ಆಫೀಸ್‌ನಲ್ಲಿ ರಿಲ್ಯಾಕ್ಸ್ ಆಗಿ
Team Udayavani, Feb 18, 2020, 5:07 AM IST
ಆಫೀಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ದೀರಾ?ಹಾಗಾದರೆ ಕೆಲವೊಮ್ಮೆ ಸೊಂಟ ನೋವು, ಕುತ್ತಿಗೆ ನೋವು ಕಾಡಿದ ಅನುಭವ ನಿಮಗೂ ಆಗಿರಬಹುದಲ್ಲ?ಇದಕ್ಕೇನು ಪರಿಹಾರ? ತುಂಬ ಸರಳ. ಜೀವನ ರೀತಿಯಲ್ಲಿ ಕೆಲವೊಂದು ಸಣ್ಣ ಪುಟ್ಟ ಬದಲಾವಣೆ, ಸ್ವಲ್ಪ ಓಡಾಟದಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಸ್ವಲ್ಪ ದೂರದಲ್ಲಿ ವಾಹನ ನಿಲುಗಡೆ
ನಿಮ್ಮ ಮನೆ ಅಥವಾ ರೂಮ್ ಕಚೇರಿ ಸಮೀಪದಲ್ಲೇ ಇದ್ದರೆ ಕೆಲವೊಮ್ಮೆ ನಡದೇ ಹೋಗುವುದು ಉತ್ತಮ. ಇನ್ನು ವಾಹನ ಬಳಕೆ ಅನಿವಾರ್ಯ ಎಂದಾದರೆ ಕಚೇರಿಯ ಸ್ಪಲ್ಪ ದೂರದಲ್ಲಿ ಪಾರ್ಕ್ ಮಾಡಿ ನಡೆದು ಹೋಗಿ. ಇದರಿಂದ ಶರೀರಕ್ಕೆ ಸ್ಪಲ್ಪವಾದರೂ ವ್ಯಾಯಾಮ ಲಭಿಸಿದಂತಾಗುತ್ತದೆ.
ಮೆಟ್ಟಿಲು ಬಳಸಿ
ಕಚೇರಿ ಒಳಗೆ ಮತ್ತು ಹೊರಗೆ ಹೋಗುವಾಗ, ಕ್ಯಾಂಟೀನ್ ಹೋಗುವಾಗ ಅಥವಾ ಕೆಲಸಕ್ಕಾಗಿ ಬೇರೆ ಕಡೆ ಹೋಗಬೇಕಾದಾಗ ಲಿಫ್ಟ್ ಅಥವಾ ಎಸ್ಕಲೇಟರ್ ಬಳಸಬೇಡಿ. ಮೆಟ್ಟಿಲು ಬಳಸಿ. ನಿಮಗೆ ಗೊತ್ತಾ?ಮೆಟ್ಟಿಲು ಹತ್ತುವುದು ಮತ್ತು ಇಳಿಯುವುದು ಉತ್ತಮ ವ್ಯಾಯಾಮ ಇದ್ದಂತೆ. ಜಾಗಿಂಗ್, ವಾಕಿಂಗ್‌ಗಿಂತ ಇದು ಉತ್ತಮ ಎನ್ನುತ್ತಾರೆ ತಜ್ಞರು. ಇನ್ನೊಂದು ಮುಖ್ಯ ವಿಚಾರ ಎಂದರೆ ಮೆಟ್ಟಿಲಿನ ಸಹಾಯದಿಂದ ಮಾಡುವ ವ್ಯಾಯಾಮ ಇತ್ತೀಚೆಗೆ ಟ್ರೆಂಡಿಂಗ್ ಆಗುತ್ತಿದೆ.
ಆನ್‌ಲೈನ್ ಬಳಕೆ ಕಡಿಮೆ ಮಾಡಿ
ನಿಮ್ಮ ಸಹದ್ಯೋಗಿಗಳೊಂದಿಗೆ ಮಾತನಾಡಬೇಕೆಂದರೆ, ಸಮಾಲೋಚನೆ ನಡೆಸಲಿದ್ದರೆ ಆನ್‌ಲೈನ್, ಫೋನ್ ಬಳಸುವುದು ಬಿಟ್ಟು ಅವರ ಬಳಿ ಹೋಗಿ ಮಾತನಾಡಿ. ಕುಳಿತುಕೊಂಡೇ ಇರುವ ಸಮಯದಲ್ಲಿ ಇಂತಹ ಸಣ್ಣ ಪುಟ್ಟ ವಾಕಿಂಗ್ ಉತ್ತಮ.
ಬ್ರೇಕ್ ನೀಡಿ
ಪ್ರತಿ ಗಂಟೆಗೊಮ್ಮೆ ಸ್ವಲ್ಪ ವಿಶ್ರಾಂತಿ ಪಡೆಯಿರಿ. ಓಡಾಡಲು ಸಾಧ್ಯವಿಲ್ಲ ಎಂದಾರೆ ಎದ್ದು ನಿಲ್ಲಿ. ಕನಿಷ್ಠ ಹತ್ತು ನಿಮಿಷವಾದರೂ ನಿಂತುಕೊಂಡಿರಿ.
ಸಣ್ಣ ಪುಟ್ಟ ವ್ಯಾಯಾಮ ಇರಲಿ
ಊಟದ ಸಮಯದಲ್ಲಿ ಸಣ್ಣ ಪುಟ್ಟ ವ್ಯಾಯಾಮ ಮಾಡುವುದು ಒಳಿತು ಎನ್ನುತ್ತಾರೆ ಆರೋಗ್ಯ ತಜ್ಞರು. ಉದಾ: ಕೈ, ಕಾಲುಗಳನ್ನು ಒದರುವುದು ಇತ್ಯಾದಿ. ಮೊಬೈಲ್‌ನಲ್ಲಿ ಮಾತನಾಡುವಾಗ ಕುಳಿತುಕೊಳ್ಳದೆ ಅತ್ತ ಇತ್ತ ಓಡಾಡಿ. ನಿಮ್ಮ ಡೆಸ್ಕ್ನಲ್ಲೇ ಊಟ ಮಾಡುವ ಬದಲು ಡೈನಿಂಗ್ ಹಾಲ್ ಅನ್ನು ಬಳಸಿ.
ಸಾಕಷ್ಟು ನೀರು ಕುಡಿಯಿರಿ
ಇದು ಬಹಳ ಮುಖ್ಯ. ಸಾಕಷ್ಟು ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು.
ಕುಳಿತುಕೊಳ್ಳುವ ಭಂಗಿ ಗಮನಿಸಿ
ಇನ್ನೊಂದು ಪ್ರಧಾನ ಅಂಶವೆಂದರೆ ನೀವು ಕುಳಿತುಕೊಳ್ಳುವ ರೀತಿ ಸಮರ್ಪಕವಾಗಿದ್ದರೆ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಬಹುದು. ನೆಟ್ಟಗೆ ಕುಳಿತುಕೊಳ್ಳಬೇಕು ಮತ್ತು ಕುತ್ತಿಗೆ ನೇರವಾಗಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.