ಸ್ಥಳೀಯರ ಆರ್ಥಿಕ ಸ್ವಾವಲಂಬನೆಗೆ ಬೆಂಬಲ ನೀಡಿದ ಹಿರಿಮೆ

ಉಳ್ಳೂರು-74 ಹಾಲು ಉತ್ಪಾದಕರ ಸಹಕಾರಿ ಸಂಘ

Team Udayavani, Feb 17, 2020, 5:26 AM IST

1502SIDE5-ULOUR-KSHIRA-KATHANA

ಹೆಚ್ಚು ಹೆಚ್ಚು ಹಾಲು ಉತ್ಪಾದನೆಯಿಂದ ಹೈನುಗಾರರ ಬದುಕೂ ಹಸನಾಗಬಲ್ಲದು ಎಂದು ಸಾಧಿಸಿ ತೋರಿಸಿದ್ದು ಉಳ್ಳೂರು-74 ಹಾಲು ಉತ್ಪಾದಕರ ಸಹಕಾರಿ ಸಂಘ. ಸಮಾಜಮುಖೀ ಕೆಲಸಗಳ ಮೂಲಕವೂ ಈ ಸಂಘ ಗುರುತಿಸಿಕೊಂಡಿದೆ.

ಸಿದ್ದಾಪುರ: ಸ್ಥಳೀಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಆರಂಭಗೊಂಡ ಉಳ್ಳೂರು-74 ಹಾಲು ಉತ್ಪಾದಕರ ಸಹಕಾರಿ ಸಂಘವು ಹೈನುಗಾರರ ಪಾಲಿನ ಆಶಾಕಿರಣವಾಗಿದೆ. ಸಮಾಜಮುಖೀ ಸಂಘವಾಗಿ ಗುರುತಿಸಿಕೊಂಡಿರುವ ಉಳ್ಳೂರು-74 ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 37 ವರ್ಷಗಳ ಇತಿಹಾಸ ಇದೆ.

1983 ರಲ್ಲಿ ಆರಂಭ
ಉಳ್ಳೂರು ಗ್ರಾಮದ ಸಮಾನ ಮನಸ್ಕರು ಸೇರಿಕೊಂಡು 1983ರಲ್ಲಿ ಹಾಡಿದೇವಸ್ಥಾನದ ಶ್ರೀಧರ ಹೆಬ್ಟಾರ್‌ ಮನೆಯಲ್ಲಿ ಸಂಘ ಪ್ರಾರಂಭಗೊಂಡಿತು. ಸಂಘವು ಪ್ರಾರಂಭದಲ್ಲಿ 50 ಲೀ. ಹಾಲು ಸಂಗ್ರಹಿಸುತ್ತಿತ್ತು. ಈಗ 1 ಸಾವಿರ ಲೀ.ಹಾಲು ಸಂಗ್ರಹವಾಗುತ್ತಿದೆ. 290 ಸದಸ್ಯರಿದ್ದು, 135 ಸದಸ್ಯರು ಸಂಘಕ್ಕೆ ಹಾಲು ಹಾಕುತ್ತಿದ್ದಾರೆ.

ಕೆನರಾ ಮಿಲ್ಕ್
ಯೂನಿಯನ್‌ಗೆ ಸರಬರಾಜು ಸಂಘವು 1983ರಲ್ಲಿ ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ಕಚೇರಿಯಲ್ಲಿ ನೋಂದಾಯಿ ಸಿಕೊಂಡಿತ್ತು. ಕೆನರಾ ಮಿಲ್ಕ್ ಯೂನಿಯನ ಸಹಯೋಗ ದೊಂದಿಗೆ ತನ್ನ ಕಾರ್ಯ ವಟುವಟಿಕೆ ಆರಂಭಿಸಿತ್ತು.

