ಸಾಲಿಗ್ರಾಮ ಮೇಳದವರಿಂದ “ಚಂದ್ರಮುಖಿ ಸೂರ್ಯಸಖಿ ‘ ಪ್ರದರ್ಶನ

ಫೆ. 20: ಕಾಟುಕುಕ್ಕೆಯಲ್ಲಿ ಶ್ರಾವಣಿಯಿಂದ ಗುರುವಂದನೆ

Team Udayavani, Feb 17, 2020, 5:39 AM IST

16KSDE13

ಪೆರ್ಲ: ಗಡಿನಾಡಿನ ಗಡಿ ಕಾಟುಕುಕ್ಕೆ ಪರಿಸರ ಕಲಾ, ಸಾಂಸ್ಕೃತಿಕ ಕ್ಷೇತ್ರದ ಪ್ರತಿಭೆಗಳ ಊರಾಗಿದ್ದು, ಇಲ್ಲಿಂದುದಿಸಿದ ಬಹುಮುಖ ಪ್ರತಿಭೆ ಶ್ರಾವಣಿ ಕಾಟುಕುಕ್ಕೆ ಅವರಿಂದ ಫೆ. 20ರಂದು ಕಾಟುಕುಕ್ಕೆಯಲ್ಲಿ ನಡೆಯುವ ಸಾಲಿಗ್ರಮ ಮೇಳದ ಯಕ್ಷಗಾನದ ರಂಗಸ್ಥಳದಲ್ಲಿ ಗುರುವಂದನೆ ನಡೆಯಲಿದೆ. ಯಕ್ಷಗಾನ, ಸಂಗೀತ, ಭರತನಾಟ್ಯ ಕ್ಷೇತ್ರದಲ್ಲಿ ತನ್ನ ಏಳಿಗೆಗೆ ಆಶೀರ್ವದಿಸಿದ ಗುರುಗಳನ್ನು ಸಾರ್ವಜನಿಕವಾಗಿ ಗುರುವಂದನೆಯೊಂದಿಗೆ ಗೌರವಿಸುವುದು ಕಾರ್ಯಕ್ರಮದ ಧ್ಯೇಯ.

ಬಡಗುತಿಟ್ಟಿನ ಜನಪ್ರಿಯ ಮೇಳವಾದ ಸಾಲಿಗ್ರಾಮ ಮೇಳವು ಇದೇ ಮೊದಲಬಾರಿಗೆ ಕಾಟುಕುಕ್ಕೆಯಲ್ಲಿ ಪ್ರದರ್ಶನ ನೀಡುತ್ತಿದ್ದು, ಈ ವರ್ಷದ ಅತ್ಯಂತ ಜನಪ್ರಿಯ ಪ್ರಸಂಗವಾದ “ಚಂದ್ರಮುಖಿ -ಸೂರ್ಯಸಖಿ ‘ ಪ್ರಸಂಗವು ಫೆ. 20ರಂದು ರಾತ್ರಿ 9ರಿಂದ ಕಾಟುಕುಕ್ಕೆ ಕ್ಷೇತ್ರ ಪರಿಸರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರಾವಣಿಯ ಯಕ್ಷಗಾನ ಗುರುಗಳಾದ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್‌, ಭರತನಾಟ್ಯ ಶಿಕ್ಷಕಿ, ನಾಟ್ಯವಿದುಷಿ ಕಾವ್ಯಾಭಟ್‌, ಶಾಸ್ತ್ರೀಯ ಸಂಗೀತ ಶಿಕ್ಷಕಿ ಅನುರಾಧಾ ಭಟ್‌ ಅಡ್ಕಸ್ಥಳ ಅವರಿಗೆ ಗಣ್ಯ ಅತಿಥಿಗಳ ಸಮಕ್ಷಮ ಅಭಿವಂದನೆಗಳೊಂದಿಗೆ ಗುರುವಂದನೆ ಜರಗಲಿದೆ.

ಯಕ್ಷಗಾನ, ಭರತನಾಟ್ಯ, ಸಂಗೀತ ಕ್ಷೇತ್ರದ ಹೊರತಾಗಿ ಚಿತ್ರಕಲೆ, ಬರವಣಿಗೆ, ಭಜನಾ ಕ್ಷೇತ್ರದಲ್ಲೂ ಆಸಕ್ತಳಾಗಿ ಸೃಜನಶೀಲ ಚಟುವಟಿಕೆಗಳೊಂದಿಗೆ ಶೈಕ್ಷಣಿಕ ವಾಗಿಯೂ ಮುಂಚೂಣಿ ಯಲ್ಲಿರುವ ಶ್ರಾವಣಿ ಪ್ರಸ್ತುತ ವಿಟ್ಲದ ಜೇಸೀಸ್‌ ಆಂಗ್ಲಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಕಾಟುಕುಕ್ಕೆ ಕ್ಷೇತ್ರ ಸಿಬಂದಿ ಶಿವಪ್ರಸಾದ್‌ ರಾವ್‌ ಮತ್ತು ವೀಣಾ ದಂಪತಿಯ ಪುತ್ರಿಯಾದ ಈಕೆ ಎಳವೆಯಲ್ಲೇ ಬಹುಮುಖೀ ಅಭಿರುಚಿಗಳ ಆಸಕ್ತಳು. ವಿದುಷಿ ಕಾವ್ಯಾಭಟ್‌ ಪೆರ್ಲ ಅವರ ಬಳಿ 8ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿರುವ ಈಕೆ ಭರತನಾಟ್ಯದ ಜೂನಿಯರ್‌ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಂದ ತೇರ್ಗಡೆಯಾಗಿ ಪ್ರಸ್ತುತ ಸೀನಿಯರ್‌ ಹಂತದ ಸಿದ್ಧತೆಯಲ್ಲಿದ್ದು, ಅನೇಕ ಕಡೆ ಪ್ರದರ್ಶನವಿತ್ತು ಪ್ರಶಂಸೆ ಪಡೆದಿದ್ದಾಳೆ.

