ವಿಶ್ವದರ್ಜೆ ಕರಾವಳಿ ಬಂದರು ನಗರ ನಿರ್ಮಾಣ ಪ್ರಸ್ತಾವಕ್ಕೆ ಎಳ್ಳುನೀರು?

ಒಂದೇ ಕಡೆ 6 ನಗರಗಳ ನಿರ್ಮಾಣ ಆಟೋಮೋಟಿವ್‌ ಕ್ಲಸ್ಟರ್‌, ವ್ಯಾಪಾರ ನಗರ ನಿರ್ಮಾಣ

Team Udayavani, Feb 18, 2020, 7:06 AM IST

ben-44

ಬೆಂಗಳೂರು: ದೇಶದ ಕರಾವಳಿ ಪ್ರದೇಶಗಳಿಗೆ ಮಾದರಿ ಆಗಬಹುದಾದ ಮಹತ್ವದ ಯೋಜನೆಯೊಂದನ್ನು ಚಿಗುರುವ ಮೊದಲೇ ಚಿವುಟಿ ಹಾಕುವ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಕರಾವಳಿ ಪ್ರದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು “ಕರಾವಳಿ ಪ್ರದೇಶದಲ್ಲಿ ವಿಶ್ವದರ್ಜೆಯ ಸಮುದಾಯ
ಬಂದರು ನಗರಗಳ ನಿರ್ಮಾಣ’ (ವರ್ಲ್ಡ್ಕ್ಲಾಸ್‌ ಕ್ಲಸ್ಟರ್‌ ಪೋರ್ಟ್‌ ಸಿಟೀಸ್‌)ಕ್ಕೆ ಸಂಬಂಧಿಸಿದಂತೆ ಈ
ಹಿಂದೆ ಯೋಜನೆ ರೂಪಿಸಲಾಗಿತ್ತು. ಅದರಡಿ ಒಂದೇ ಭಾಗದಲ್ಲಿ ಸುಮಾರು ಆರು ಸಿಟಿಗಳನ್ನು
ನಿರ್ಮಿಸಿ, ಸಮಗ್ರ ಅಭಿವೃದಿಟಛಿಪಡಿಸುವ ಪರಿಕಲ್ಪನೆ ಇದಾಗಿತ್ತು. ಇದಕ್ಕೆ ಕರ್ನಾಟಕ ಜ್ಞಾನ ಆಯೋಗ
ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ, ಈಗ ಅದು ವಿನಾಕಾರಣ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿದೆ. ಈ
ಮೂಲಕ ಕರಾವಳಿ ಭಾಗ ತನ್ನದಲ್ಲದ ತಪ್ಪಿಗೆ ಅವಕಾಶ ವಂಚಿತವಾಗುತ್ತಿದೆ.

ಸ್ಥಳೀಯ ಭೌಗೋಳಿಕ ವಿನ್ಯಾಸ ಮತ್ತು ಲಭ್ಯವಿರುವ ಸಂಪನ್ಮೂಲ ಇವೆರಡನ್ನೂ ಆಧರಿಸಿ ಜ್ಞಾನ ನಗರ, ವ್ಯಾಪಾರ ಮತ್ತು ಹಣಕಾಸು ನಗರ, ಹಾರ್ಡ್‌ವೇರ್‌ ತಂತ್ರಜ್ಞಾನ ನಗರ, ಅಂತರರಾಷ್ಟ್ರೀಯ ಆರೋಗ್ಯ ನಗರ, ಆಟೋಮೋಟಿವ್‌ ಕೈಗಾರಿಕಾ ಕ್ಲಸ್ಟರ್‌, ಮುಂದುವರಿದ ಉತ್ಪಾದನಾ ಕೈಗಾರಿಕೆಗಳ ಕ್ಲಸ್ಟರ್‌ ಸೇರಿದಂತೆ ಆರು ನಗರಗಳನ್ನು ನಿರ್ಮಿಸಲು ಈ ಯೋಜನೆ ಅಡಿ ಉದ್ದೇಶಿಸಲಾಗಿತ್ತು. ಒಂದು
ವೇಳೆ ಇದು ಸಾಕಾರಗೊಂಡರೆ ಒಟ್ಟಾರೆ ಕರಾವಳಿಯ ಆರ್ಥಿಕತೆಗೆ ದಿಕ್ಸೂಚಿ ಆಗಲಿದೆ ಎಂದು ತಜ್ಞರು
ಅಭಿಪ್ರಾಯಪಟ್ಟಿದ್ದರು.

