ಸಕಾರಾತ್ಮಕ ಚಿಂತನೆಗಳಿಂದ ಜೀವನದ ಗೆಲುವು
Team Udayavani, Feb 17, 2020, 5:49 AM IST
ಜೀವನದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಈ ಬಗ್ಗೆ ಲೆಕ್ಕಾಚಾರವನ್ನು ನಾವು ಮಾಡುತ್ತಿರುತ್ತೇವೆ. ಈ ಬಾರಿ ನಾನು ಅಂದುಕೊಂಡ ಕೆಲಸ ಆಗಬಹುದೇ, ಆಗುವುದಿಲ್ಲವೇ ಎಂಬ ಮೂಲ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳುತ್ತೇವೆ. ಈ ವಿಚಾರದಲ್ಲಿ ಜೀವನದಲ್ಲಿ ಏನೇ ಬಂದರೂ ಕೂಡ ನಾವು ಸಕಾರಾತ್ಮಕವಾಗಿಯೇ ಯೋಚಿಸಬೇಕು ಎಂಬುವುದನ್ನು ನಾವು ಅರ್ಥಮಾಡಿಕೊಳ್ಳಬೇಕು.
ಸಕಾರಾತ್ಮಕ ಚಿಂತನೆಯ ಜತೆಗೆ ದೃಢವಾದ ನಂಬಿಕೆಯಿದ್ದಾಗ ಮಾಡುವ ಯಾವುದೇ ಕೆಲಸಗಳು, ಸಂಬಂಧಗಳು ಯಶಸ್ವಿಯಾಗಲು ಸಾಧ್ಯ. ಇದರಿಂದ ಜೀವನದಲ್ಲಿ ಲವಲವಿಕೆಯಿಂದ ಇರಲು ಸಾಧ್ಯ. ಈ ಬಗ್ಗೆ ಕೆಲವೊಂದು ಅಂಶಗಳನ್ನು ಜೀವನದಲ್ಲಿ ಅರಿತುಕೊಳ್ಳುವುದು ಅಗತ್ಯ.
ಯಶಸ್ಸು ಎಂಬ ಅಭ್ಯಾಸ
ನಮ್ಮಲ್ಲಿರುವ ಅಸಹನೆಯೂ ನಮ್ಮ ಯೋಚನೆಗಳನ್ನು ಕಿರಿದಾಗಿಸುತ್ತದೆ ಮತ್ತು ಜೀವನದಲ್ಲಿ ಏರಳಿತವನ್ನು ಕಾಣಬೇಕಾಗುತ್ತದೆ. ವಾಸ್ತವವಾಗಿ ಜೀವನದಲ್ಲಿ ಏರಿಳಿತಗಳನ್ನು ಕಾಣವುದು ಸಹಜ. ಇದು ಕೂಡ ಉತ್ತಮ ಬೆಳವಣಿಗೆ. ಆದರೆ ನಮ್ಮ ಯೋಚನೆಗಳು ಕಿರಿದಾಗಿಸಿಕೊಳ್ಳುವುದು ಸಲ್ಲ. ಹಾಗಾಗಿ ಜೀವನದಲ್ಲಿ ಹೊಸ ಅಭ್ಯಾಸಗಳು ನಮ್ಮನ್ನು ಒಳ್ಳೆಯ ಆಲೋಚನೆ ಕಡೆಗೆ ತೆಗೆದುಕೊಂಡು ಹೋಗುತ್ತವೆ.
ನೀವು ದಿನಾಲೂ ಕನ್ನಡಿಯಲ್ಲಿ ಕೂದಲುಗಳನ್ನು ನೋಡಿಕೊಳ್ಳುತ್ತೀರಾದರೆ, ನಿಮಗೆ ನಿಮ್ಮ ಕೂದಲು ಮಾತ್ರ ಕಾಣುತ್ತದೆ. ಆದರೆ ಅದರ ಬೆಳವಣಿಗೆ ಸೂಕ್ಷ್ಮತೆ ನಿಮಗೆ ಕಾಣುವುದಿಲ್ಲ. ಅಂತೆಯೇ ನಿಮ್ಮ ಜೀವನದಲ್ಲಿ ಕೂಡ ನಿಮ್ಮ ಕೆಲಸ, ಕಾರ್ಯಗಳು ನೀವು ನಿಮಗೆ ಕಾಣುತ್ತದೆ.
ಬದಲಾವಣೆ ಎಂಬ ಜಗದ ನಿಯಮ
ನೀವು ಜೀವನದಲ್ಲಿ ಎಲ್ಲಿ ಇರಬೇಕೆಂದು ನೀವು ಬಯಸಿದಿದ್ದರೆ ಮತ್ತು ನೀವು ಬದಲಾವಣೆಯನ್ನು ಬಯಸಿದರೆ, ಮೊದಲ ಹೆಜ್ಜೆ ನಿಜವಾಗಿಯೂ ತಡವಾಗಿಲ್ಲ ಎಂದು ತಿಳಿದುಕೊಳ್ಳಿ. ಇಂದು ಇತರರಂತೆ ಪ್ರಾರಂಭಿಸಲು ಒಂದು ದಿನದಷ್ಟೇ ಅದ್ಭುತವಾಗಿದೆ. ಎಲ್ಲ ವಿಷಯಗಳೆಂದರೆ, ನೀವು ಉದ್ದೇಶಪೂರ್ವಕವಾಗಿ ಆ ಬದಲಾವಣೆಯ ಹಾದಿಯನ್ನು ಪ್ರಾರಂಭಿಸುವುದು ಮಾತ್ರವಲ್ಲ, ಆದರೆ ರಾತ್ರಿಯಿಡೀ ವಿಷಯಗಳು ಬದಲಾಗುತ್ತವೆ ಎಂದು ನಿರೀಕ್ಷಿಸಬೇಡಿ. ನಿಮ್ಮ ಶ್ರಮದ ಫಲವನ್ನು ಇನ್ನಷ್ಟು ನೋಡಿಕೊಳ್ಳಿ.
- ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.