ಯಕ್ಷಗಾನದಲ್ಲಿ ವಿಶೇಷ ಒಲವಿನ ಆಸಕ್ತಿಯನ್ನು ಹೊಂದಿ ಗುರು ಸಬ್ಬಣಕೋಡಿ ಅವರ ಶಿಷ್ಯೆಯಾಗಿ ಈಗಾಗಲೇ ಎಲ್ಲಾ ಬಗೆಯ ಪಾತ್ರ ನಿರ್ವಹಣೆಯಲ್ಲಿ ನೂರಾರು ಕಡೆ ಪ್ರತಿಭಾ ಪ್ರದರ್ಶನವಿತ್ತು ಗಮನ ಸೆಳೆದಿದ್ದಾಳೆ. ಖ್ಯಾತ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಈಕೆಗೆ ಚಿಕ್ಕಪ್ಪ. ಈ ಹಿನ್ನೆಲೆಯಿಂದ ಎಳವೆಯಲ್ಲೇ ಈಕೆಗೆ ಭಜನಾಸಕ್ತಿ. ಇದನ್ನರಿತು ಮನೆಯವರು ವಿದುಷಿ ಅನುರಾಧಾ ಭಟ್‌ ಅಡ್ಕಸ್ಥಳ ಅವರಲ್ಲಿ ಸಂಗೀತ ಶಿಕ್ಷಣ ಕೊಡಿಸುತ್ತಿದ್ದು ಅನೇಕ ಕಡೆ ಹಾಡುವ ಮೂಲಕ ಭರವಸೆ ಮೂಡಿಸಿದ್ದಾಳೆ. ಅಲ್ಲದೆ ಕಾಟುಕುಕ್ಕೆ ಬಾಲಭಜನಾ ಸಂಗದ ಸದಸ್ಯೆಯಾಗಿಯೂ ಮುಂಚೂಣಿಯಲ್ಲಿದ್ದಾಳೆ. ಜತೆಗೆ ಚಿತ್ರಕಲೆ, ಪ್ರಬಂಧ ರಚನೆಗಳಲ್ಲಿ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಈಕೆ ಶಾಲೆಯ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಅಗ್ರಸಾಲಿನ ವಿದ್ಯಾರ್ಥಿನಿ.
ಬಹುಮುಖೀ ಪ್ರತಿಭೆಯ ಶ್ರಾವಣಿಗೆ ಯಕ್ಷಗಾನದಲ್ಲಿ ಸ್ವತ ಸಿದ್ಧಿಯ ಪ್ರತಿಭೆ ಇದೆ. ಪುಂಡುವೇಷ, ಕಿರೀಟ ವೇಷ, ಸ್ತ್ರೀ ವೇಷ ಸಹಿತ ಎಲ್ಲಾ ವೇಷಗಳನ್ನು ಮಾಡುತ್ತಿರುವ ಈಕೆ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯತರಬೇತಿ ಕೇಂದ್ರದ ವಿದ್ಯಾರ್ಥಿನಿ, ಕಲಾವಿದೆ. ಈಗಾಗಲೇ ಭರವಸೆ ಮೂಡಿಸಿರುವ ಉಜ್ವಲ ಭವಿಷ್ಯದ ಈ ಬಾಲ ಕಲಾವಿದೆ ತನ್ನ ಗುರುಗಳಿಗೆ ಸಲ್ಲಿಸುವ ಗುರುವಂದನೆಯ ಬಳಿಕ, ಗಡಿನಾಡಿನ ಗಡಿಯಲ್ಲಿರುವ ಕಾಟುಕುಕ್ಕೆ ಕ್ಷೇತ್ರ ಪರಿಸರದಲ್ಲಿ ಮೊದಲ ಬಾರಿಗೆ ಬಡಗುತಿಟ್ಟಿನ ಸಾಲಿಗ್ರಾಮ ಮೇಳದ ಈ ವರ್ಷದ ಜನಪ್ರಿಯ ಆಖ್ಯಾನ “ಚಂದ್ರಮುಖಿ -ಸೂರ್ಯಸಖಿ ‘ ಪ್ರದರ್ಶನಗೊಳ್ಳಲಿದೆ.

ಟಾಪ್ ನ್ಯೂಸ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.