ಆಮೆಗತಿಯಲ್ಲಿ ಸಾಗಿದೆ ಆರ್ಯ ಸಮಾಜ ರಸ್ತೆ ಕಾಮಗಾರಿ
Team Udayavani, Feb 17, 2020, 5:28 AM IST
ಮಹಾನಗರ: ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಆರ್ಯ ಸಮಾಜ ರಸ್ತೆಯ ಕಾಂಕ್ರೀಟ್ ಕಾಮಗಾರಿ ನಿಧಾನವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಳೆದ ನವೆಂಬರ್ ತಿಂಗಳಿನಲ್ಲೇ ಕಾಮ ಗಾರಿ ಆರಂಭಗೊಂಡಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಆಮೆಗತಿಯಲ್ಲಿ ಸಾಗಿದೆ. ಇದೇ ರೀತಿ ಮುಂದುವರಿದರೆ ಈ ಬಾರಿಯ ಮಳೆಗಾಲಕ್ಕೂ ಪೂರ್ಣಗೊಳ್ಳುವ ಬಗ್ಗೆ ಸಂದೇಹವಿದೆ. ಈಗ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಅದು ಪೂರ್ಣಗೊಂಡ ಅನಂತರ ಮಳೆನೀರು ಹರಿಯುವ ಚರಂಡಿ, ಫುಟ್‌ಪಾತ್ ಕಾಮಗಾರಿ ನಡೆಯಬೇಕಿದೆ. ಇವೆಲ್ಲವೂ ಪೂರ್ಣಗೊಳ್ಳಬೇಕಾದರೆ ಮತ್ತೆ ಮೂರು ತಿಂಗಳುಗಳಿಗೂ ಹೆಚ್ಚು ಅವಧಿ ಬೇಕಾಗಬಹುದು. ಒಂದು ವೇಳೆ ಚರಂಡಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಪಕ್ಕದ ಮನೆ, ವಸತಿ ಸಂಕೀರ್ಣಗಳಿಗೆ ಮಳೆ ನೀರು ನುಗ್ಗುವ ಅಪಾಯವೂ ಇದೆ ಎಂದು ಸ್ಥಳೀಯ ವ್ಯಾಪಾರಿಗಳು, ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಒಳಚರಂಡಿ ಅವ್ಯವಸ್ಥೆ
ಇಲ್ಲಿ ಕಾಂಕ್ರೀಟ್ ಕಾಮಗಾರಿ ಆರಂಭವಾದ ಕೆಲವು ದಿನಗಳ ಅನಂತರ ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಅಧ್ಯಕ್ಷ ವಿ. ಪೊನ್ನುರಾಜ್ ಅವರು ಇಲ್ಲಿ ಅಸಮರ್ಪಕವಾಗಿದ್ದ ಒಳಚರಂಡಿ ವ್ಯವಸ್ಥೆಯ ಬಗ್ಗೆಯೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಪ್ರಮುಖ ರಸ್ತೆ
ಬ್ರಿಡ್ಜ್ ರೋಡ್‌ನಿಂದ ಆರ್ಯ ಸಮಾಜ ರಸ್ತೆಯಾಗಿ ಸಂಚರಿಸಬಹುದು. ಅಲ್ಲದೆ ಆರ್ಯ ಸಮಾಜ ರಸ್ತೆಯು ಬಲ್ಮಠ ಮತ್ತು ಮಲ್ಲಿಕಟ್ಟೆ-ಕದ್ರಿ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ.ಮನೆ, ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿವೆ.
