ನಿನ್ನಾ ನೋಟಕೆ ನಾ, ಸೋತು ಹೋದೆನು…..
Team Udayavani, Feb 18, 2020, 4:26 AM IST
ನನ್ನ ಕನಸಿನ ಕೂಸು ಕಣೋ ನೀನು. ನೀನಲ್ಲದೇ, ಈ ಸಂಜೆ ಯಾಕಾಗಿದೆ ಅಂತ ಅನಿಸುತ್ತಿದೆ. ಪ್ರೀತಿಯಂಬ ಪಲ್ಲಕ್ಕಿಯಲ್ಲಿ ತೇಲಾಡುತ್ತಿರುವ ನನಗೆ ನಿನ್ನದೇ ಕನವರಿಕೆ. ನನ್ನ ಪಾಡಿಗೆ ಇದ್ದ ಮನಸ್ಸು ಈಗ, ನಿನ್ನ ಪ್ರೀತಿಯಲ್ಲಿ ಕಳೆದುಹೋಗಿದೆ. ನನಗೆ ಇನಿಯನಾಗಿ, ಗೆಳೆಯನಾಗಿ ತೋರಿಸುತ್ತಿರುವ ಪ್ರೀತಿ, ಕಾಳಜಿ, ನಿನ್ನ ನಗು ಮಾತು ಎಲ್ಲಾ ನೋವುಗಳನ್ನು ಮರೆಸಿ ಹೊಸ ಚೈತ್ಯನವನ್ನು ಮೂಡಿಸಿದೆ.
ಪ್ರೀತಿ ಇದ್ದಲ್ಲಿ ಜಗಳ ಜಾಸ್ತೀನೇ, ಹೌದು, ನಮ್ಮಿಬ್ಬರ ನಡುವೆ ಜಗಳ ಕ್ಷಣಿಕ ಮಾತ್ರ. ಮತ್ತೆ ಅದೇ ಪ್ರೀತಿಯನ್ನು ತೋರಿಸುತ್ತ, ನಾನು ನಿನ್ನನ್ನು ಹೆಚ್ಚು ಪ್ರೀತಿಸುವಂತೆ ಮಾಡುತ್ತಿರುವ ಕಳ್ಳ ನೀನು. ಮೊದಲ ಸಲ ನೋಡಿದಾಗಲೇ ನಿನ್ನ ಮಾತಿಗೆ, ನೋಟಕ್ಕೆ ಮರುಳಾದೆ. ಅಲ್ಲಿಂದಲೇ ನಮ್ಮಿಬ್ಬರ ಪ್ರೀತಿಯ ಪಯಣ ಶುರುವಾದದ್ದು. ನಿನ್ನ ಪ್ರೀತಿಯ, ಮಮತೆಯ ಮಡಿಲಲ್ಲಿ ಮಗುವಾಗುವ ಆಸೆ ನನಗೆ.
ಯಾರಿಗೂ ಪ್ರವೇಶ ಇಲ್ಲದ ನಿನ್ನ ಮನಸ್ಸಿನಲ್ಲಿ ನನಗೊಂದು ಪುಟ್ಟ ಜಾಗ ನೀಡಿ ಕಾಪಾಡುತ್ತಿರುವ ನೀನು, ನನ್ನ ತುಂಟಾಟ, ಕೋಪ, ಸಹಿಸಿಕೊಂಡು ಹತ್ತಿರವಾಗುತ್ತಿರುವ ಗೆಳೆಯ. ಮುಂಬರುವ ದಿನಗಳಲ್ಲಿ ನಾವಿಬ್ಬರೂ ಗುಬ್ಬಚ್ಚಿಗಳಂತೆ ಜೊತೆ ಜೊತೆಯಾಗಿ ನಡೆಯೋಣ.
ರಮ್ಯ ಬೋಳಂತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.