ಕುಂದಗನ್ನಡಕ್ಕೊಂದು ಶಬ್ದಕೋಶ ಆ್ಯಪ್
ದೇಶ-ವಿದೇಶದಲ್ಲಿ ಕುಂದಗನ್ನಡದ ಸವಿ
Team Udayavani, Feb 18, 2020, 5:12 AM IST
ಕುಂದಾಪುರ: ವಿಶಿಷ್ಟ ಶೈಲಿ ಮೂಲಕ ಅತ್ಯಂತ ಕನಿಷ್ಠ ಪದ್ಯಗಳಲ್ಲಿ ವಾಕ್ಯಗಳನ್ನು ರಚಿಸಬಹುದಾದ ಪ್ರಾಚೀನ ಕುಂದಗನ್ನಡಕ್ಕೊಂದು ಶಬ್ದಕೋಶ ಆ್ಯಪ್ ಬಂದಿದೆ. ಕುಂದಗನ್ನಡದ ಪದಕೋಶ ಡಿಜಿಟಲ್ ರೂಪದಲ್ಲಿ ಇದೇ ಮೊದಲು. ದೇಶ ವಿದೇಶದಲ್ಲಿ ಕುಂದಗನ್ನಡದ ವಿಸ್ತಾರ ಸವಿಯಲು ಸಾಧ್ಯವಾಗಿದೆ.
ನೆನಪಿಗಾಗಿ
ಛತ್ರಪತಿ ಶಿವಾಜಿ ಪೋರ್ಚುಗೀಸರಿಂದ ಮುಕ್ತಿ ನೀಡಿ ಬಸ್ರೂರು ಸ್ವಾತಂತ್ರ್ಯ ಪಡೆದು 355 ವರ್ಷಗಳಾದ ನೆನಪಿನಲ್ಲಿ ಕುಂದಗನ್ನಡ ಪದಕೋಶ ಬಿಡುಗಡೆ ಮಾಡಲಾಗಿದ್ದು ಕೋಡಿ ಕಡಲತಡಿಯಲ್ಲಿ ಘೋಷಣೆ ಮಾಡಿ ವೀಡಿಯೋವನ್ನು ಜಾಲತಾಣದಲ್ಲಿ ಹಾಕ ಲಾಗಿದೆ. ಈ ಶಬ್ದಕೋಶವನ್ನು ಹೊರತಂದವರು ಸಿನಿಮಾ ನಿರ್ದೇಶಕ, ಸಂಗೀತ ನಿರ್ದೇಶಕ ರವಿ ಬಸ್ರೂರು.
ಪದಕ್ಕೆ 50 ಪೈಸೆ
ಗೂಗಲ್ ಪ್ಲೇಸ್ಟೋರ್‌ನಿಂದ ಕುಂದ ಕನ್ನಡ ಶಬ್ದಕೋಶ (ಇಂಗ್ಲಿಷ್‌ನಲ್ಲಿ – ಕುಂದ ಕನ್ನಡ ಡಿಕ್ಷನರಿ) ಇಳಿಸಿಕೊಳ್ಳಬಹುದು. ಐದಾರು ತಿಂಗಳ ಪ್ರಯತ್ನದಿಂದ ರವಿ ಬಸೂÅರು ಹಾಗೂ ಗೆಳೆಯರು ಸಿದ್ಧಪಡಿಸಿದ್ದು ಅಂತಿಮ ಹಂತದ ಕೆಲಸ ಇನ್ನೂ ಆಗಿಲ್ಲ. ಕುಂದಗನ್ನಡದಲ್ಲಿ ಅಸಂಖ್ಯ ಪದಲಾಲಿತ್ಯ, ಶಬ್ದ ಭಂಡಾರವಿದೆ. ಆ್ಯಪ್‌ಗೆ
ಇನ್ನಷ್ಟು ಶಬ್ದಗಳನ್ನು ಸೇರಿಸಲು ಅವಕಾಶ ಇದೆ. ಆ್ಯಪ್‌ನ ಬಳಕೆದಾರರು ಪದಕಾಣೆR ನೀಡಬಹುದು. ಕೊಡುಗೆ ನೀಡುವವರಿಗೆ ಪ್ರತೀ ಪದಕ್ಕೆ 50 ಪೈಸೆಯಂತೆ ಪ್ರೋತ್ಸಾಹಧನ ನೀಡಲಾಗುವುದು. 500 ಪದಗಳಾದ ಕೂಡಲೇ ಅವರಿಗೆ ಮೊತ್ತವನ್ನು ತಲುಪಿಸಲಾಗುವುದು. ಇದು ಶಬ್ದಸಂಗ್ರಹವನ್ನು ಇನ್ನಷ್ಟು ಸಮೃದ್ಧಗೊಳಿಸಲು ಸಹಕಾರಿ ಎನ್ನುತ್ತಾರೆ ರವಿ ಬಸ್ರೂರು. ಹಾಗಂತ ಓದುಗರು, ಆ್ಯಪ್ ಬಳಕೆದಾರರು ನೀಡಿದ ಪದಗಳನ್ನೆಲ್ಲಾ ಇಲ್ಲಿ ವಿವೇಚನೆಯಿಲ್ಲದೇ, ಏಕಾಏಕಿ ಪ್ರಕಟಿಸುವುದಿಲ್ಲ. ಪರಿಣತರ ತಂಡ ಪರಿಶೀಲಿಸಿ ಪ್ರಕಟಿಸುತ್ತದೆ. ಅಷ್ಟೇ ಅಲ್ಲದೇ ಕುಂದಗನ್ನಡದ ಪದಕ್ಕೆ ಸರಿಸಮಾನವಾದ ಇಂಗ್ಲಿಷ್ ಪದಗಳನ್ನೂ ಸೇರ್ಪಡೆಗೊಳಿಸಲು ಅವಕಾಶ ಒದಗಿಸಲಾಗಿದೆ.