ತಾತ್ಕಾಲಿಕ ತಡೆಯ ನೆಪ: ಈ ಹಿನ್ನೆಲೆಯಲ್ಲಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಮೂಲ
ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕರ್ನಾಟಕ) ಕಳುಹಿಸಲಾಯಿತು. ಇದಕ್ಕಾಗಿ 1.20 ಕೋಟಿ ರೂ.ಗಳ
ಅವಶ್ಯಕತೆ ಇದೆ ಎಂಬ ಪ್ರತಿಕ್ರಿಯೆ ಬಂದಿತ್ತು. ಕಡಿಮೆ ವೆಚ್ಚದಲ್ಲಿ ಯೋಜನೆ ತಯಾರಿಸುವ ದೃಷ್ಟಿಯಿಂದ
ಇನ್ನೇನು ಟೆಂಡರ್‌ ಕರೆಯಲು ಮೂಲಸೌಕರ್ಯ ಇಲಾಖೆ ಸಿದಟಛಿತೆ ನಡೆಸಿತ್ತು. ಅಷ್ಟರಲ್ಲಿ ವಿಧಾನಸಭೆ ಚುನಾವಣೆ ಬಂದಿತು. ನಂತರ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಪರಿಣಾಮ ಮತ್ತೂಂದು ಸುತ್ತಿನ “ಅನುಮೋದನೆ ಪ್ರಕ್ರಿಯೆ’ ನಡೆಯಿತು. ಕೊನೆ ಗಳಿಗೆಯಲ್ಲಿ ಅಂದಿನ ಮುಖ್ಯಮಂತ್ರಿಗಳು ಇದಕ್ಕೆ “ತಾತ್ಕಾಲಿಕ ತಡೆ’ ನೀಡಿದರು.

ಈ ಮಧ್ಯೆ ಮತ್ತೆ ಸರ್ಕಾರ ಬದಲಾಯ್ತು. ಈಗ ಹಿಂದಿನ “ತಾತ್ಕಾಲಿಕ ತಡೆ’ಯನ್ನೇ ನೆಪವಾಗಿಟ್ಟುಕೊಂಡು,
ಯೋಜನೆಯನ್ನು ನೇಪಥ್ಯಕ್ಕೆ ಸರಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದಿಟಛಿ ಇಲಾಖೆ ಹಿರಿಯ ಅಧಿಕಾರಿ “ಉದಯವಾಣಿ’ಗೆ ಮಾಹಿತಿ ನೀಡಿದರು.

ವಿಶೇಷ ಆರ್ಥಿಕ ಕ್ಲಸ್ಟರ್‌ಗಳಲ್ಲಿ ಭೌಗೋಳಿಕವಾಗಿ ಸಮೀಪ ಇರುವ ಕಂಪೆನಿಗಳು, ವಿಶ್ವವಿದ್ಯಾಲಯಗಳು,
ಸರ್ಕಾರಿ ಮತ್ತು ಸರ್ಕಾರೇತರ ವಿವಿಧ ಸಂಸ್ಥೆಗಳು ಯಾವೊಂದು ನಿರ್ದಿಷ್ಟ ಕ್ಷೇತ್ರದಲ್ಲಿ ಒಟ್ಟಾಗಿ
ಕಾರ್ಯನಿರ್ವಹಿಸುತ್ತವೆ. ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುವುದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಅಭಿವೃದ್ಧಿ, ಸಂವಹನ ಮತ್ತು ಸಾರಿಗೆ ವೆಚ್ಚ ಕಡಿತದಂತಹ ಹಲವು ಅನುಕೂಲಗಳು ಆಗುತ್ತವೆ.

