ಹೈನುಗಾರರಿಗೆ ಪ್ರೋತ್ಸಾಹ ನೀಡುತ್ತಾ 34 ವರ್ಷಗಳ ಸುದೀರ್ಘ ಸೇವೆ
ಮಂಚಿ ಹಾಲು ಉತ್ಪಾದಕರ ಸಹಕಾರಿ ಸಂಘ
Team Udayavani, Feb 17, 2020, 5:09 AM IST
ಹೈನುಗಾರಿಕೆಯನ್ನು ಗ್ರಾಮೀಣ ಬಡ ಜನತೆಗೆ ಬದುಕಿಗೆ ದಾರಿದೀಪವನ್ನಾಗಿಸಿ ಆರ್ಥಿಕ ಶಕ್ತಿ ತುಂಬುವ, ವ್ಯವಹಾರದ ಕೊಂಡಿಯಾಗಿ ಬೆಳೆಸಿದೆ.
ಕಲ್ಲಡ್ಕ : ಮಂಚಿ ಗ್ರಾಮದಲ್ಲಿ ಹೈನುಗಾರಿಕೆ ಬೆಳೆಯಬೇಕೆಂಬ ಉದ್ದೇಶದಿಂದ 34 ವರ್ಷಗಳ ಹಿಂದೆ ಆರಂಭವಾದ ಮಂಚಿ ಹಾಲು ಉತ್ಪಾದಕರ ಸಹಕಾರಿ ಸಂಘವು ಇಂದು 190 ಸದಸ್ಯರನ್ನು ಹೊಂದಿದ್ದು, ದಿನವಹಿ 1,300 ಲೀ. ಹಾಲು ಸಂಗ್ರಹಿಸುತ್ತಿದೆ.
ಮಂಚಿ ನಿವಾಸಿ ದಿ| ನೂಜಿಪ್ಪಾಡಿ ಕೇಚಪ್ಪಯ್ಯ ಅಧ್ಯಕ್ಷತೆಯಲ್ಲಿ 1986ರ ಫೆ. 10ರಂದು ಸಂಘಕ್ಕೆ ಚಾಲನೆ ದೊರಕಿತ್ತು. ಅಂದು ಸಂಘದ ಸದಸ್ಯರಾಗಿ 54 ಮಂದಿ ಇದ್ದು, 5 ಲೀ. ಹಾಲು ಸಂಗ್ರಹ ಆಗುತ್ತಿತ್ತು.
ಹೈನುಗಾರರಿಗೆ ತರಬೇತಿ, ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಾ ಬಂದ ಸಂಘದ ಸ್ಥಾಪಕ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರ ಶ್ರಮ ಸಾಧನೆಯಿಂದ ಕ್ರಮೇಣ ಹಾಲಿನ ಸಂಗ್ರಹ ಹೆಚ್ಚಿತಲ್ಲದೆ, ಒಂದೇ ವರ್ಷದಲ್ಲಿ 102 ಲೀ. ಹಂತಕ್ಕೆ ತಲುಪಿತ್ತು.
ಸಂಘವು ಅಂದು ಮಂಚಿ ಮತ್ತು ಇರಾ ಎರಡು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿತ್ತು. 2011ರಲ್ಲಿ ಸಂಘವನ್ನು ವಿಭಾಗಿಸಿ ಇರಾ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ತೆರೆಯಲಾಯಿತು. ಹಾಗಾಗಿ ಪ್ರಸ್ತುತ ಮಂಚಿ ಗ್ರಾ.ಪಂ. ವ್ಯಾಪ್ತಿಗೆ ಸೀಮಿತವಾಗಿ ಕಾರ್ಯಾಚರಿಸುತ್ತಿದೆ.
ಸಂಘವು 1986ರಿಂದ ಮಂಗಳೂರು ಕೆಎಂಎಫ್ ಸುಪರ್ದಿಯಲಿದ್ದು, ಅಂದಿನಿಂದ ಮಂಗಳೂರಿಗೆ ಹಾಲನ್ನು ಸರಬರಾಜು ಮಾಡುತ್ತಿದೆ.ಸಂಘದಲ್ಲಿ ಪ್ರಸ್ತುತ ಕೆ. ಮುರಳೀಧರ ಆಳ್ವ ಅಧ್ಯಕ್ಷರಾಗಿ, ಸುದೀರ್ಘ 34 ವರ್ಷಗಳಿಂದ ಕಾರ್ಯದರ್ಶಿಯಾಗಿ ಕೇಶವ ರಾವ್ ಎನ್. ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಶುಗಳ ಕೃತಕ ಗರ್ಭಧಾರಣೆ ತರಬೇತಿ ಪಡೆದು ಕಾರ್ಯದರ್ಶಿಯವರೇ ಅದನ್ನು ನಿರ್ವಹಿಸುತ್ತಿದ್ದಾರೆ.
