ಟ್ರೆಂಟ್ ಬೌಲ್ಟ್ ಫಿಟ್; ಟೆಸ್ಟ್ ತಂಡಕ್ಕೆ ವಾಪಸ್
Team Udayavani, Feb 18, 2020, 6:00 AM IST
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡಿನ ಪ್ರಧಾನ ವೇಗಿ ಟ್ರೆಂಟ್ ಬೌಲ್ಟ್ ಪೂರ್ತಿ ಫಿಟ್ ಆಗುವ ಮೂಲಕ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ. ಪ್ರವಾಸಿ ಭಾರತದೆದುರಿನ ಮೊದಲ ಟೆಸ್ಟ್ ಪಂದ್ಯದ ಮೂಲಕ ಬೌಲ್ಟ್ ಅವರ ರೀ ಎಂಟ್ರಿ ಆಗಲಿದೆ.
ಸೋಮವಾರ ಕಿವೀಸ್ ತನ್ನ ಟೆಸ್ಟ್ ತಂಡವನ್ನು ಅಂತಿಮಗೊಳಿಸಿತು.
ಭಾರತದೆದುರಿನ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ 6 ಅಡಿ, 8 ಇಂಚು ಎತ್ತರದ ವೇಗಿ ಕೈಲ್ ಜಾಮೀಸನ್ ಅವರನ್ನು ಟೆಸ್ಟ್ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಮುಂಬಯಿ ಮೂಲದ ಅಜಾಜ್ ಪಟೇಲ್ 13 ಸದಸ್ಯರ ತಂಡದಲ್ಲಿರುವ ಏಕೈಕ ಸ್ಪಿನ್ನರ್.
ಆಸ್ಟ್ರೇಲಿಯ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ಬಲಗೈ ಮೂಳೆ ಮುರಿತದಿಂದಾಗಿ ಟ್ರೆಂಟ್ ಬೌಲ್ಟ್ ಭಾರತದೆದುರಿನ ಟಿ20 ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿದ್ದರು.
“ಟೆಸ್ಟ್ ಸರಣಿಗೆ ಬೌಲ್ಟ್ ಲಭ್ಯವಾಗುತ್ತಿರುವುದು ಖುಷಿಯ ಸಮಾಚಾರ. ಇದರಿಂದ ತಂಡಕ್ಕೆ ಶಕ್ತಿ ಮತ್ತು ಅನುಭವವೆರಡೂ ಲಭಿಸಲಿದೆ’ ಎಂಬುದಾಗಿ ಆಯ್ಕೆ ಮಂಡಳಿ ಅಧ್ಯಕ್ಷ ಗ್ಯಾರಿ ಸ್ಟೀಡ್ ಹೇಳಿದ್ದಾರೆ.
ಕೈಲ್ ಜಾಮೀಸನ್ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಕಳೆದ ಆಸ್ಟ್ರೇಲಿಯ ವಿರುದ್ಧದ ಸರಣಿ ವೇಳೆ ಲಾಕೀ ಫರ್ಗ್ಯುಸನ್ ಗಾಯಾಳಾದ ಕಾರಣ ಜಾಮೀಸನ್ ಕರೆ ಪಡೆದಿದ್ದರು. ಆದರೆ ಟೆಸ್ಟ್ ಆಡುವ ಅವಕಾಶ ಲಭಿಸಿರಲಿಲ್ಲ, ಭಾರತದೆದುರು ಟೆಸ್ಟ್ ಕ್ಯಾಪ್ ಧರಿಸುವುದರಲ್ಲಿ ಅನುಮಾನವಿಲ್ಲ. ವೆಲ್ಲಿಂಗ್ಟನ್‌ನ ಬೌನ್ಸಿ ಟ್ರ್ಯಾಕ್ ಮೇಲೆ ಜಾಮೀಸನ್ ಜಾದೂ ಮಾಡಲಿದ್ದಾರೆಂಬುದು ಗ್ಯಾರಿ ಸ್ಟೀಡ್ ನಂಬಿಕೆ.
ಮುಂಬಯಿ ಮೂಲದ ಸ್ಪಿನ್ನರ್
ಲೆಗ್ ಸ್ಪಿನ್ನರ್ ಐಶ್ ಸೋಧಿ ಅವರನ್ನು ಮೀರಿಸಿ ಆಯ್ಕೆಯಾಗಿರುವ ಅಜಾಜ್ ಪಟೇಲ್ ಮೂಲತಃ ಮುಂಬಯಿಯವರು. ನ್ಯೂಜಿಲ್ಯಾಂಡಿನ ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬಂದಿರುವುದು ಪಟೇಲ್ ಹೆಗ್ಗಳಿಕೆ.
ಬ್ಯಾಟಿಂಗ್ ಆಲ್‌ರೌಂಡರ್ ಡ್ಯಾರಿಲ್ ಮಿಚೆಲ್ ಕೂಡ ತಂಡದಲ್ಲಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ ಆಡಲಾದ ಇಂಗ್ಲೆಂಡ್ ವಿರುದ್ಧದ ಪದಾರ್ಪಣ ಟೆಸ್ಟ್ ಪಂದ್ಯದಲ್ಲೇ ಮಿಚೆಲ್ ತಮ್ಮ ಬ್ಯಾಟಿಂಗ್ ಪವರ್ ತೋರಿದ್ದರು.
ನ್ಯೂಜಿಲ್ಯಾಂಡ್ ತಂಡ
ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಿಂಡೆಲ್, ಟ್ರೆಂಟ್ ಬೌಲ್ಟ್, ಗ್ರ್ಯಾಂಡ್‌ಹೋಮ್, ಕೈಲ್ ಜಾಮೀಸನ್, ಟಾಮ್ ಲ್ಯಾಥಂ, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬ್ರಾಡ್ಲಿ ವಾಟಿÉಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.