೋನೋಮಸ್‌(5ಜಿ ಸಂಪರ್ಕಿತ) ಮಾರ್ವೆಲ್‌ಎಕ್ಸ್‌ ಎಸ್‌ಯುವಿ ಕಾರುಗಳು ಇದೇ ಮೊದಲ ಬಾರಿಗೆ ಈ ಎಕÕ…ಪೋದಲ್ಲಿ ಬಿಡುಗಡೆಗೊಂಡವು. ಜತೆಗೆ ಎಂ.ಜಿ ಆರ್‌ಸಿ 6 ಕಾರು ಭಾರತದಲ್ಲಿ 2021ರ ಮಾರ್ಚ್‌ಗೆ ಅನಾವರಣಗೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, 360 ಎಂ, ಜಿ10 ಕಾರುಗಳೂ ಎಕ್ಸ್‌ಪೋದಲ್ಲಿ ಅನಾವರಣಗೊಂಡವು. ಎಂಜಿ ಗ್ಲೋಸ್ಟರ್‌, ಎಂಜಿ ಹೆಕ್ಟರ್‌ ಪ್ಲಸ್‌ ಮತ್ತು ಎಂಜಿ3 ಹ್ಯಾಚ್‌ಬ್ಯಾಕ್‌ ಕಾರುಗಳೂ ಪ್ರದರ್ಶನಗೊಂಡವು.

ರೆನಾಲ್ಟ್
ರೆನಾಲ್ಟ್ ನ ಎಎಂಟಿ ತಂತ್ರಜ್ಞಾನದ ಟ್ರೈಬರ್‌, ಎಲೆಕ್ಟ್ರಿಕ್‌ ಕಾರಾದ ಕೆ-ಝಡ್‌ಇ ಮತ್ತು ಝೊà ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಪ್ರಮುಖ ಕಾರುಗಳು. ಜತೆಗೆ 1.3 ಲೀ. ಎಂಜಿನ್‌ ಸಾಮರ್ಥ್ಯದ ಟಬೋì ಪೆಟ್ರೋಲ್‌ ಎಂಜಿನ್‌ನ ಡಸ್ಟರ್‌ ಕೂಡ ಬಿಡುಗಡೆಯಾಗಿದ್ದು, ಏಪ್ರಿಲ್‌ನಿಂದ ಶೋ ರೂಂಗಳಲ್ಲಿ ಸಿಗಲಿದೆ. ಟ್ವಿಜಿ ಕಾರ್ಗೋ ಇವಿ ಮತ್ತು ಸಿಂಬೈಜ್‌ ಕಾನ್ಸೆ±r… ಕಾರುಗಳೂ ಪ್ರದರ್ಶನವಾದವು.

ಟಾಟಾ ಮೋಟಾರ್
ಟಾಟಾ ಎಚ್‌ಬಿಎಕ್ಸ್‌, ರೀ ಬಾರ್ನ್ ಸಿಯಾರಾ ಇವಿ ಕಾರುಗಳು ಅನಾವರಣವಾದರೆ, ಟಾಟಾ ಹ್ಯಾರಿಯರ್‌ನ ಆಟೊಮ್ಯಾಟಿಕ್‌ ಆಪ್ಷನ್‌ ಇರುವ ಮತ್ತು ಬಿಎಸ್‌6 ಎಂಜಿನ್‌ನ ಕಾರಿನ ದರವನ್ನು ಬಿಡುಗಡೆ ಮಾಡಲಾಯಿತು. ಜತೆಗೆ ಟಾಟಾ ಗ್ರಾವಿಟಾಸ್‌ 7 ಸೀಟಿನ ಎಸ್‌ಯುವಿಯನ್ನೂ ಅನಾವರಣ ಮಾಡಲಾಯಿತು.

ಎಸ್‌ಯುವಿ- ಎಲೆಕ್ಟ್ರಿಕ್‌ ವಾಹನಗಳ ಮೇಲೆಯೇ ಕಣ್ಣು
ಜಾಗತಿಕ ತಾಪಮಾನದ ಬಿಸಿಯ ಕಾರಣದಿಂದಾಗಿ ಇಡೀ ಜಗತ್ತು ಎಲೆಕ್ಟ್ರಿಕ್‌ ವಾಹನಗಳತ್ತ ನೋಡುತ್ತಿದೆ. ಇದರ ನಡುವೆಯೇ ಒಂದು ತುಂಬು ಸಂಸಾರವನ್ನು ಇಕ್ಕಟ್ಟಿಲ್ಲದೇ ಹೇಗೆ ಕರೆದೊಯ್ಯಬಹುದು ಎಂಬ ಬಗ್ಗೆ ಭಾರತೀಯ ಗ್ರಾಹಕನ ಮನಸ್ಸು ಚಿಂತಿಸುತ್ತಿದೆ. ವಿಶೇಷವೆಂದರೆ ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಹೆಚ್ಚಾಗಿ ಗಮನ ಸೆಳೆದದ್ದು ಈ ಎರಡು ಅಂಶಗಳೇ. ಗ್ರಾಹಕರ ಈ ಮನದಾಳ ಅರಿತುಕೊಂಡಿರುವ ಕಂಪನಿಗಳು ಹೆಚ್ಚಾಗಿ ಎಸ್‌ಯುವಿ ಮತ್ತು ಎಲೆಕ್ಟ್ರಿಕ್‌ ವಾಹನಗಳತ್ತ ಗಮನ ಹರಿಸಿವೆ.

ಹೊಸ ಕಂಪನಿಗಳು
ಚೀನಾದ ಗ್ರೇಟ್‌ ವಾಲ್‌ ಮೋಟಾರ್, ಹೈಮಾ ಆಟೊಮೊಬೈಲ್‌ ಹಾಗೂ ಒಲೆಕ್ಟಾ, ಕಿಯಾ ಮತ್ತು ಎಂ.ಜಿ ಹೆಕ್ಟರ್‌

ಸೋಮಶೇಖರ ಸಿ. ಜೆ.

ಟಾಪ್ ನ್ಯೂಸ್

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.