ಇತರ ದೇಶಗಳಲ್ಲಿದೆ: ಅಮೆರಿಕದ ಸಿಲಿಕಾನ್‌ ವ್ಯಾಲಿ, ಸ್ಯಾನ್‌ ಡಿಯಾಗೊ, ಜಪಾನಿನ ಟೊಯೊಟಾ ಕ್ಲಸ್ಟರ್‌, ಇಂಗ್ಲೆಂಡ್‌ನ‌ ಕೇಂಬ್ರಿಡ್ಜ್ ಟೆಕ್ನೋಪೋಲ್‌, ಫ್ರಾನ್ಸ್‌ನ ಆಂಟ್‌ ಪೊಲಿಸ್‌, ಸ್ವೀಡನ್‌ನ ಕ್ರಿಸ್ಟ ಮತ್ತಿತರ ಅಭಿವೃದಿಟಛಿ ಹೊಂದಿದ ರಾಷ್ಟ್ರಗಳಲ್ಲಿ ಈ ರೀತಿಯ ಕ್ಲಸ್ಟರ್‌ ಮಾದರಿ ಅನುಸರಿಸಲಾಗುತ್ತಿದೆ. ಕರಾವಳಿ ಭಾಗದಲ್ಲೂ ಮೂರೂ ಜಿಲ್ಲೆಗಳ 30-40 ಕಿ.ಮೀ. ವ್ಯಾಪ್ತಿಯಲ್ಲೇ ಈ ಕ್ಲಸ್ಟರ್‌ಗಳನ್ನು ನಿರ್ಮಿಸಲು ಅವಕಾಶ ಇದೆ. ಇದು ಭವಿಷ್ಯದಲ್ಲಿ ಆ ಭಾಗದ ಆರ್ಥಿಕತೆ ಇಂಧನ ಆಗಬಲ್ಲದು ಎಂದು ರಾಜೀವ್‌ಗಾಂಧಿ ಯುವಶಕ್ತಿ ಮತ್ತು ಗ್ರಾಮೀಣಾಭಿವೃದಿಟಛಿ ಸಂಘಟನೆ ಅಧ್ಯಕ್ಷ ಹಾಗೂ ಯೋಜನೆ ರೂವಾರಿ ಮೋಹನದಾಸ್‌ ಹೆಗ್ಡೆ ತಿಳಿಸುತ್ತಾರೆ.

ಅಂಕೋಲಾದಲ್ಲಿ ವೃದ್ಧಿ ಕೇಂದ್ರ: “ಉದ್ದೇಶಿತ ಈ ಯೋಜನೆ ಕೈಬಿಟ್ಟಿಲ್ಲ. ಇದನ್ನೂ ಒಳಗೊಂಡಂತೆ ರಾಷ್ಟ್ರೀಯ ಹೆದ್ದಾರಿ, ಬಂದರು, ವಿಮಾನ ನಿಲ್ದಾಣ ಸೇರಿ ಕರಾವಳಿ  ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಅಂಕೋಲ ಬಳಿವೃದ್ಧಿ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲೂ ಈ ಅಂಶ
ಇದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌ ಸ್ಪಷ್ಟಪಡಿಸುತ್ತಾರೆ.

