ಆಸ್ಟ್ರೇಲಿಯದಲ್ಲಿ ಡೇ-ನೈಟ್ ಟೆಸ್ಟ್ ಆಡಲಿದೆ ಭಾರತ
Team Udayavani, Feb 17, 2020, 6:15 AM IST
ಹೊಸದಿಲ್ಲಿ: ಈ ವರ್ಷಾಂತ್ಯ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಅಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯವೊಂದನ್ನು ಆಡಲಿದೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ಆದರೆ ಇದರ ಅಧಿಕೃತ ಪ್ರಕಟನೆಯಷ್ಟೇ ಬಾಕಿ ಇದೆ.
“ಆಸ್ಟ್ರೇಲಿಯದ ಯಾವುದೇ ಅಂಗಳದಲ್ಲಿ ಡೇ-ನೈಟ್ ಟೆಸ್ಟ್ ಆಡಲು ನಾವು ಸಿದ್ಧರಿದ್ದೇವೆ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿರುವುದು ವಿಶೇಷ.
“ಹೌದು, ಮುಂಬರುವ ಆಸ್ಟ್ರೇಲಿಯ ಪ್ರವಾಸದ ವೇಳೆ ಭಾರತ ಡೇ-ನೈಟ್ ಟೆಸ್ಟ್ ಪಂದ್ಯವೊಂದನ್ನು ಆಡಲಿದೆ. ಇದನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಾಗುವುದು’ ಎಂದು ಸೌರವ್ ಗಂಗೂಲಿ ತಿಳಿಸಿದರು. ಈ ಪಂದ್ಯ ಅಡಿಲೇಡ್ ಅಥವಾ ಪರ್ತ್ ನಲ್ಲಿ ನಡೆಯಲಿದೆ.
“ಭಾರತದ ಮುಂದಿನ ಪ್ರತಿಯೊಂದು ಟೆಸ್ಟ್ ಸರಣಿ ವೇಳೆಯೂ ಕನಿಷ್ಠ ಒಂದು ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಪ್ರಯತ್ನಿಸಲಿದೆ. ಅದರಂತೆ ಇಂಗ್ಲೆಂಡ್ ಎದುರಿನ ಮುಂಬರುವ ತವರಿನ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯ ಡೇ-ನೈಟ್ ಆಗಿರಲಿದೆ’ ಎಂಬುದಾಗಿ ಗಂಗೂಲಿ ಹೇಳಿದರು.
2015ರಿಂದ ಮೊದಲ್ಗೊಂಡು ಈ ತನಕ 14 ಹಗಲು-ರಾತ್ರಿ ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ಆಡಿದ್ದು ಒಂದು ಪಂದ್ಯ ಮಾತ್ರ. ಇದು ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ “ಈಡನ್ ಗಾರ್ಡನ್ಸ್’ನಲ್ಲಿ ನಡೆದಿತ್ತು.
ಅಂದು ಆಹ್ವಾನ ತಿರಸ್ಕರಿಸಿದ್ದ ಭಾರತ
ಭಾರತ 2018-19ರ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡ್‌ನಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಆಡಬೇಕಿತ್ತಾದರೂ ಬಿಸಿಸಿಐ “ಕ್ರಿಕೆಟ್ ಆಸ್ಟ್ರೇಲಿಯ’ದ ಆಹ್ವಾನವನ್ನು ತಿರಸ್ಕರಿಸಿತ್ತು.
ಈ ವರ್ಷಾರಂಭದ ಏಕದಿನ ಸರಣಿಯ ವೇಳೆ ಆಸ್ಟ್ರೇಲಿಯದ ಕ್ರಿಕೆಟ್ ನಿಯೋಗವೊಂದು ಭಾರತಕ್ಕೆ ಬಂದು ಬಿಸಿಸಿಐ ಜತೆ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಆಯೋಜನೆ ಕುರಿತು ಮಾತುಕತೆ ನಡೆಸಿತ್ತು. ಇದಕ್ಕೀಗ ಹಸಿರು ನಿಶಾನೆ ಲಭಿಸಿದಂತಿದೆ.
ವಿರಾಟ್ ಕೊಹ್ಲಿ ಆಸಕ್ತಿ
ಆಸ್ಟ್ರೇಲಿಯ ಪ್ರವಾಸದ ವೇಳೆ ಡೇ-ನೈಟ್ ಟೆಸ್ಟ್ ಪಂದ್ಯವಾಡಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸಕ್ತರಾಗಿದ್ದಾರೆ. ಕಳೆದ ಆಸ್ಟ್ರೇಲಿಯ ಸರಣಿಯ ಏಕದಿನ ಪಂದ್ಯವೊಂದರ ವೇಳೆ ಅವರು ಈ ಕುರಿತು ಹೇಳಿಕೆಯನ್ನೂ ನೀಡಿದ್ದರು. “ಆಸ್ಟ್ರೇಲಿಯದಲ್ಲಿ ಡೇ-ನೈಟ್ ಟೆಸ್ಟ್ ಆಡಲು ನಾವು ರೆಡಿ. ಅದು ಬ್ರಿಸ್ಬೇನ್, ಪರ್ತ್… ಎಲ್ಲೇ ಆಗಿರಬಹುದು, ನಮಗೆ ಸಮಸ್ಯೆ ಇಲ್ಲ. ಟೆಸ್ಟ್ ಸರಣಿ ವೇಳೆ ಹೊನಲು ಬೆಳಕಿನಲ್ಲಿ ಆಡುವುದು ರೋಮಾಂಚಕಾರಿ ಸಂಗತಿ’ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ENGvsNZ: ಸಚಿನ್ ತೆಂಡೂಲ್ಕರ್ ಟೆಸ್ಟ್ ದಾಖಲೆ ಮುರಿದ ಜೋ ರೂಟ್
Champions Trophy: ಹೈಬ್ರಿಡ್ ಮಾದರಿ ಕೂಟ ಆಯೋಜನೆಗೆ ಮೂರು ಷರತ್ತು ಹಾಕಿದ ಪಾಕ್: ಏನದು?
Champions Trophy: ಷರತ್ತಿನೊಂದಿಗೆ “ಹೈಬ್ರಿಡ್’ ಮಾದರಿಗೆ ಪಾಕ್ ಒಪ್ಪಿಗೆ
South Africa vs Sri Lanka, 1st Test: ದ. ಆಫ್ರಿಕಾಕ್ಕೆ 233 ರನ್ ಜಯ
Men’s Junior Asia Cup: ಗೋಲುಗಳ ಸುರಿಮಳೆ ಭಾರತಕ್ಕೆ 16-0 ಗೆಲುವು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.