ಸ್ವಂತ ಕಟ್ಟಡ
ಸಮಂಚಿಯಲ್ಲಿ ಸಂಘವು ಹೊಂದಿರುವ ಸ್ವಂತ ಜಮೀನಿನಲ್ಲಿ (0.03 ಸೆಂಟ್ಸ್) ಕಚೇರಿ ಕಟ್ಟಡ, ಗೋದಾಮು, ಮೇಲಂತಸ್ತಿನಲ್ಲಿ ವಾಣಿಜ್ಯ ಬಳಕೆಯ ಮೂರು ಕೊಠಡಿಗಳನ್ನು ಹೊಂದಿದೆ. ಮಂಚಿಕಟ್ಟೆಯ ಸ್ವಂತ ಜಮೀನಿನಲ್ಲಿ ಸುಸಜ್ಜಿತ ಉಪಕೇಂದ್ರವನ್ನು ಹೊಂದಿದ್ದು ಹಾಲನ್ನು ಅಲ್ಲಿಯೂ ಸಂಗ್ರಹಿಸಲಾಗುತ್ತಿದೆ. ಸಂಘದಲ್ಲಿ ನಿಶ್ಚಲ್ ಜಿ. ಶೆಟ್ಟಿ ಅವರು ಗರಿಷ್ಠ 110 ಲೀ. ಹಾಲು ಪೂರೈಸುವ ದೊಡ್ಡ ಹೈನುಗಾರರು.
ಶೀತಲೀಕರಣ ಘಟಕ
ಮಂಗಳೂರು ಕೆಎಂಎಫ್ ಒಕ್ಕೂಟ ವತಿಯಿಂದ 2007ರಲ್ಲಿ ಕೇಂದ್ರ ಸರಕಾರದ ನೆರವಿನಲ್ಲಿ ಮಂಚಿ ಸಾಂದ್ರ ಶೀತಲೀಕರಣ ಘಟಕ ಸ್ಥಾಪನೆ ಆಗಿದೆ.ಈ ಶೀತಲೀಕರಣ
ಘಟಕಕ್ಕೆ ಬೊಳ್ಳಾಯಿ, ಅಮೂrರು, ಕುರಿಯತಡ್ಕ, ಕೊಳ್ನಾಡು, ಇರಾ, ಮಂಚಿಕಟ್ಟೆ ಸಂಘದಿಂದ ಹಾಲು ಸರಬರಾಜು ಆಗುತ್ತದೆ. ಸಂಗ್ರಹವಾದ ಮಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ.
ಉತ್ತಮ ಸಂಘ ಪ್ರಶಸ್ತಿ
ಸಂಘಕ್ಕೆ ಒಟ್ಟು 10ಅವಧಿಗಳಲ್ಲಿ ದ.ಕ. ಜಿಲ್ಲಾ ಹಾಲು ಒಕ್ಕೂಟದಿಂದ ಬಂಟ್ವಾಳ ತಾ|ನ ಉತ್ತಮ ಸಂಘ ಪ್ರಶಸ್ತಿ, ಸತತ 3 ವರ್ಷ ದ.ಕ. ಜಿಲ್ಲಾ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿ, ಕೆಎಂಎಫ್ ಬೆಳ್ಳಿ ಹಬ್ಬ ಸಂದರ್ಭ ರಾಜ್ಯಮಟ್ಟದ ಅತ್ಯುತ್ತಮ ಸಂಘಗಳ ಜಿಲ್ಲಾ ಅತ್ಯುತ್ತಮ ಸಂಘ ಪ್ರಶಸ್ತಿ, ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ನೀಡುವ ಹಾಲು ಉತ್ಪಾದಕರ ಸಹಕಾರಿಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ಜಿಲ್ಲಾ ಪ್ರಶಸ್ತಿ ಲಭಿಸಿದೆ. ತಾ| ನಲ್ಲಿ ಗರಿಷ್ಠ ಹಾಲು ಸಂಗ್ರಹದ ಪ್ರತಿಷ್ಠಿತ ಗೌರವದ
ಸ್ಥಾನಮಾನ ಪುರಸ್ಕಾರ ದೊರೆತಿದೆ.
ಮಾಜಿ ಅಧ್ಯಕ್ಷರು
ದಿ| ನೂಜಿ ಕೇಚಪಯ್ಯ, ಅನಂತರಾಮ ಎನ್., ಪಿ. ಗೋಪಾಲ ರಾವ್, ಜಯರಾಮಕೃಷ್ಣ ಭಟ್ ಕಜೆ, ರಾಮ್‌ಕಿಶೋರ್ ಮಂಚಿ.
ಸಂಘವು ದಿನವಹಿ 2 ಅವಧಿಗಳಲ್ಲಿ ಹಾಲು ಸಂಗ್ರಹ ಮಾಡುತ್ತದೆ. ಪ್ರತಿ ಹತ್ತು ದಿನಗಳಿಗೊಮ್ಮೆ ಹಾಲಿನ ದರವನ್ನು ಫಲಾನುಭವಿಯ ಖಾತೆಗೆ ಜಮೆ ಮಾಡಲಾಗುತ್ತದೆ. ಕರ್ನಾಟಕ ಸರಕಾರದ ಪ್ರೋತ್ಸಾಹ ಧನವೂ ಅವರ ಖಾತೆಗೆ ಸಂದಾಯ ಆಗುವುದು. ಸಹಕಾರ ತತ್ವದ ಅಡಿಯಲ್ಲಿ ದುಡಿಯುವ ಸಿಬಂದಿಗೆ ಸಂಘದಿಂದ ಸೇವಾ ಭದ್ರತೆಯನ್ನು ನೀಡಲಾಗಿದೆ.
– ಕೆ. ಮುರಳೀಧರ ಆಳ್ವ,
ಅಧ್ಯಕ್ಷರು
-ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.