ಸಂಪನ್ಮೂಲ ಹೇಗೆ?: ಯೋಜನೆ ಅನುಷ್ಠಾನಕ್ಕಾಗಿ ಸುಮಾರು 200 ಎಕರೆಯಷ್ಟು ಕಂದಾಯ ಭೂಮಿ ಬೇಕಾಗುತ್ತದೆ. ಇದಕ್ಕಿಂತ ಹೆಚ್ಚು ಭೂಮಿ ಕರಾವಳಿ ಭಾಗದಲ್ಲಿ ಲಭ್ಯವಿದೆ. ಇದನ್ನು ಖಾಸಗಿ-ಸಾರ್ವಜನಿಕ ಸಹ ಭಾಗಿತ್ವ (ಪಿಪಿಪಿ)ದಲ್ಲಿ ಜಾರಿಗೊಳಿಸಬಹುದು. ಡೆವಲಪರ್, ನಿರ್ಮಾಣ ಕಂಪೆನಿಗಳು, ಲೇವಾದೇವಿದಾರರು, ಬ್ಯಾಂಕ್‌ಗಳು ಇದಕ್ಕೆ ಹೂಡಿಕೆ ಮಾಡಲು ಮುಂದೆಬರುತ್ತವೆ. ಅಲ್ಲದೆ, ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕಾರ್ಪಸ್‌ ಫ‌ಂಡ್‌ ತೆಗೆದಿಡಬಹುದು. ಅಲ್ಲದೆ, ವಿದೇಶಿ ಕಂಪೆನಿಗಳಿಂದಲೂ ಸಂಪನ್ಮೂಲ ಕ್ರೋಡೀಕರಣ ಮಾಡಬಹುದು. ಆದರೆ, ಪಶ್ಚಿಮಘಟ್ಟ ಸೇರಿದಂತೆ
ಪರಿಸರಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಇದನ್ನು ಅನುಷ್ಠಾನಗೊಳಿಸಬೇಕಾಗುತ್ತದೆ. ಇದಕ್ಕಾಗಿ ಕೆಲವು ಮಾನದಂಡಗಳನ್ನು ರೂಪಿಸಬೇಕು.

ಜ್ಞಾನ ನಗರ ನಿರ್ಮಾಣ ಉಲ್ಲೇಖ
ಮದ್ದೂರು ಮತ್ತು ಚನ್ನಪಟ್ಟಣ ನಡುವೆ “ನಾಲೆಜ್‌ ಸಿಟಿ’ (ಜ್ಞಾನ ನಗರ) ನಿರ್ಮಾಣದ ಬಗ್ಗೆಯೂ ಪ್ರಸ್ತಾವಿತ
ಯೋಜನೆಯಲ್ಲಿ ಉಲ್ಲೇಖೀಸಲಾಗಿದೆ. ಒಂದು ದೊಡ್ಡ ಕ್ಯಾಂಪಸ್‌ನಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಸಂಪನ್ಮೂಲ ಕೇಂದ್ರಗಳನ್ನು ತಂದು, ಅಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಪೂರಕ ವಾತಾವರಣ ಕಲ್ಪಿಸಲಾಗುತ್ತದೆ. ಇದಕ್ಕೆ ಸುಮಾರು 30-40 ಎಕರೆ ಜಾಗ ಬೇಕಾಗುತ್ತದೆ.

ಎಲ್ಲೆಲ್ಲಿ ಯಾವ ಸಿಟಿ?
??ಉಡುಪಿ-ಮಂಗಳೂರು ನಡುವೆ ಟ್ರೇಡ್‌ ಮತ್ತು ಫೈನಾನ್ಸ್‌ ಸಿಟಿ
??ಹಾರ್ಡ್‌ವೇರ್‌ ಟೆಕ್‌ ಸಿಟಿ
??ಆಟೋಮೋಟಿವ್‌ ಇಂಡಸ್ಟ್ರಿಯಲ್‌ ಕ್ಲಸ್ಟರ್‌
??ಅಡ್ವಾನ್ಸ್ಡ್ ಮ್ಯಾನ್ಯುಫ್ಯಾಕ್ಚರಿಂಗ್‌ ಇಂಡಸ್ಟ್ರೀಸ್‌ ಕ್ಲಸ್ಟರ್‌ – ಕಾಪು ಬೀಚ್‌ ಬಳಿ
??ಇಂಟರ್‌ನ್ಯಾಷನಲ್‌ ಹೆಲ್ತ್‌ ಸಿಟಿ ಮಣಿಪಾಲ ಅಥವಾ ಉಡುಪಿ

● ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.