ಕುಂದಗನ್ನಡದಲ್ಲಿ ಅಸಂಖ್ಯ ಪದಲಾಲಿತ್ಯ, ಶಬ್ದ ಭಂಡಾರವಿದೆ. ಆ್ಯಪ್‌ಗೆ ಇನ್ನಷ್ಟು ಶಬ್ದಗಳನ್ನು ಸೇರಿಸಲು ಅವಕಾಶ ಇದೆ. ಆ್ಯಪ್‌ನ ಬಳಕೆದಾರರು ಪದಕಾಣೆ ನೀಡಬಹುದು.
1. ಬಸ್ರೂರು ಸ್ವಾತಂತ್ರ್ಯ ಪಡೆದು 355 ವರ್ಷಗಳಾದ ನೆನಪಿಗಾಗಿ ಈ ಪದಕೋಶ.
2. ಪದಕಾಣೆR ನೀಡುವ ಬಳಕೆದಾರರಿಗೆ ಪ್ರತೀ ಪದಕ್ಕೆ 50 ಪೈಸೆಯಂತೆ ಪ್ರೋತ್ಸಾಹಧನ.
3.ಆರಂಭವಾಗಿ ಎರಡು ದಿನಗಳಲ್ಲಿ 1,500 ಡೌನ್‌ಲೋಡ್‌ಗಳಾಗಿವೆ.
4.ಈಗಾಗಲೇ 4 ಸಾವಿರ ಪದಗಳು ಶಬ್ದಕೋಶ ಸೇರಿವೆ.
ಪ್ರವೇಶಿಕೆ
ಡೌನ್‌ಲೋಡ್ ಬಳಿಕ; ಸಂಕ್ಷಿಪ್ತ ಕುಂದ ಕನ್ನಡ ನಿಘಂಟು ಇದು ನಿಮ್ಮಿಂದ ಮಾತ್ರ ಸಾಧ್ಯ, ಇದ್ ರವಿ ಬಸ್ರೂರ್ ಅವ್ರದ್ ಸಣ್¡ ಕನ್ಸ್, ಒಳಬನಿ ಎಂದು ಕುಂದಾಪ್ರ ಕನ್ನಡದಲ್ಲೇ ಬರೆಯಲಾಗಿದೆ. “ಮುಂದ್ವರುಕ್ ಒಳಬನಿ’ ಎಂಬಲ್ಲಿ ಮೊಬೈಲ್ ಸಂಖ್ಯೆ ಹಾಕಿದಾಗ “ಒಂದ್ ಸಲದ್ ಗುಪ್ತ ಅಂಕಿ ಕಳ್ಸಿ’ ಎಂದು ಒಟಿಪಿ ಬೇಡುತ್ತದೆ. “ನಮ್ ಮನಿಗೆ ಸ್ವಾಗತ, ಅಡ್ಡಿಲ್ಲ ಒಡಿನೆ’ ಎಂದು ಮುಂದುವರಿದರೆ “ನಿಮ್ ಬಗ್ ತಿಳ್ಸಿ’ ಎಂದು “ಹೆಸ್ರ್, ಇ ಮೆಯ್ಲ, ಚಿತ್ರ’ ಕೇಳುತ್ತದೆ. ಇಂಗ್ಲಿಷ್‌ನಲ್ಲಿ ಬರೆದರೆ “ಬರುಕೆ ಕನ್ನಡ ಬಳ್ಸಿ ಒಡಿನೆ’ ಅನ್ನುತ್ತದೆ! “ಸೇರ್ಸದ್ ಸಮ ಆಯ್ತ್’ ಎಂಬಲ್ಲಿಗೆ ಪದಕೋಶ ತೆರೆದುಕೊಳ್ಳುತ್ತದೆ.
ಯಾಕಾಗಿ ಪದಕೋಶ?