ಬ್ರಿಡ್ಜ್ ರೋಡ್ ಪೂರ್ಣ
ಗೋಲ್ಡ್‌ಫಿಂಚ್ ಹೊಟೇಲ್ ಪಕ್ಕದ ಬ್ರಿಡ್ಜ್ ರೋಡ್ ಕಾಮಗಾರಿ ಬಹುತೇಕ ಪೂರ್ಣಗೊಂಡು ಕ್ಯೂರಿಂಗ್ ನಡೆಯುತ್ತಿದೆ. ಈ ರಸ್ತೆ ಜ್ಯೂಸ್ ಜಂಕ್ಷನ್, ಬಲ್ಮಠ-ಜ್ಯೋತಿ ರಸ್ತೆಯ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಒಳರಸ್ತೆಯಾಗಿದೆ.ಮನೆ, ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿವೆ.
ಬ್ರಿಡ್ಜ್ ರೋಡ್ ಪೂರ್ಣ
ಗೋಲ್ಡ್‌ಫಿಂಚ್ ಹೊಟೇಲ್ ಪಕ್ಕದ ಬ್ರಿಡ್ಜ್ ರೋಡ್ ಕಾಮಗಾರಿ ಬಹುತೇಕ ಪೂರ್ಣಗೊಂಡು ಕ್ಯೂರಿಂಗ್ ನಡೆಯುತ್ತಿದೆ. ಈ ರಸ್ತೆ ಜ್ಯೂಸ್ ಜಂಕ್ಷನ್, ಬಲ್ಮಠ-ಜ್ಯೋತಿ ರಸ್ತೆಯ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಒಳರಸ್ತೆಯಾಗಿದೆ.
ತಿಂಗಳಲ್ಲಿ ಪೂರ್ಣ
ಆರ್ಯ ಸಮಾಜ ರಸ್ತೆಯ ಕಾಂಕ್ರೀಟ್ ಕಾಮಗಾರಿಯಲ್ಲಿ ಇನ್ನು 100 ಮೀಟರ್ ಮಾತ್ರ ಬಾಕಿ ಇದೆ. ಇದು 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅನಂತರ ಕ್ಯೂರಿಂಗ್‌ಗೆ ಕೆಲವು ದಿನಗಳ ಆವಶ್ಯಕತೆ ಇದೆ. ಸುಮಾರು ಒಂದು ತಿಂಗಳಲ್ಲಿ ಈ ರಸ್ತೆಯು ವಾಹನ ಸಂಚಾರಕ್ಕೆ ಲಭ್ಯವಾಗಲಿದೆ. ಬ್ರಿಡ್ಜ್ ರೋಡ್‌ನ ಕಾಮಗಾರಿ ಪೂರ್ಣಗೊಂಡಿದ್ದು ಕ್ಯೂರಿಂಗ್ ನಡೆಯುತ್ತಿದೆ. ಈ ರಸ್ತೆ ಒಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.
- ಮಹಮ್ಮದ್ ನಝೀರ್,
ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರು
3 ತಿಂಗಳೂ ಸಾಕಾಗದು
ಕಾಮಗಾರಿ ನಿಧಾನವಾಗಿದೆ. ಕೆಲವು ದಿನ ಕೆಲಸ ಸ್ಥಗಿತಗೊಂಡಿತ್ತು. ಬ್ಯಾನರ್ ರಾಜಕೀಯವೂ ಕಾಮಗಾರಿ ವೇಗವಾಗಿ ಸಾಗಲು ಅಡ್ಡಿಯಾಯಿತು. ಕಾಮಗಾರಿ ಇದೇ ರೀತಿ ಮುಂದುವರಿದರೆ ಮತ್ತೆ 3 ತಿಂಗಳುಗಳು ಕೂಡ ಸಾಕಾಗದು. ರಸ್ತೆ ಪೂರ್ಣಗೊಂಡರೂ ಚರಂಡಿ ಪೂರ್ಣವಾಗದೆ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಕೆಲಸ ಬೇಗ ಮುಗಿಸಬೇಕೆಂಬುದು ನಮ್ಮ ಮನವಿ.
- ವಿಜಯ ಕುಮಾರ್ ಆಳ್ವ, ಸ್ಥಳೀಯ ಉದ್ಯಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.