ಕೇರ್ನ್ಸ್ ಕಪ್ ಚೆಸ್: ಕೊನೆರು ಹಂಪಿ ಚಾಂಪಿಯನ್
Team Udayavani, Feb 17, 2020, 6:10 AM IST
ಸೇಂಟ್ ಲೂಯಿಸ್ (ಯುಎಸ್ಎ): ವಿಶ್ವ ರ್ಯಾಪಿಡ್ ಚಾಂಪಿಯನ್ ಕೊನೆರು ಹಂಪಿ “ಕೇರ್ನ್ಸ್ ಕಪ್ ಚೆಸ್ ಟೂರ್ನಿ’ಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. 9ನೇ ಹಾಗೂ ಅಂತಿಮ ಸುತ್ತಿನಲ್ಲಿ ಭಾರತದವರೇ ಆದ ದ್ರೋಣವಲ್ಲಿ ಹರಿಕಾ ವಿರುದ್ಧ ಡ್ರಾ ಸಾಧಿಸುವ ಮೂಲಕ ಹಂಪಿ ಈ ಗೌರವಕ್ಕೆ ಪಾತ್ರರಾದರು.
ಈ ಸಾಧನೆಗಾಗಿ ಕೊನೆರು ಹಂಪಿ 5 ಇಎಲ್ಒ ಅಂಕಗಳನ್ನು ಸಂಪಾದಿಸಿದರು. ವಿಶ್ವ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನಕ್ಕೇರಿದರು. ಜತೆಗೆ 45 ಸಾವಿರ ಡಾಲರ್ ಬಹುಮಾನವನ್ನು ತಮ್ಮದಾಗಿಸಿಕೊಂಡರು. 10 ಆಟ ಗಾರ್ತಿಯರ ಈ ಸ್ಪರ್ಧೆಯಲ್ಲಿ ಹಂಪಿ 6 ಅಂಕ ಸಂಪಾದಿಸಿದರು. ವೆಂಜುನ್ ಜು 5.5 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾದರು. 4.5 ಅಂಕ ಹೊಂದಿದ ಹರಿಕಾ 5ನೇ ಸ್ಥಾನ ಪಡೆದರು.
ಇದು 2 ತಿಂಗಳ ಅವಧಿಯಲ್ಲಿ ಕೊನೆರು ಹಂಪಿ ಗೆದ್ದ 2ನೇ ಚೆಸ್ ಪ್ರಶಸ್ತಿ. ಡಿಸೆಂಬರ್ ಕೊನೆಯ ವಾರದಲ್ಲಿ ಅವರು ರ್ಯಾಪಿಡ್ ಚಾಂಪಿಯನ್ ಆಗಿದ್ದರು.
ಹಂಪಿ ಅಭಿಯಾನ
ಅಮೆರಿಕದ 16ರ ಹರೆಯದ ಕ್ಯಾರಿಸ್ಸಾಯಿಪ್ ವಿರುದ್ಧ ಗೆಲ್ಲುವ ಮೂಲಕ ಕೊನೆರು ಹಂಪಿ ಅಭಿಯಾನ ಆರಂಭವಾಗಿತ್ತು. ಆದರೆ ದ್ವಿತೀಯ ಸುತ್ತಿನಲ್ಲಿ ಮರಿಯಾ ಮುಜಿಚುಕ್ ವಿರುದ್ಧ ಆಘಾತಕಾರಿ ಸೋಲುಂಡರು. ಬಳಿಕ ವಿಶ್ವ ಚಾಂಪಿಯನ್ ವೆಂಜುನ್ ಜು, ನಾನಾ ಡಿಝಾಗ್ನಿಜ್, ಅಲೆಕ್ಸಾಂಡ್ರಾ ಕೋಸ್ಟೆನಿಕ್ ವಿರುದ್ಧ ಅಮೋಘ ಪ್ರದರ್ಶನ ನೀಡಿದರು. 8ನೇ ಸುತ್ತಿನಲ್ಲಿ ವೆಲಂಟಿನಾ ಗುನಿನಾ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೆ ಹತ್ತಿರವಾದರು. ಕೊನೆಯ ಸುತ್ತಿನಲ್ಲಿ ಹರಿಕಾ ವಿರುದ್ಧ ಡ್ರಾ ಸಾಧಿಸಿದರೂ ಸಾಕಿತ್ತು. ಇದೇ ಫಲಿತಾಂಶ ಲಭಿಸಿತು.
“ಇಂಥದೊಂದು ಕಠಿನ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದುದಕ್ಕೆ ಭಾರೀ ಸಂತೋಷವಾಗುತ್ತಿದೆ. ಅಲೆಕ್ಸಾಂಡರ್ ಕೋಸ್ಟೆನಿಕ್ ವಿರುದ್ಧದ 7ನೇ ಸುತ್ತಿನ ಸ್ಪರ್ಧೆ ಬಹಳ ಕಠಿನ ವಾಗಿತ್ತು’ ಎಂಬುದಾಗಿ 35ರ ಹರೆಯದ ಹಂಪಿ ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.