ಕುಂದಾಪ್ರ ಕನ್ನಡದ ಅನೇಕ ಶಬ್ದಗಳು ಇಂದು ವಾಡಿಕೆಯ ಬಳಕೆಯಿಂದ ಮರೆಯಾಗುತ್ತಿವೆ. ಈಗಿನವರು ವರ್ತಮಾನದ ಕನ್ನಡದ ಬಳಕೆಯನ್ನೇ ಅವಲಂಬಿಸಿದ ಕಾರಣ ಅನೇಕ ಪದಗಳು ಹಿರಿಯರಿಗಷ್ಟೇ ಸೀಮಿತವಾಗಿವೆ. ಹಾಗಾಗಿ ಪದಸಂಪತ್ತು ಅಳಿಸಿ ಹೋಗಬಾರದು ಎಂದು ಈ ಪ್ರಯತ್ನ ಮಾಡಲಾಗಿದೆ. ಇದರಲ್ಲಿ ಟಾಪ್ ಬಳಕೆದಾರರು, ಹೆಚ್ಚು ಪದ ನೀಡಿದವರು ವಿಭಾಗ ಮಾಡಲಾಗಿದೆ.
ಪುಸ್ತಕ ಬರಲಿದೆ
ಇದಿನ್ನೂ ಪ್ರಾಥಮಿಕ ಹಂತ, ಮೊದಲು ಇಂಗ್ಲಿಷನ್ನು ಆಶ್ರಯಿಸುತ್ತಿರಲಿಲ್ಲ. ಪ್ರತಿಯೊಂದಕ್ಕೂ ನಮ್ಮಲ್ಲಿ ಕುಂದಕನ್ನಡದ ಪದಗಳಿರುತ್ತಿದ್ದವು. ಕ್ರಮಶಃ ನಾವು ಆಂಗ್ಲವನ್ನು ನೆಚ್ಚಿಕೊಂಡೆವು, ಕನ್ನಡದ ಬಳಕೆ ಹೆಚ್ಚಿಸಿಕೊಂಡೆವು. ಕುಂದಗನ್ನಡದ ಪದಗಳ ಬಳಕೆ ಕಡಿಮೆಯಾಯಿತು. ಕುಂದಾಪುರ ಭಾಷೆ ಎಂದಲ್ಲ, ಪ್ರತಿ ಭಾಷೆಗೂ ಅದರದ್ದೇ ಆದ ಸೌಂದರ್ಯವಿದೆ, ಭಾಷೆಯ ಜತೆಗೇ ಒಂದು ಇತಿಹಾಸ, ಮಾಹಿತಿ, ಕಥೆ ಇದೆ. ಇದೊಂದು ದಾಖಲೆಯಾಗಲಿ ಎಂದು ಇಂತಹ ಪ್ರಯತ್ನ ಎನ್ನುವ ರವಿ ಬಸ್ರೂರ್, 50 ಸಾವಿರ , 1 ಲಕ್ಷ ಪದಗಳಾದ ಬಳಿಕ ಪುಸ್ತಕ ರೂಪದಲ್ಲಿ ಹೊರತರುವ ಯೋಚನೆಯಿದೆ. ಪದಗಳ ಜತೆ ಅದನ್ನು ಸೂಚಿಸುವ ಚಿತ್ರಗಳನ್ನು ಅಪ್‌ಲೋಡ್ ಮಾಡಿದವರಿಗೆ 1 ರೂ. ಪ್ರೋತ್ಸಾಹ ಕೊಡುವ ಯೋಜನೆಯೂ ಇದೆ ಎನ್ನುತ್ತಾರೆ. ಆರಂಭವಾಗಿ ಎರಡು ದಿನಗಳಲ್ಲಿ 1,500 ಡೌನ್‌ಲೋಡ್‌ಗಳಾಗಿದ್ದು 4 ಸಾವಿರ ಪದಗಳು ಖಜಾನೆಗೆ ಸೇರಿವೆ.
ಯೋಜನೆಯಿದೆ
ಕುಂದಾಪ್ರ ಕನ್ನಡ ಕೈಗೆಟಕುವಂತಿರಬೇಕು. ಆ್ಯಪ್‌ನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಚನೆಯಿದೆ. ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನಮ್ಮ ಭಾಷೆಯ ಬಳಕೆಗೆ ಕೀಳರಿಮೆ ಬೇಡ, ಅದರ ವಿಸ್ತಾರ, ವ್ಯಾಪ್ತಿ, ಆಳ ಎಷ್ಟು ಎಂದು ಎಲ್ಲರಿಗೂ ತಿಳಿಯಲಿ ಎಂದು ನಮ್ಮ ತಂಡದ ಈ ಕಿರು ಪ್ರಯತ್ನ.
-ರವಿ ಬಸ್ರೂರ್, ನಿರ್ದೇಶಕ
ಡೌನ್‌ಲೋಡ್ ಮಾಡಲು ಈ ಲಿಂಕ್ ಬಳಸಿ.
https://play.google.com/store/apps/details?id=com.bats.kundakannada
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.