ತಂತ್ರ ಸಾಹಿತ್ಯವೆಂದರೆ ಅಲಕ್ಷ್ಯವೇಕೆ?

ತಂತ್ರಶಾಸ್ತ್ರದ ಬಗ್ಗೆ ತಪ್ಪುಗ್ರಹಿಕೆ ಇರುವುದು ದುರಂತ: ಡಾ| ಕುಮಾರಸ್ವಾಮಿ

Team Udayavani, Feb 17, 2020, 5:17 PM IST

17-February-30

ಚಿತ್ರದುರ್ಗ: ತಂತ್ರವಿದ್ಯೆ, ತಂತ್ರಶಾಸ್ತ್ರ ಎಂದರೆ ನಮಗೆ ಮಾಯಾ ಮಂತ್ರ, ಮಾಟ ಮಂತ್ರ ಎಂಬ ಕಲ್ಪನೆ ಇದೆ. ಈ ತಂತ್ರ ಸಾಹಿತ್ಯದ ಬಗ್ಗೆ ಅಲಕ್ಷ್ಯವಿದೆ. ಆದರೆ ಅಧ್ಯಯನ ಮಾಡಿದಾಗ ಅನೇಕ ಅರ್ಥಗಳು ತಿಳಿಯುತ್ತವೆ ಎಂದು ಭದ್ರಾವತಿಯ ಕನ್ನಡ ಪ್ರಾಧ್ಯಾಪಕ ಡಾ| ಕೆ.ಎಸ್‌.
ಕುಮಾರಸ್ವಾಮಿ ಹೇಳಿದರು.

ನಗರದ ಐಎಂಎ ಸಭಾಂಗಣದಲ್ಲಿ ಭಾನುವಾರ ಚಿತ್ರದುರ್ಗ ಇತಿಹಾಸ ಕೂಟ ಹಾಗೂ ರೇಣುಕಾ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ 41ನೇ ಉಪನ್ಯಾಸ ಕಾರ್ಯಕ್ರಮದಲ್ಲಿ “ತಂತ್ರ ಸಾಹಿತ್ಯ; ಒಂದು ಸ್ಥೂಲ ಅವಲೋಕನ’ ವಿಷಯದ ಕುರಿತು ಅವರು ಮಾತನಾಡಿದರು.

ಇತಿಹಾಸ ಸಂಶೋಧನೆ ಎಂದರೆ ಸತ್ಯ ಶೋಧನೆ ಮಾಡುವುದು. ಹಾಗಾಗಿ ಸಂಶೋಧನೆ ನಿಖರವಾಗಿರಬೇಕು. ತಂತ್ರ ಸಾಹಿತ್ಯ ಸಂಸ್ಕೃತ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗೆ ಅನುವಾದವಾಗಿವೆ. ತಂತ್ರಶಾಸ್ತ್ರಕ್ಕೆ ನಾನಾ ವಿಶ್ಲೇಷಣೆ ಇದೆ. ತಂತ್ರ ಅಂದರೆ ಮಗ್ಗದಿಂದ ಆಗ ತಾನೇ ತೆಗೆದ ತಂತ್ರಕ ಎಂದು ಪಾಣಿನಿ ಹೇಳುತ್ತಾರೆ. ಮಗ್ಗ ಎಂದ ತಕ್ಷಣ ಯಂತ್ರ ಎಂಬ ಕಲ್ಪನೆ ಬರುತ್ತದೆ.

ಕೆಲ ವಿದ್ಯಾಂಸರು ತಂತ್ರಸಾಹಿತ್ಯ ಅಥರ್ಣವೇದದಿಂದ ಪ್ರಾರಂಭವಾಗಿದೆ ಎಂದು ಹೇಳಿದರೆ ಬನ್ನಂಜೆ ಗೋವಿಂದಾಚಾರ್ಯರು ಭಾರತದ ಅತ್ಯಂತ ಪುರಾತನ ಶಾಸ್ತ್ರಗಳಲ್ಲಿ ತಂತ್ರಶಾಸ್ತ್ರವೂ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದರು.

ತಂತ್ರ ಸಾಹಿತ್ಯದಲ್ಲಿ ಸಾಕಷ್ಟು ಆಯಾಮಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ. ತಂತ್ರ ಅಂದರೆ ಜ್ಞಾನ. ಮಾಟ ಸಂಸ್ಕೃತ ಭಾಷೆಯಿಂದ ಬಂದ ಪದ. ಮಾಟ ಅಂದರೆ ಸೌಂದರ್ಯ, ಸುಂದರವಾದ ಕೆಲಸ ಅಂತ ಕೂಡ ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದರು. ತಂತ್ರಶಾಸ್ತ್ರ ಇತಿಹಾಸಕಾರರು ಹಾಗೂ ಜನಸಮಾನ್ಯರಿಗೆ ಅಪರಿಚಿತವಾಗಿದ್ದಾರೆ. ಅದರ ಬಗ್ಗೆ ತಪ್ಪುಗ್ರಹಿಕೆಗಳಿವೆ. ಇದು ಸಮಾಜದ ದುರಂತ. ಇಂದು ತಂತ್ರಶಾಸ್ತ್ರದ ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದರು.

ಅಮರಕೋಶದಲ್ಲಿ ಸಾಂಖ್ಯಾ, ಅರ್ಥಶಾಸ್ತ್ರ, ಯೋಗ ಸೇರಿ ತಂತ್ರಶಾಸ್ತ್ರವಾಗಿದೆ ಎಂದು ಹೇಳಿದೆ. ಪೂರ್ವ ಮೀಮಾಂಸೆಯನ್ನು ಪ್ರಥಮ ತಂತ್ರಶಾಸ್ತ್ರ ಎಂದು ಕರೆಯಲಾಗುತ್ತದೆ. ತಂತ್ರಶಾಸ್ತ್ರ ವಿಜ್ಞಾನಕ್ಕೆ ತುಂಬ ಹತ್ತಿರವಾದದ್ದು. ನಮ್ಮ ಪಾರಂಪರಿಕ ವಿಜ್ಞಾನ ಎಂದು ಕೆಲವರು ಹೇಳುತ್ತಾರೆ. ತಂತ್ರಸಾಹಿತ್ಯ ಇಲ್ಲದಿದ್ದರೆ ಭಾರತ ಸಾಹಿತ್ಯ ಬರಡಾಗುತ್ತಿತ್ತು ಎಂದರು.
ಹಿರಿಯ ಸಂಶೋಧಕ ಪ್ರೊ| ಲಕ್ಷ್ಮಣ ತೆಲಗಾವಿ, ರೇಣುಕಾ ಪ್ರಕಾಶನದ ಎನ್‌.ಡಿ. ಶಿವಣ್ಣ, ಇತಿಹಾಸ ಕೂಟದ ಸಂಚಾಲಕ ಡಾ| ಎನ್‌.ಎಸ್‌. ಮಹಂತೇಶ್‌, ಹಿರಿಯ ಪತ್ರಕರ್ತ ಉಜ್ಜಿನಪ್ಪ, ಗೋಪಾಲಸ್ವಾಮಿ ನಾಯಕ್‌, ಸಾಹಿತಿ ಎಸ್‌.ಆರ್‌. ಗುರುನಾಥ್‌ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.