ಕಾರ್ಯಚಟುವಟಿಕೆ
ಸಂಘವು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಮತ್ತು ಸರಕಾರದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿದ್ದು ಯಶಸ್ವಿನಿ ರೈತರ ಆರೋಗ್ಯ ವಿಮೆ, ಮಹಿಳಾ ಹೈನು ಗಾರರಿಗೆ ಪ್ರೋತ್ಸಾಹ ಜಾನು ವಾರುಗಳಿಗೆ ಬೇಕಾದ ಪಶು ಆಹಾರ, ಹಸಿರು ಮೇವಿನ ಬೀಜ, ರೋಗ ನಿರೋಧಕ ಚುಚ್ಚು ಮದ್ದು, ಕೃತಕ ಗರ್ಭಧಾರಣೆ, ಲವಣ ಮಿಶ್ರಿತ ಆಹಾರವನ್ನು ಸಕಾಲದಲ್ಲಿ ಒದಗಿಸಲು ಶ್ರಮಿಸುತ್ತಿದೆ.
ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಮಾಹಿತಿ, ರಾಸುಗಳು ಮರಣ ಹೊಂದಿದಾಗ ಸಂಘದಿಂದ ಪರಿಹಾರ, ಹಾಲು ಉತ್ಪಾದಕರಿಗೆ ಬೋನಸ್‌, ಪಶು ಇಲಾಖೆಯ ಸಹಾಯದಿಂದ ಕಾಲು ಬಾಯಿ ಲಸಿಕೆ ಹಾಕುವುದನ್ನೂ ಮಾಡುತ್ತಿದೆ.

ಸಂಘವು ತಳಿ ಅಭಿವೃದ್ಧಿಗಾಗಿ ಸುಮಾರು 35 ಸಾವಿರಕ್ಕೂ ಹೆಚ್ಚು ಕೃತಕ ಗರ್ಭಧಾರಣೆ ಮಾಡಿದೆ. ಜತೆಯಲ್ಲಿ ಬೇರೆ ಬೇರೆ ತಳಿಗಳ ಸುಧಾರಣೆಗಾಗಿ ಪ್ರಥಮ ಚಿಕಿತ್ಸಾ ಸೌಲಭ್ಯ ನೀಡುತ್ತ ಬರುತ್ತಿದೆ. ಉತ್ತಮ ಕೃತಕ ಗರ್ಭಧಾರಣೆ ಕೇಂದ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

2019ರಲ್ಲಿ ಸ್ವಂತ ಕಟ್ಟಡ
ಉಳ್ಳೂರು ಪೇಟೆಯಲ್ಲಿ 1994ರಲ್ಲಿ 13 ಸೆಂಟ್ಸ್‌ ಜಾಗ ಮಂಜೂರಾಗಿತ್ತು. ಅದೇ ಸ್ಥಳದಲ್ಲಿ 2019ರಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಆಧುನಿಕ ಶೈಲಿಯ ಕಟ್ಟಡ ನಿರ್ಮಿಸಿ ಅದರಲ್ಲಿ ಕಾರ್ಯಾಚರಿಸುತ್ತಿದೆ.

ಸಂಘವು 15 ಲಕ್ಷ ರೂ. ವೆಚ್ಚದ ಆತ್ಯಾಧುನಿಕ ಕಟ್ಟಡ ಹೊಂದಿದೆ. ಇಂಟರ್‌ಲಾಕ್‌, ಕಾಂಪೌಂಡ್‌ ಹಾಕಲಿದ್ದೇವೆ. ಹೈನುಗಾರರ ಅನುಕೂಲಕ್ಕಾಗಿ ಬಂಟಕೋಡು ಎಂಬಲ್ಲಿ ಶಾಖೆ ಮಾಡುವ ಉದ್ದೇಶ ಇದೆ.
ವಿ. ದಿವಾಕರ ಶೆಟ್ಟಿ,
ಅಧ್ಯಕ್ಷರು

ಅಧ್ಯಕ್ಷರು:
ಶ್ರೀಧರ್‌ ಹೆಬ್ಟಾರ್‌, ರಾಮಕೃಷ್ಣ ಕರ್ಣಿಕ್‌, ಕೆ. ಬಚ್ಚಯ್ಯ ಶೆಟ್ಟಿ, ಬಿ. ಶಂಕರ ಶೆಟ್ಟಿ, ಎಸ್‌. ಸಂಜೀವ ಶೆಟ್ಟಿ ಸಂಪಿಗೇಡಿ, ದಿವಾಕರ ಶೆಟ್ಟಿ ವಾರನಪಾಲು (ಹಾಲಿ)
ಕಾರ್ಯದರ್ಶಿಗಳು:
ಶೇಖರ ಶೆಟ್ಟಿ, ಉದಯ ಶೆಟ್ಟಿ, ಭುಜಂಗ ದೇವಾಡಿಗ, ಯು. ರತ್ನಾಕರ ಶೆಟ್ಟಿ (ಹಾಲಿ)

-ಸತೀಶ ಆಚಾರ್‌ ಉಳ್ಳೂರು

ಟಾಪ್ ನ್ಯೂಸ್

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.